Kantara: 400 ಕೋಟಿ ರೂ. ಗಳಿಸಿದ ಕಾಂತಾರ: ಇನ್ನು ನಿಂತಿಲ್ಲ ಶಿವನ ಹವಾ

Nov 24, 2022, 10:56 AM IST

ಕಾಂತಾರ ಸಿನಿಮಾ ಬಿಡುಗಡೆಯಾಗಿ 50 ದಿನಗಳು ಪೂರೈಸಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕನ್ನಡದಲ್ಲಿ ಇಲ್ಲಿಯವರೆಗೂ 170 ಕೋಟಿ ರೂ. ಬಾಚಿರುವ ಕಾಂತಾರ, ತೆಲುಗಿನಲ್ಲಿ 62 ಕೋಟಿ, ತಮಿಳುನಾಡಿನಲ್ಲಿ 15.70 ಕೋಟಿ ಹಾಗೂ ಕೇರಳದಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಕಾಂತಾರ ಉತ್ತರ ಭಾರತದ ಮಂದಿ ಕಣ್ಮನೆ ಸೆಳೆದಿದ್ದು, ಹಿಂದಿಯಲ್ಲಿ ಬರೋಬ್ಬರಿ 96 ಕೋಟಿ ರೂಪಾಯಿ ಆದಾಯ ಬಂದಿದೆ. ವಿದೇಶದ ಬಾಕ್ಸ್ ಆಫೀಸ್'ನಲ್ಲಿ 44.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಒಟ್ಟು 400.90 ಕೋಟಿ ಗಳಿಸಿದೆ.

ಪಿಂಕ್ ಟ್ಯೂಬ್ ಬಾಡಿಕಾನ್ ಡ್ರೆಸ್‌ನಲ್ಲಿ ಊರ್ವಶಿ ರೌಟೇಲಾ ಮಾದಕ ಲುಕ್‌ ವೈರಲ್‌