ಟ್ರೈಲರ್​ ರಿಲೀಸ್ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಮೈ ಮೇಲೆ ಭೈರಾದೇವಿ ಆಹ್ವಾನ!

Sep 23, 2024, 4:30 PM IST

ಸ್ಯಾಂಡಲ್​​ವುಡ್​​​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಒಳ್ಳೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಸ್ವೀಟಿ ನನ್ನ ಜೋಡಿ, ರವಿ ಬೋಪಣ್ಣ ಸಿನಿಮಾಗಳ ಬಳಿಕ ಈ ಅಭಿಸಾರಿಕೆ ಮತ್ತೆ ದರ್ಶನ ಕೊಡುತ್ತಿರೋದು ಭೈರಾದೇವಿ ಆಗಿದೆ. ಇದೀಗ ಭೈರಾದೇವಿ ಟ್ರೈಲರ್​ ರಿಲೀಸ್ ಆಗಿದೆ. ರಾಧಿಕಾ ಸ್ವೀಟಿ ಅಂತ ಮಾತ್ರ ಅಂದ್ಕೋಳ್ಳಬೇಡಿ ಉಗ್ರರೂಪಿಣಿ, ದುಷ್ಟರ ಚಂಡಾಡೋ ಕಾಳಿ ಅಂತ ಘರ್ಜಿಸಿದ್ದಾರೆ.. ಹಾಗಾದ್ರೆ ಭೈರಾದೇವಿ ಟ್ರೈಲರ್ ಹೇಗಿದೆ..? ನೋಡೋಣ ಬನ್ನಿ. ಭೈರಾದೇವಿ ಸಿನಿಮಾದ ಹೈಲೆಟ್ ರಾಧಿಕಾ ರೋಲ್.. ರಾಧಿಕಾ ಈ ಸಿನಿಮಾದಲ್ಲಿ ಅಘೋರಿಯಾಗಿ ನಟಿಸಿದ್ದಾರೆ. ಕಾಳಿಯ ಅವತಾರ ಎತ್ತಿದ್ದಾರೆ. ವಿಲನ್ ರೋಲ್​​ನಲ್ಲಿ ಮಿಂಚಿರೋ ರವಿಶಂಕರ್​​​​​ ಕೂಡ ಅಘೋರಿ ಆಗಿದ್ದಾರೆ. 

ಅದಕ್ಕೂ ಹೆಚ್ಚಾಗಿ ರಾಧಿಕಾ ಕುಮಾರಸ್ವಾಮಿ ಇಲ್ಲಿ ಭೈರಾದೇವಿ ಆಗಿಯೇ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ. ಟ್ರೈಲರ್​​​​ನ ಪ್ರತಿ ಫ್ರೇಮ್ನಲ್ಲೂ ಭೈರಾದೇವಿಯ ವೈಬ್ರೇಷನ್ ಕಾಣಿಸುತ್ತದೆ. ಹೌದು, ಈ ಒಂದು ಅಭಿಪ್ರಾಯ ಈಗಲೇ ಮೂಡುತ್ತಿದೆ. ಸಿನಿಮಾದ ಟ್ರೈಲರ್ ನೋಡಿದಾಗ ಎಲ್ಲರಲ್ಲೂ ಒಂದು ವೈಬ್ರೇಟ್ ಶುರುವಾಗುತ್ತೆ. ರಾಧಿಕಾ ಕುಮಾರಸ್ವಾಮಿ ರಮೇಶ್ ಅರವಿಂದ್, ರವಿಶಂಕರ್​ ಅಭಿನಯ ಬೇರೆ ಲೆವೆಲ್​​ನಲ್ಲಿ ಕಿಕ್ ಕೊಡುತ್ತಿದೆ. ಪೊಲೀಸ್ ಆಫೀಸರ್ ಆಗಿ ಒಂದು ಹಂತಕ್ಕೆ ಇಲ್ಲಿ ಕಾಣಿಸಿಕೊಂಡ್ರೆ, ಮೈಮೇಲೆ ಪ್ರೇತ ಬಂದ ರೀತಿ ಮಾಡಿರೋ ಅಭಿನಯ ನಿಜಕ್ಕೂ ಶಾಕ್ ಕೊಡುತ್ತದೆ. 

ಭೈರಾದೇವಿ ಟ್ರೈಲರ್ ರಿಲೀಸ್​ ಕಾರ್ಯಕ್ರಮ ಬೆಂಗಳೂರಿನ ಮಾಲ್ ಒಂದರಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್​ ಭೈರಾದೇವಿಯನ್ನ ವೀಕ್​ ಎಂಡ್​ ವಿತ್ ರಮೇಶ್​ ಸ್ಟೈಲ್​ನಲ್ಲೇ ಆಹ್ವಾನಿಸಿದ್ರು. ಆ ಕಡೆ ರಮೇಶ್ ಅರವಿಂದ್​ ಮಾತು ಮುಗಿಯುತ್ತಿದ್ದಂತೆ ಸ್ಟೇಜ್​ ಏರಿದ ಸ್ವೀಟಿ ರಾಧಿಕಾ ಮೈ ಮೇಲೆ ಭೈರಾದೇವಿ ಆಹ್ವಾನ ಆಗಿತ್ತು. ಹಾಗಂತ ಇದು ನಿಜ ಅಲ್ಲ. ಅಲ್ಲಿದ್ದ ಪ್ರೇಕ್ಷಕರನ್ನ ರಂಜಿಸೋಕೆ ರಾಧಿಕಾ ಭೈರಾದೇವಿಯ ಹಾಗೆ ನಟಿಸಿದ್ರು. ಬಳಿಕ ತನ್ನ ಸಿನಿಮಾದ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಕೊಟ್ರು. ಭೈರಾದೇವಿಯಲ್ಲಿ ಭೂತ-ಪ್ರೇಮತಗಳ ಕಥೆ ಇದೆ. ಅದನ್ನ ಪರಿಹರಿಸೋಕೆ ಅಘೋರಿಗಳ ಮೊರೆ ಹೋಗೋ ಚಿತ್ರಣವೂ ಇದೆ. 

ಇದನ್ನ ಸರಿ ಮಾಡೋಕೆ ಅಘೋರಿಗಳ ಎಂಟ್ರಿ ಆದ್ಮೇಲೆ ಆಗೋ ಅಬ್ಬರವೂ ಇಲ್ಲಿ ವಿಶೇಷವಾಗಿಯೇ ಇದೆ. ಭೈರಾದೇವಿ ಸಿನಿಮಾದಲ್ಲಿ ಹಾರರ್ ಕಂಟೆಂಟ್ ಜಾಸ್ತಿನೇ ಇದೆ. ಅದರ ಜೊತೆಗೆ ದೇವರ ಮೇಲೆ ಭಕ್ತಿ ಬರೋ ಮ್ಯಾಟರ್ ಕೂಡ ಇದೆ. ಎಲ್ಲವೂ ಇರೋ ಈ ಸಿನಿಮಾ ಒಂದು ಭರವಸೆಯಂತೂ ಮೂಡಿಸಿದೆ. ಡೈರೆಕ್ಟರ್ ಶ್ರೀಜೈ ಆಕ್ಷನ್ ಕಟ್ ಹೇಳಿರೋ ಭೈರಾದೇವಿಗೆ ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನೀಡಿದ್ದಾರೆ. ಭೈರಾದೇವಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಅಕ್ಟೋಬರ್​ 3ನೇ ತಾರೀಕು ಸಿನಿಮಾ ತೆರೆ ಮೇಲೆ ಬರಲಿದೆ. ರಾಧಿಕಾ ಕುಮಾರಸ್ವಾಮಿ ಅವರೇ ನಿರ್ಮಿಸಿರೋ ಸಿನಿಮಾ ಹೇಗಿರಲಿದೆ ಅನ್ನೋ ಕುತೂಹಲ ಹೆರಚ್ಚಾಗಿರೋದಂತು ಸುಳ್ಳಲ್ಲ.