ನೋವಿನಲ್ಲೂ ನಗುವ ಕಂಡ ಮನಸ್ಸು, ಮಗು ಕೂರಿಸಿಕೊಂಡೆ ತಾಯಿ ಜೊಮ್ಯಾಟೋ ಡೆಲಿವರಿ!

Published : Nov 15, 2024, 06:14 PM IST
ನೋವಿನಲ್ಲೂ ನಗುವ ಕಂಡ ಮನಸ್ಸು, ಮಗು ಕೂರಿಸಿಕೊಂಡೆ ತಾಯಿ ಜೊಮ್ಯಾಟೋ ಡೆಲಿವರಿ!

ಸಾರಾಂಶ

 ಬದಕು ಸಾಗಿಸಲು ಕೆಲಸ ಬೇಕು, ಆದರೆ ಪುಟಾಣಿ ಮಗುವನ್ನು ಬಿಟ್ಟು ಹೋಗಿ ಕೆಲಸ ಮಾಡುವ ಪರಿಸ್ಥಿತಿ ಮನೆಯಲ್ಲಿ ಇಲ್ಲ. ಮಗುವನ್ನೂ ಕರೆದುಕೊಂಡು ಬಂದು ಕೆಲಸ ಮಾಡುವ ಉದ್ಯೋಗ ಎಲ್ಲೂ ಸಿಗಲಿಲ್ಲ. ಕೊನೆಗೆ ಆರಿಸಿಕೊಂಡಿದ್ದು ಜೊಮ್ಯಾಟೋ ಡೆಲಿವರಿ. ಬೈಕ್ ಟ್ಯಾಂಕ್ ಮೇಲೆ ಮಗು ಕೂರಿಸಿಕೊಂಡು ತಾಯಿಯ ಡೆಲವರಿ ಮಾತ್ರವಲ್ಲ ಬದುಕಿನ ಬಂಡಿಯ ಸ್ಪೂರ್ತಿಯ ಘಟನೆ ಇಲ್ಲಿದೆ.  

ರಾಜ್‌ಕೋಟ್(ನ.15) ಬದುಕು ಸಾಗಲು ಹಣ ಬೇಕು. ಅಗತ್ಯತೆ ಪೂರೈಸಲು ಆದಾಯ ಇರಬೇಕು. ಅದೆಷ್ಟೋ ಮಂದಿ ಒಂದು ಹೊತ್ತಿನ ಊಟಕ್ಕಾಗಿ ಪಡುವ ಕಷ್ಟ ಅಷ್ಟಿಷ್ಟಲ್ಲ.  ಬದುಕಿನಲ್ಲಿ ಎದುರಾಗುವ ತಿರುವು ಹಲವರಿಗೆ ಖುಷಿ ನೀಡಿದರೆ ಮತ್ತೆ ಕೆಲವರಿಗೆ ನೋವು ನೀಡಿದೆ. ಸಂಕಷ್ಟ,ಬಡತನ ಸೇರಿದಂತೆ ಸವಾಲು ಒಂದೆಡೆರಡಲ್ಲ. ಎಲ್ಲರಂತೆ ಬೆಳಗ್ಗೆ ಎದ್ದು ನೇರವಾಗಿ ಕಚೇರಿಗೆ ತೆರಳಿ ಉದ್ಯೋಗ ಮಾಡುವ ಸ್ವಾತಂತ್ರ್ಯ ಈಕೆಗೆ ಇರಲಿಲ್ಲ. ಕಾರಣ ಪುಟಾಣಿ ಮಗುವಿದೆ. ಮಗುವನ್ನು ಬಿಟ್ಟು ಹೋಗುವ ಪರಿಸ್ಥಿತಿ ಮನೆಯಲ್ಲಿಲ್ಲ. ಮಗುವನ್ನು ಕರೆದುಕೊಂಡೇ ಕಚೇರಿಗೆ ಹೋಗುವ ಉದ್ಯೋಗವಿಲ್ಲ. ಹೀಗಾಗಿ ಆದಾಯವೂ ಬೇಕು, ಮಗವೂ ಜೊತೆಗಿರಬೇಕು, ಇದಕ್ಕಾಗಿ ಈ ಮಹಿಳೆ ಜೋಮ್ಯಾಟೋ ಡೆಲಿವರಿ ಎಜೆಂಟ್ ಉದ್ಯೋಗ ಆರಿಸಿಕೊಂಡಿದ್ದಾಳೆ. ಮಗುವನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಪ್ರತಿ ದಿನ ಗ್ರಾಹಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಾಳೆ. ಆರಂಭದಲ್ಲಿ ಕಷ್ಟವಾದರೂ, ಬದುಕು ಸಾಗುತ್ತಿದೆ. ಸವಾಲುಗಳು ಎದುರಾದರು ಖುಷಿಯ ಗೆರೆಗಳು ಮೂಡುತ್ತಿದೆ. ಇದು ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಜೊಮ್ಯಾಟೋ ಡೆಲಿವರಿ ಎಜೆಂಟ್ ತಾಯಿಯ ಸ್ಪೂರ್ತಿಯ ಕತೆ.ಎಕ್ಸ್

ವಿಶಾಲ್ ಅನ್ನೋ ಕೆಂಟೆಂಟ್ ಕ್ರಿಯೇಟರ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯೊಬ್ಬರು ಬೈಕ್‌ನಲ್ಲಿ ಜೊಮ್ಯಾಟೋ ಫುಡ್ ಬ್ಯಾಗ್ ಮೂಲಕ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಮುಂಭಾಗದಿಂದ ನೋಡಿದರೆ ಮಹಿಳೆ ಮಾತ್ರವಲ್ಲ, ಬೈಕ್ ಟ್ಯಾಂಕ್ ಮೇಲೆ ಪುಟಾಣಿ ಮಗು ಕೂಡ ಇದೆ. ಮಗುವನ್ನು ಜೊತೆಯಲ್ಲಿ ಕೂರಿಸಿಕೊಂಡು ಗ್ರಾಹಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಾಳೆ ಈ ತಾಯಿ.

ಬಳಕೆದಾರನ ಸಲಹೆಗೆ ಜೊಮ್ಯಾಟೋ ಸಿಇಒ ಫುಲ್ ಖುಷ್, ಭರ್ಜರಿ ಉದ್ಯೋಗದ ಆಫರ್!

ಬದುಕು ಸಾಗಿಸಲು ಕೆಲಸ ಅನಿವಾರ್ಯ. ಆದರೆ ದೊಡ್ಡ ಕುಟುಂಬ ಈಕೆಯದಲ್ಲ. ಮಗುವಿನ ಕಾರಣದಿಂದ ಉತ್ತಮ ವಿದ್ಯಾಭ್ಯಾಸವಿದ್ದರೂ ತನ್ನ ಬೇಡಿಕೆಗೆ ತಕ್ಕಂತೆ ಕೆಲಸ ಸಿಗಲಿಲ್ಲ. ಈಕೆ ಹೊಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪೂರೈಸಿದ್ದಾಳೆ. ಮಗುವನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತೇನೆ ಎಂದಾಗ ಹಲವರು ನಿರಾಕರಿಸಿದರು. ಕೆಲಸ ಸಿಗಲಿಲ್ಲ. ಹೀಗಾಗಿ ಮಗುವನ್ನು ಜೊತೆಗೆ ಕರೆದುಕೊಂಡು ಹೋಗಿ ಕೆಲಸ ಮಾಡುವಂತೆ ಉದ್ಯೋಗ ಕುರಿತು ಚಿಂತಿಸುತ್ತಿರುವಾಗ ಜೋಮ್ಯಾಟೋ ಡೆಲಿವರಿ ಯಾಕೆ ಮಾಡಬಾರದು ಎಂದು ತೋಚಿತ್ತು ಎಂದು ಈ ಮಹಿಳೆ ಹೇಳಿದ್ದಾರೆ.

 

 

ಬೈಕ್ ರೈಡಿಂಗ್ ಮೊದಲೇ ಗೊತ್ತಿತ್ತು. ಮಗುವನ್ನು ಕೂರಿಸಿಕೊಂಡು ಗ್ರಾಹಕರಿಗೆ ಫುಡ್ ಡೆಲಿವರಿ ಮಾಡುತ್ತೇನೆ. ಆರಂಭದಲ್ಲಿ ಕಷ್ಟವಾಗುತ್ತಿತ್ತು. ಮಗುವಿಗೂ ಕಷ್ಟ ಆಗುತ್ತಿತ್ತು. ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ದೊಡ್ಡ ಕೆಲಸವಾಗಲಿ, ಸಣ್ಣದಾಗಲಿ ಸರಿದಾರಿಯಲ್ಲಿದ್ದರೆ ಸಾಕು ಎಂದು ಮಹಿಳೆ ಹೇಳಿದ್ದಾರೆ.  ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಜೀವನದಲ್ಲಿ ಕೈಚೆಲ್ಲಿ ಕೂರುವ ಹಲವರಿಗೆ ಸ್ಪೂರ್ತಿಯಾಗಿದೆ ಎಂದಿದ್ದಾರೆ. 

ಬ್ಲಿಂಕಿಟ್, ಝೆಪ್ಟೋ ಸೇರಿ ಆನ್‌ಲೈನ್ ಡೆಲಿವರಿಗೆ ಬೆಂಗಳೂರು ಏಳನೀರು ಮಾರಾಟಗಾರನ ಚಾಲೆಂಜ್!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..