ಸ್ಟೇಟಸ್, ವಾಲ್‌ ಪೇಪರ್‌ ಗೆ ಮಕ್ಕಳ ಫೋಟೋ ಹಾಕ್ತಿದ್ರೆ ಎಚ್ಚರ, ಕಾಡುತ್ತೆ ಗ್ರಹದೋಷ!

By Roopa Hegde  |  First Published Nov 15, 2024, 6:26 PM IST

ಮಕ್ಕಳ ಫೋಟೋವನ್ನು ನೀವೂ ಸ್ಟೇಟಸ್, ವಾಲ್ಪೇಪರ್ಗೆ ಹಾಕ್ತೀರಾ? ಇನ್ಮುಂದೆ ಫೋಟೋ ಪೋಸ್ಟ್ ಮಾಡುವ ಮುನ್ನ ಸ್ವಲ್ಪ ಯೋಚಿಸಿ. ಆರೋಗ್ಯಕರ ಮಗು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡ್ಬೇಡಿ. 
 


ಮಕ್ಕಳು (Children) ಹುಟ್ಟುತ್ತಿದ್ದಂತೆ ಪಾಲಕರು ಮಾಡುವ ಮೊದಲ ಕೆಲಸ ಅವರ ಫೋಟೋ ಕ್ಲಿಕ್ಕಿಸೋದು. ಇಷ್ಟಾದ್ರೆ ಮುಗೀಲಿಲ್ಲ, ಮಕ್ಕಳ ಫೋಟೋ ಮೊಬೈಲ್ ವಾಲ್ ಪೇಪರ್ (Mobile wallpaper) ಮೇಲೆ   ರಾರಾಜಿಸುತ್ತದೆ. ಬಹುತೇಕ ಎಲ್ಲ ಪಾಲಕರು ತಮ್ಮ ಮಕ್ಕಳ ಫೋಟೋವನ್ನು ಸ್ಟೇಟಸ್ (Status)ಗೆ ಹಾಕ್ತಿರುತ್ತಾರೆ. ಮಕ್ಕಳ ಸುಂದರ ಕ್ಷಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಪಾಲಕರು, ಸ್ಟೇಟಸ್ಗೆ ಹಾಕಿ ಖುಷಿ ಪಡ್ತಾರೆ. ತಮ್ಮ ಮಕ್ಕಳನ್ನು ಆಪ್ತರು, ಸ್ನೇಹಿತರು, ಕುಟುಂಬಸ್ಥರು ನೋಡ್ಲಿ ಎನ್ನುವ ಕಾರಣಕ್ಕೆ ವಿಡಿಯೋ, ಫೋಟೋ ಹಂಚಿಕೊಳ್ತಾರೆ. ಆದ್ರೆ ನಿಮ್ಮ, ನಿಮ್ಮವರ ಖುಷಿಯಾಗಿ ನೀವು ಮೊಬೈಲ್ಗೆ ಹಾಕುವ ಮಕ್ಕಳ ಫೋಟೋ (Photo), ಮಕ್ಕಳಿಗೆ ಅಪಾಯಕಾರಿ ಎಂಬುದು ನಿಮಗೆ ಗೊತ್ತಾ? 

ಮಕ್ಕಳ ಫೋಟೋ ಸ್ಟೇಟಸ್ಗೆ ಹಾಕ್ತಿದ್ದಂತೆ ಮಕ್ಕಳ ಕಿರಿಕಿರಿ, ಹಠ, ಅಳು ಹೆಚ್ಚಾಗೋದನ್ನು ನೀವು ಗಮನಿಸಿರಬಹುದು. ಕೆಲವರು, ಮಕ್ಕಳ ಫೋಟೋ ಸ್ಟೇಟಸ್ಗೆ ಹಾಕ್ತಿದ್ದಂತೆ ಅವರಿಗೆ ದೃಷ್ಟಿಯಾಗುತ್ತೆ ಅಂತ ಹೇಳೋದನ್ನು ನೀವು ಕೇಳಿರಬಹುದು. ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಲು, ಆರೋಗ್ಯದಲ್ಲಿ ಏರುಪೇರಾಗಲು ಕಾರಣ ದೃಷ್ಟಿ ಮಾತ್ರವಲ್ಲ, ರಾಹು ದೋಷ.

Latest Videos

undefined

ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ವಾಸಿಸುವುದರಿಂದ ಪ್ರಗತಿ ಖಂಡಿತ

ಮೊಬೈಲ್ ರಾಹು (Rahu) ವಿನ ಜೊತೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ. ಮಕ್ಕಳು ತುಂಬಾ ಮುದ್ದಾಗಿರುತ್ತಾರೆ. ಚಂದ್ರ (moon)ನಂತೆ ಹೊಳೆಯುತ್ತಿರುತ್ತಾರೆ. ಸೂರ್ಯ (Sun)ನಂತೆ ಪ್ರಕಾಶವಾಗಿರುತ್ತಾರೆ. ಮಕ್ಕಳನ್ನು ಸೂರ್ಯ – ಚಂದ್ರನಿಗೆ ಹೋಲಿಕೆ ಮಾಡಲಾಗುತ್ತದೆ. ನೀವು ಮೊಬೈಲ್ಗೆ ಮಕ್ಕಳ ಫೋಟೋ ಹಾಕ್ತಿದ್ದಂತೆ ರಾಹು – ಸೂರ್ಯ,ರಾಹು- ಚಂದ್ರನ ಸಮಾಗಮನವಾಗುತ್ತದೆ. ಇದರಿಂದ ಗ್ರಹಣ ಹಾಗೂ ಅಂಗಾರಕ ಯೋಗ ಸೃಷ್ಟಿಯಾಗುತ್ತದೆ. ಆಗ ಮಕ್ಕಳು ಕಿರಿಕಿರಿ ಮಾಡಲು ಶುರು ಮಾಡ್ತಾರೆ. ಸಣ್ಣಪುಟ್ಟ ವಿಷ್ಯಕ್ಕೆ ಅಳ್ತಾರೆ. ಅವರ ಆರೋಗ್ಯದಲ್ಲೂ ಏರುಪೇರಾಗುತ್ತದೆ. ಅವರಿಗೆ ಹಸಿವು ಕಡಿಮೆಯಾಗುತ್ತದೆ. ರಾತ್ರಿ ನಿದ್ರೆಯಲ್ಲಿ ಬೆಚ್ಚಿ ಬಿದ್ದು ಅಳಲು ಶುರು ಮಾಡ್ತಾರೆ. ಪಾಲಕರ ಜೊತೆ ಗಲಾಟೆ ಮಾಡುವ ಮಕ್ಕಳು, ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಹಾಳು ಮಾಡಲು ಮುಂದಾಗ್ತಾರೆ. 

ಮಕ್ಕಳ ಮೇಲೆ ನಕಾರಾತ್ಮಕ ಶಕ್ತಿ (negative energy) ಪ್ರಭಾವ : ನೀವು ಸ್ಟೇಟಸ್ ಅಥವಾ ಸೋಶಿಯಲ್ ಮೀಡಿಯಾಕ್ಕೆ ಮಕ್ಕಳ ಫೋಟೋ ಅಥವಾ ವಿಡಿಯೋ ಹಾಕುವುದು ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳ ವಿಡಿಯೋ ನೋಡುವವರ ಶಕ್ತಿ ಮಕ್ಕಳಿಗೆ ಬರುತ್ತದೆ. ನಕಾರಾತ್ಮಕ ಶಕ್ತಿಯುಳ್ಳವರು ಮಕ್ಕಳ ಫೋಟೋ ನೋಡಿ ಅಸೂಯೆಪಡುತ್ತಾರೆ ಇಲ್ಲವೆ ಅಸಮಾಧಾನಗೊಳ್ಳುತ್ತಾರೆ. ಇದ್ರಿಂದ ಮಕ್ಕಳ ಆರೋಗ್ಯ ಹದಗೆಡುತ್ತದೆ. ಆಟವಾಡ್ತಿದ್ದ ಮಕ್ಕಳು ಅಚಾನಕ್ ಅನಾರೋಗ್ಯಕ್ಕೆ ಒಳಗಾದ್ರೆ ಅದನ್ನು ದೃಷ್ಟಿದೋಷ ಎನ್ನಬಹುದು. 

ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಜೋಡಿ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಇದೇ ಕಾರಣಕ್ಕೆ ತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲ್ಲ ಎನ್ನಲಾಗಿದೆ. ನೀವೂ ನಿಮ್ಮ ಮಕ್ಕಳ ಫೋಟೋ, ವಿಡಿಯೋವನ್ನು ಆಗಾಗ ಹಾಕ್ತಿದ್ದು, ಅವರು ನೆಗೆಟಿವ್ ಶಕ್ತಿ ಪ್ರಭಾವಕ್ಕೆ ಒಳಗಾಗಿದ್ದರೆ ಕೆಲ ಉಪಾಯ ಮಾಡ್ಬುದು.

ಮುಂದಿನ ವರ್ಷ ಈ 4 ರಾಶಿಗೆ ಶನಿಯಿಂದ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ

ದೃಷ್ಟಿ ದೋಷ ತಪ್ಪಿಸಲು ಹೀಗೆ ಮಾಡಿ : ಶನಿವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ, ಹನುಮಂತನ ಭುಜದ ಮೇಲಿರುವ ಕುಂಕುಮವನ್ನು ತಂದು ಅದನ್ನು ಮಕ್ಕಳಿಗೆ ಹಚ್ಚಿ. ಮಕ್ಕಳಿಗೆ ಆಗಾಗ ದೃಷ್ಟಿ ತೆಗೆಯಬೇಕು. ಕೆಂಪು ಮೆಣಸು, ಸಾಸಿವೆ ಕಾಳು, ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದುಕೊಂಡು, ಮಕ್ಕಳಿಗೆ ಮೂರು ಸುತ್ತು ಸುತ್ತಿ, ಅದನ್ನು ಬೆಂಕಿಗೆ ಹಾಕಬೇಕು. ಮನೆಯ ಮುಖ್ಯದ್ವಾರದ ಮೇಲೆ ಮಕ್ಕಳನ್ನು ಕುಳಿಸಿ, ಸ್ವಲ್ಪ ನೀರನ್ನು ಅವರ ಮುಖಕ್ಕೆ ಚಿಮುಕಿಸಿ. ಒಂದು ಮುಷ್ಠಿ ಉಪ್ಪನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ, ತಲೆಯಿಂದ ಕಾಲಿನವರೆಗೆ ಈ ನೀರು ಬೀಳುವಂತೆ ಮಾಡಿ. ನಂತ್ರ ಸಾಮಾನ್ಯ ನೀರಿನಲ್ಲಿ ಸ್ನಾನ ಮಾಡಿಸಿ. ಮಕ್ಕಳ ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಬೇಕು. ಕೈ ಅಥವಾ ಕುತ್ತಿಗೆ ಕೂಡ ನೀವು ಕಪ್ಪು ದಾರವನ್ನು ಕಟ್ಟಬಹುದು. 
 

click me!