Priyanka Upendra: 'ಡಿಟೆಕ್ಟೀವ್ ತೀಕ್ಷ್ಣ' ಫಸ್ಟ್‌ಲುಕ್ ಲಾಂಚ್ ಮಾಡಿದ ಉಪೇಂದ್ರ!

May 13, 2022, 8:28 PM IST

ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಇದೀಗ ಐವತ್ತನೇ ಸಿನಿಮಾಗೆ ಕಾಲಿಟ್ಟಿದ್ದಾರೆ. 'ಡಿಟೆಕ್ಟೀವ್ ತೀಕ್ಷ್ಣ' (Detective Teekshna) ಹೆಸರಿನ ಈ ಚಿತ್ರವು ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದ್ದು, ರಿಯಲ್ ಸ್ಟಾರ್ ಉಪೇಂದ್ರ ಚಿತ್ರದ ಮೋಷನ್ ಪೋಸ್ಟರ್‌ನ್ನು (Motion Poster) ಲಾಂಚ್ ಮಾಡಿದ್ದಾರೆ. ನಂತರ ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಚಿತ್ರ 50, ವಯಸ್ಸು 20. ಎಷ್ಟು ಬೇಗ ಕಾಲ ಓಡುತ್ತಿದೆ ಅಂದ್ರೆ ಈಗಾಗಲೇ 50 ಮುಗಿಸಿದ್ದೀರಾ. ನಾನು 53 ಮುಗಿಸಿ 54ರಲ್ಲಿ ಇದ್ದೇನೆ. ನನಗಿಂತ ವೇಗವಾಗಿ ಹೋಗ್ತಿದ್ದೀರಾ. ಶೀರ್ಷಿಕೆ ಚೆನ್ನಾಗಿದೆ. 

ಉಪ್ಪಿ ವರ್ಮಾ ಜೋಡಿಯ I AM R..! ವಿಭಿನ್ನ ಅವತಾರದಲ್ಲಿ ರಿಯಲ್ ಸ್ಟಾರ್

ಸಂಗೀತ ಪ್ರಾಮಿಸಿಂಗ್ ಆಗಿದೆ. ಗೆಟಪ್ ವಿಭಿನ್ನವಾಗಿದೆ. ತೀಕ್ಷ ಎಂದರೆ ಶಾರ್ಪ್. ಕಥೆನೂ ಶಾರ್ಪ್ ಆಗಿದೆ. ಬೇಗನೆ ರಿಲೀಸ್ ಮಾಡಿ. ಕಥೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಂತ ಹೇಳಿದರು. ಚಿತ್ರಕ್ಕೆ ಕಥೆ ಮುಖ್ಯವಾಗಿರುತ್ತದೆ. ಏನೆಲ್ಲಾ ಬದಲಾವಣೆ ಆಗಬಹುದು. ಕ್ಯಾಮೆರಾ, ಮೇಕಿಂಗ್ ಬೇರೆ ತರಹ ಬರಬಹುದು. ಆದರೆ ಕಥೆ ಎನ್ನುವುದು ಬಹಳ ಬಹಳ ಮುಖ್ಯ. ಹಾಲಿವುಡ್‌ದಲ್ಲಿ 'ನೋ ಟ್ರಸ್ಟ್ ಸ್ಟಾರ್, ಟ್ರಸ್ಟ್ ಟೇಲ್' ಎಂದು ಹೇಳಿದ್ದಾರೆ. ಅದನ್ನು ನಂಬಿಕೊಂಡು ಸಿನಿಮಾ ಮಾಡಿ. ನಿಮ್ಮ ಬರವಣಿಗೆ ಮುಖ್ಯ. ಅದನ್ನು ಖಂಡಿತ ಚೆನ್ನಾಗಿ ಮಾಡಿರುತ್ತಿರಾ ಅಂತ ನಂಬಿಕೆ ಇದೆ. ಒಳ್ಳೆಯದಾಗಲಿ ಎಂದು ಉಪೇಂದ್ರ ತಿಳಿಸಿದರು. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies