ಈ ಪದಗಳಲ್ಲೆ ಅಡಗಿದೆಯಂತೆ ವಿಕ್ರಾಂತ್ ರೋಣ ಕತೆ..!

Jun 25, 2022, 6:04 PM IST

ಎಲ್ಲ ಕಡೆ ಯಕ್ಕಾ ಸಕ್ಕಾ ಸೌಂಡ್ ಮಾಡ್ತಿರೋ ಸಿನಿಮಾ ವಿಕ್ರಾಂತ್ ರೋಣ (Vikrant Rona) ಸುದೀಪ್ ಇದ್ದಾರೆ ಅಂದ್ರೆ ಒಂದು ಸೆನ್ಸೇಷನ್ ಕ್ರಿಯೇಟ್ ಆಗುತ್ತೆ. ಅದನ್ನ ಡಬಲ್, ತ್ರಿಬಲ್ ಲೆವೆಲ್ಲಿಗೆ ಕರ್ಕೊಂಡ್ ಹೋಗಿರೋದು ಅನೂಪ್ ಭಂಡಾರಿ. ಆ ಗುಮ್ಮನ ಕಥೆಯ ಟ್ರೇಲರ್ ಗಮ್ಮತ್ತನ್ನೇ ಕ್ರಿಯೇಟ್ ಮಾಡಿದೆ. 

ಟ್ರೇಲರ್ ನೋಡಿದವರ ಪ್ರಕಾರ ಸುದೀಪ್ ಈ ಸಿನಿಮಾದಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದಾರೆ. ಅವರ ಪ್ರಕಾರ ವಿಕ್ರಾಂತ್ ಬೇರೆ. ರೋಣನೇ ಬೇರೆ. ಮೊದಲಿಗೆ ಎಲ್ಲರೂ ರೋಣ ಅನ್ನೋದು ಊರು. ಆ ಊರಿಗೆ ವಿಕ್ರಾಂತ್ ಬರ್ತಾನೆ ಅಂದ್ಕೊಂಡಿದ್ರು. ಟ್ರೇಲರ್ ನೋಡಿದವರು ಅದನ್ನ ಚೇಂಜ್ ಮಾಡ್ಕೊಂಡಿದ್ದಾರೆ.

Vikrant Rona: ಕಿಚ್ಚ, ಅನೂಪ್ ಸೃಷ್ಟಿಯ ಹೊಸ ಪ್ರಪಂಚದ ದರ್ಶನ ಪಡೆದ ಫ್ಯಾನ್ಸ್ ಫಿದಾ

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಅನ್ನೋದನ್ನ ಡೈರೆಕ್ಟರ್ ಹೇಳಿ ಆಗಿದೆ. ಅನೂಪ್ ನಿರ್ದೇಶನದ ರಂಗಿತರಂಗ ನೋಡಿದವರು, ವಿಕ್ರಾಂತ್ ರೋಣ ಚಿತ್ರ ರಂಗಿತರಂಗದ ಮುಂದುವರೆದ ಭಾಗದಂತಿರುತ್ತೆ ಅಂತಿದ್ದಾರೆ. ನಿರೂಪ್ ಭಂಡಾರಿ ಕೂಡಾ ಇರೋದ್ರಿಂದ ಈ ಕಲ್ಪನೆಯನ್ನೂ ನೋಡಿಕೊಳ್ಳಬಹುದು. ಜೊತೆಗೆ ರಂಗಿತರಂಗದಲ್ಲಿ ಬಳಸಿರೋ ಮ್ಯೂಸಿಕ್ ಟ್ರ್ಯಾಕ್ ಅಂದ್ರೆ ಬಿಜಿಎಂ.. ಇಲ್ಲಿ ಡೈಲಾಗ್ ಆಗಿದೆ..

ಗರ ಗರ ಗರ ಗಗ್ಗರ ಜರ್ಬ ಪಿರನಲ್ಕುರಿ ನೆತ್ತರ ಪರ್ಬ.. ಈ ಲೈನಿನಲ್ಲೇ ಇಡೀ ಕಥೆ ಇದೆ. ಡಣ್ಣಾನ ಡಣ್ಣಾನ ಹಾಡಿನಲ್ಲಿಯೂ ಈ ಲೈನ್ ಇದೆ. ಹೀಗಾಗಿ ಇದು ಹಾರರ್ ಸಬ್ಜೆಕ್ಟ್ ರಬೇಕು ಅಂತಿದ್ದಾರೆ.