Actress Radhika Kumaraswamy: 'ಜುಗ್ನು' ಹಾಡಿಗೆ ಡ್ಯಾನ್ಸ್‌ ಮಾಡಿದ ಸ್ಯಾಂಡಲ್‌ವುಡ್‌ ಸ್ವೀಟಿ

Jan 6, 2022, 1:18 PM IST

ಸ್ಯಾಂಡಲ್‌ವುಡ್‌ನ ಆಲ್ ಟೈಮ್ ಗೊಂಬೆ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಅನ್ನೋದು ಗೊತ್ತೇ ಇರೋಲ್ಲಾ. ಈ ಸ್ವೀಟಿ ದಿಢೀರ್ ಅಂತ ಪ್ರತ್ಯಕ್ಷವಾಗಿ ದಿಢೀರ್ ಅಂತ ಕಣ್ಮರೆಯಾಗಿ ಬಿಡುತ್ತಾರೆ. ಇದೀಗ ಸಾಗರದ ತೀರದಲ್ಲಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ (Dance) ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ತಾಣ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದಾರೆ. ರ್‍ಯಾಪರ್ ಬಾದ್‌ಶಾನ 'ಜುಗ್ನು' (Jugnu) ಹಾಡಿಗೆ ಅವರು ಮಸ್ತ್‌ ಡ್ಯಾನ್ಸ್‌ ಮಾಡಿದ್ದು, ಅಭಿಮಾನಿ ಬಳಗದಲ್ಲಿ ರಾಧಿಕಾ ಸೊಂಟ ಬಳಕಿಸೋ ವೀಡಿಯೋ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. 

ಹೈಸ್ಕೂಲ್‌ ವಿದ್ಯಾರ್ಥಿನಿ ಶಮಿಕಾ ಕುಮಾರಸ್ವಾಮಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ?

ಹೊಸ ವರ್ಷದ (New Year) ಸಂದರ್ಭದಲ್ಲಿ ಈ ರಾಧಿಕಾ ನೃತ್ಯ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸದ್ಯ ರಾಧಿಕಾ ಕಾಂಟ್ರಾಕ್ಟ್ (Contract), ರಾಜೇಂದ್ರ ಪೊನ್ನಪ್ಪ (Rajendra Ponappa) ಹಾಗೂ ಭೈರಾದೇವಿ (Bhairadevi) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಇನ್ನು ರಾಧಿಕಾ ಇತ್ತೀಚೆಗೆ ನಡೆದ ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಕೆಂಗುಲಾಬಿ ಬಣ್ಣದ ಕಾಸ್ಟ್ಯೂಮ್​ ಧರಿಸಿ ಭರ್ಜರಿ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಹಲವು ಹಾಡುಗಳಿಗೆ ಅವರು ಮನಮೋಹಕವಾಗಿ ಹೆಜ್ಜೆ ಹಾಕಿದ್ದಾರೆ. ಕೊನೆಯದಾಗಿ ರಾಧಿಕಾ ನಟಿಸಿದ ಚಿತ್ರ 'ದಮಯಂತಿ' (Damayanthi) 2019ರಲ್ಲಿ ಬಿಡುಗಡೆಯಾಗಿತ್ತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment