Chiranjeevi Sarja: ಅಣ್ಣನ ಕೊನೆ ಚಿತ್ರಕ್ಕೆ ಧ್ವನಿ ಕೊಡಲಿದ್ದಾರೆ ಆಕ್ಷನ್ ಪ್ರಿನ್ಸ್

Jan 7, 2022, 12:46 PM IST

ಸ್ಯಾಂಡಲ್‌ವುಡ್‌ನ(Sandalwood) ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ ಕೊನೆಯ ಚಿತ್ರ 'ರಾಜಮಾರ್ತಾಂಡ' (RajaMarthanda). ಈಗಾಗಲೇ ಈ ಚಿತ್ರ ಟೀಸರ್​ (Teaser) ಮೂಲಕ ಭಾರಿ ಹೈಪ್​ ಕೂಡ ಸೃಷ್ಟಿ ಮಾಡಿದೆ. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುಕ್ಕೂ ಮುನ್ನವೇ ಚಿರಂಜೀವಿ ಸರ್ಜಾ ವಿಧಿವಶರಾದರು. ಇದೀಗ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು! ಒಂದೂವರೆ ವರ್ಷದಿಂದ 'ರಾಜಮಾರ್ತಾಂಡ' ಸಿನಿಮಾ ಪೋಸ್ಟ್ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿತ್ತು. ಈಗ ಸಿನಿಮಾದ ಚಟುವಟಿಕೆಗಳು ಜೋರಾಗಿದ್ದು, ಅಭಿಮಾನಿಗಳಿಗೆ ಸಿನಿಮಾ ತೋರಿಸಲು ಚಿತ್ರತಂಡ ಮುಂದಾಗಿದೆ.

Dhruva Sarja: ಸಂಕ್ರಾಂತಿ ಬಳಿಕ ಸೆಟ್ಟೇರಲಿದೆ ಜೋಗಿ ಪ್ರೇಮ್-ಆಕ್ಷನ್ ಪ್ರಿನ್ಸ್ ಹೊಸ ಚಿತ್ರ!

ಇನ್ನು ಚಿರಂಜೀವಿ ಸರ್ಜಾ ನಿಧನದ ಬಳಿಕ ಸಹೋದರ ಧ್ರುವ ಸರ್ಜಾ (Dhruva Sarja) 'ರಾಜಮಾರ್ತಾಂಡ' ಚಿತ್ರದ  ನಿರ್ಮಾಪಕರಿಗೆ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ (Dubbing) ಮಾಡುವುದಾಗಿ ಹೇಳಿದ್ದರು. ಅಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ  ಚಿತ್ರಕ್ಕೆ ಡಬ್ಬಿಂಗ್ ಮಾಡಲಿದ್ದರಂತೆ. ಹಾಗೂ ಶೀಘ್ರದಲ್ಲೇ ಈ ಚಿತ್ರವನ್ನು ಸೆನ್ಸಾರ್​ ಮಂಡಳಿ ಸದಸ್ಯರು ವೀಕ್ಷಿಸಲಿದ್ದಾರೆ. ಕೆ.ರಾಮ್‌ ನಾರಾಯಣ್‌ (K.Ramnarayan) ನಿರ್ದೇಶನದ ಈ ಚಿತ್ರಕ್ಕೆ ಶಿವಕುಮಾರ್‌ ಎನ್‌ ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ಚಿರು ಜೊತೆ 'ಅಜಿತ್‌' (Ajith) ಸಿನಿಮಾ ಮಾಡಿದ್ದರು. ಇದೊಂದು ಆ್ಯಕ್ಷನ್‌ ಜೊತೆಗೆ ಸೆಂಟಿಮೆಂಟ್‌ ಅಂಶಗಳೊಂದಿಗೆ ಸಾಗುವ ಸಿನಿಮಾವಾಗಿದ್ದು, ತನ್ನ ಸಾಮರ್ಥ್ಯದಿಂದ ಏನು ಬೇಕಾದರೂ ಪಡೆದುಕೊಳ್ಳುವ ವ್ಯಕ್ತಿಯಾಗಿ ಚಿರು ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment