Chikkanna in Yash house: ಚಿಕ್ಕಣ್ಣನ ಬೆನ್ನು ತಟ್ಟಿದ ರಾಜಾಹುಲಿ..! ಯಶ್ ಮನೆಯಲ್ಲಿ ಉಪಾಧ್ಯಕ್ಷ ಬ್ರೇಕ್ ಫಾಸ್ಟ್..!

Jan 30, 2024, 10:44 AM IST

ನಟ ಚಿಕ್ಕಣ್ಣ ಈಗ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಉಪಾಧ್ಯಕ್ಷ(Upadhyaksha movie) ಆಗಿದ್ದಾರೆ. ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾ ಬೆಳ್ಳಿತೆರೆ ಮೇಲೆ ಬಂದು ಸಿನಿ ಪ್ರೇಕ್ಷಕರನ್ನ ರಂಜಿಸುತ್ತಿದೆ. ಹೀಗಾಗಿ ನಟ ಯಶ್(Yash) ದಂಪತಿ ಉಪಾಧ್ಯಕ್ಷ ಚಿಕ್ಕಣ್ಣನನ್ನ ನಿನ್ನೆ ಬೆಳ್ಳಂ ಬೆಳಗ್ಗೆ ತನ್ನ ಮನೆಗೆ ಕರೆದಿದ್ರು. ಯಶ್ ಮನೆಯಲ್ಲಿ ಚಿಕ್ಕಣ್ಣ(Chikkanna) ಬ್ರೇಕ್ ಫಾಸ್ಟ್(Break Fast) ಮಾಡಿದ್ದಾರೆ. ಬಳಿಕ ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾ ಗೆಲ್ಲಲಿ ಅಂತ ಯಶ್ ಹರಿಸಿದ್ದಾರೆ. ಚಿಕ್ಕಣ್ಣನಿಗೆ ಉಪಾಧ್ಯಕ್ಷ ನಾಯಕಿ ಮಲೈಕಾ ಸಾಥ್ ನೀಡಿದ್ದಾರೆ.  ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತೆರೆ ಮೇಲೆ ನಟ ಚಿಕ್ಕಣ್ಣ ಹಾಗೂ ಯಶ್ ಮಧ್ಯೆ ಎಂಥಾ ಬಾಂಧವ್ಯ ಇತ್ತು ಅಂದ್ರೆ 2011ರಿಂದ 2015 ವರೆಗೆ ಬಂದಿರೋ ಯಶ್ ಸಿನಿಮಾಗಳಲ್ಲಿ ಚಿಕ್ಕಣ್ಣ ಇರಲೇ ಬೇಕಿತ್ತು. ಇಡೀ ಸಿನಿಮಾದಲ್ಲಿ ಹೀರೋ ಯಶ್ ಜೊತೆ ಜೊತೆಗೆ ಚಿಕ್ಕಣ್ಣನ ರೋಲ್ ರನ್ ಆಗುತ್ತಿತ್ತು. ಹೀಗಾಗಿ ನಾಲ್ಕೇ ವರ್ಷದಲ್ಲಿ ಚಿಕ್ಕಣ್ಣ ಯಶ್ ಜೊತೆ ನಾಲ್ಕು ಸಿನಿಮಾದಲ್ಲಿ ನಟಿಸಿದ್ರು.

ನಟ ಚಿಕ್ಕಣ್ಣ್ಣ ಬೆಳ್ಳಿತೆರೆಗೆ ಡೆಬ್ಯೂ ಆಗಿದ್ದು, ಯಶ್ ಸಿನಿಮಾದಿಂದ. ಚಿಕ್ಕಣ್ಣಗೆ ಹಾಸ್ಯನಟ ಇಮೇಜ್ ತಂದುಕೊಟ್ಟಿದ್ದು ಯಶ್ ಸಿನಿಮಾಗಳು. ಯಶ್ಗೆ ಹಿಟ್ ಕೊಟ್ಟ ಕಿರಾತಕ ಸಿನಿಮಾದಲ್ಲಿ ಚಿಕ್ಕಣ್ಣ ಬೆಳ್ಳಿತೆರೆಗೆ ಡೆಬ್ಯೂ ಆದ್ರು. ಆ ನಂತರ ಲಕ್ಕಿ ಸಿನಿಮಾದಲ್ಲೂ ನಟಿಸಿದ್ರು. ಆದಾದ ಬಳಿಕ ರಾಜಾಹುಲಿಯಲ್ಲೂ ಯಶ್ಗೆ ಜೊತೆಯಾದ್ರು. ಮಾಸ್ಟರ್ ಪೀಸ್ನಲ್ಲೂ ನಟಿಸಿದ್ರು. ಹೀಗೆ ಯಶ್ ಚಿಕ್ಕಣ್ಣ ಜೋಡಿ ತೆರೆ ಮೇಲೆ ಸಿಕ್ಕಾಪಟ್ಟೆ ರಂಜಿಸಿತ್ತು. ಈಗ ಚಿಕ್ಕಣ್ಣ ಹೀರೋ ಆಗಿ ತೆರೆ ಮೇಲೆ ಬಂದಿದ್ದಾರೆ. ನಟ ಯಶ್ ಕೂಡ ಚಿಕ್ಕಣ್ಣನ ಬೆನ್ನು ತಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: KD movie: ಆಕ್ಷನ್ ಪ್ರಿನ್ಸ್ 'KD' ಅಡ್ಡದಿಂದ ಬಂತು ಬಿಗ್ ನ್ಯೂಸ್..! ಶೂಟಿಂಗ್ ಹಂತದಲ್ಲೇ ಬಿಗ್ ಆಫರ್..!