ತಮನ್ನಾ-ವಿಜಯ್ ವರ್ಮಾ ನಡುವೆ ಎಲ್ಲ ಆಗಿದೆ, ಇದೊಂದು ಕೆಲಸ ಬಾಕಿ!

Published : Nov 28, 2024, 11:14 PM IST

ಮಿಲ್ಕಿ ಬ್ಯೂಟಿ ತಮನ್ನಾ ವಿಜಯ್ ವರ್ಮಾ ಜೊತೆ ಮದುವೆಯಾಗುವ ಬಗ್ಗೆ ಹೊಸ ಅಪ್ಡೇಟ್ ಒಂದು ಬಂದಿದೆ.  ಮುಂದಿನ ವರ್ಷ ಇಬ್ಬರ ಮದುವೆ ನಡೆಯುವ ಸುಳಿವು. ಇದೊಂದು ಕೆಲಸ ಆದರೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

PREV
19
ತಮನ್ನಾ-ವಿಜಯ್ ವರ್ಮಾ ನಡುವೆ ಎಲ್ಲ ಆಗಿದೆ, ಇದೊಂದು ಕೆಲಸ ಬಾಕಿ!

 ಪ್ರಣಯ ಜೋಡಿ ತಮನ್ನಾ ಮತ್ತು ವಿಜಯ್ ವರ್ಮಾ ಮದುವೆ ಆಗ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಶೀಘ್ರದಲ್ಲೇ ಮದುವೆ ದಿನಾಂಕ ಘೋಷಿಸಬಹುದು. ಮುಂದಿನ ವರ್ಷ ಇಬ್ಬರ ಮದುವೆ ನಡೆಯುವ ಸುಳಿವು ಸಿಕ್ಕಿದೆ.

29

ಹೊಸ ಜೀವನಕ್ಕೆ ಕಾಲಿಡುತ್ತಿರುವ ಈ ಜೋಡಿ ಕಳೆದ ಎರಡು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಹೊಸ ಮನೆ ಹುಡುಕುತ್ತಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.

39

ಮುಂದಿನ ವರ್ಷ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದಾರೆ ಮತ್ತು ಅದಕ್ಕಾಗಿ ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ಇನ್ನೊಂದು ವಿಷಯವೂ ಹೊರಬಿದ್ದಿದೆ ಅದೇನೆಂದರೆ, ತಮನ್ನಾ ಬಾಲ್ಯದ ಗೆಳೆಯನಿಗಾಗಿ ಹಿಂದೂ ಧರ್ಮ ತ್ಯಜಿಸಿ ಮದುವೆಗೆ ಮೊದಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿದೆ.

49

ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದ ತಮನ್ನಾ ಸದ್ಯ ತಮ್ಮ ಪ್ರಣಯದ ಬಗ್ಗೆ ಮೌನವಾಗಿರುವಂತೆ, ಈ ಜೋಡಿ ಮದುವೆಯ ಬಗ್ಗೆಯೂ ಏನನ್ನೂ ಬಹಿರಂಗವಾಗಿ ಮಾತನಾಡುತ್ತಿಲ್ಲ.

59

ಅದ್ಯಾಗೂ ಈ ಜೋಡಿ ಮದುವೆಯ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ ಎಂದು ಇ ಟೈಮ್ಸ್ ವರದಿ ಮಾಡಿದೆ.

69

2023 ರಲ್ಲಿ 'ಲಸ್ಟ್ ಸ್ಟೋರೀಸ್ 2' ಬಿಡುಗಡೆ ಸಂದರ್ಭದಲ್ಲಿ ತಮನ್ನಾ ಮತ್ತು ವಿಜಯ್ ವರ್ಮಾ ತಮ್ಮ ಸಂಬಂಧವನ್ನು ಖಚಿತಪಡಿಸಿದರು.

79

ಇಬ್ಬರೂ ಒಟ್ಟಿಗೆ ನಟಿಸಿದ ಮೊದಲ ಚಿತ್ರ ಇದಾಗಿತ್ತು. ತಮ್ಮ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ, ಅದರ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿದ್ದೇವೆ ಎಂದು ವಿಜಯ್ ವರ್ಮಾ ಹೇಳಿದ್ದರು.

89

ಈ ಜೋಡಿ ಮುಂಬೈನಲ್ಲಿ ಹೊಸ ಮನೆ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ ತಾರೆಯರು ಹೆಚ್ಚಾಗಿ ವಾಸಿಸುವ ಪಾಲಿ ಹಿಲ್ಸ್‌ನಲ್ಲಿ ಅಪಾರ್ಟ್‌ಮೆಂಟ್ ಹುಡುಕುತ್ತಿದ್ದಾರಂತೆ.

99

'ಸಿಕಂದರ್ ಕಾ ಮುಖಂದರ್' ತಮನ್ನಾ ಅವರ ಮುಂದಿನ ಚಿತ್ರ. ನೀರಜ್ ಪಾಂಡೆ ನಿರ್ದೇಶನದ ಈ ಥ್ರಿಲ್ಲರ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

click me!

Recommended Stories