ಬಾಡಿಗಾರ್ಡ್ ಕಿರಣ್ ಹುಟ್ಟುಹಬ್ಬ ಆಚರಿಸಿದ ಕಿಚ್ಚ ಸುದೀಪ್

Jan 18, 2023, 1:10 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ಬಾಡಿಗಾರ್ಡ್ ಕಿಚ್ಚ ಕಿರಣ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.  ಸುದೀಪ್ ತನ್ನ ಜೊತೆಯಲ್ಲಿರೋರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ತನಗೆ ಯಾವಾಗಲೂ ರಕ್ಷಣೆ ನೀಡುವ ಬಾಡಿಗಾರ್ಡ್ ಕಿರಣ್ ಅವರನ್ನು ಕೂಡ ಅಷ್ಟೆ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕಿರಣ್ ಅವರಿಗೆ ವಿಶೇಷವಾಗಿ ವಿಶ್ ಮಾಡಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ್ದಾರೆ. ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಅನೇಕರು ಜೊತೆಯಲ್ಲಿದ್ದರು. ಕಿರಣ್ ಅವರು ಸುದೀಪ್ ಜೊತೆ ಅನೇಕ ವರ್ಷಗಳಿಂದ ಜೊತೆಯಲ್ಲಿದ್ದಾರೆ.