ದೀಪಿಕಾನಾ ಮೊದಲ ಬಾರಿ ನೋಡಿದಾಗ ಆಕೆಯ ಸೌಂದರ್ಯಕ್ಕೆ ಬೆರಗಾಗಿದ್ದೆ: ಸಂಜಯ್ ಲೀಲಾ ಬನ್ಸಾಲಿ

By Anusha Kb  |  First Published Oct 9, 2024, 11:27 AM IST

ಪ್ರಸಿದ್ಧ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ನಟಿ ದೀಪಿಕಾ ಪಡುಕೋಣೆಯನ್ನು ಮೊದಲ ಬಾರಿ ಭೇಟಿಯಾದಾಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಅವರ ಸೌಂದರ್ಯ ಮತ್ತು ಸ್ವರದಿಂದ ತಾವು ಮಂತ್ರಮುಗ್ಧರಾದದ್ದನ್ನು ಬನ್ಸಾಲಿ ವಿವರಿಸಿದ್ದಾರೆ.


ಹಲವು ಐತಿಹಾಸಿಕ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ತಾವು ಮೊದಲ ಬಾರಿ ನಟಿ ದೀಪಿಕಾ ಪಡುಕೋಣೆಯನ್ನು ನೋಡಿದಾಗ ತಮಗೆ ಹೇಗನಿಸಿತು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ. ಹಾಲಿವುಡ್ ರಿಪೋರ್ಟರ್ ಇಂಡಿಯಾ ಜೊತೆ ಮಾತನಾಡಿದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ತಾವು ದೀಪಿಕಾ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭವನ್ನು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆಯವರು ಇದುವರೆಹಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಒಟ್ಟು ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಗೋಲಿಯೋಂಕಿ ರಾಸ್‌ಲೀಲಾ ರಾಮ್ ಲೀಲಾ, ಬಾಜಿರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದು, ಈ ಮೂರು ಸಿನಿಮಾಗಳು ಸೂಪರ್ ಹಿಟ್‌ ಸಿನಿಮಾಗಳೇ ಆಗಿವೆ. 

ಈ ಸಿನಿಮಾಗಳಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುವುದಕ್ಕೂ ಮೊದಲು ಸಂಜಯ್ ಲೀಲಾ ಬನ್ಸಾಲಿಯವರು ಮೊದಲ ಬಾರಿ ದೀಪಿಕಾ ಅವರನ್ನು ಭೇಟಿ ಮಾಡುವುದಕ್ಕಾಗಿ ಅವರ ಮನೆಗೆ ಹೋಗಿದ್ದರು. ಈ ವೇಳೆ ದೀಪಿಕಾ ಪಡುಕೋಣೆಯವರೇ ಸ್ವತಃ ಮನೆಯ ಬಾಗಿಲು ತೆರೆದಿದ್ದಾರೆ. ಈ ವೇಳೆ ದೀಪಿಕಾ ಅವರನ್ನು ಮೊದಲ ಬಾರಿ ನೋಡಿ ಹಾಗೂ ಮೊದಲ ಬಾರಿ ಅವರ ಸ್ವರವನ್ನು  ಮುಖತಃ ಕೇಳಿ ಬೆರಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ ಬನ್ಸಾಲಿ.

Tap to resize

Latest Videos

undefined

ಸಂಜಯ್ ಲೀಲಾ ಬನ್ಸಾಲಿಯ 'ಹೀರಾಮಂಡಿ' ಬಜೆಟ್ ಎಷ್ಟು, ವೇಶ್ಯೆಯಾಗಿ ನಟಿಸಿದವರ ಸಂಭಾವನೆ ಎಷ್ಟು ಕೋಟಿ?

ನಾನು ಆಕೆಯ ಮನೆಗೆ ಮೊದಲ ಬಾರಿಗೆ ಹೋದಾಗಲೇ ಆಕೆಯನ್ನು ನಾನು ಮೊದಲು ನೋಡಿದು, ಆಕೆ ಮನೆ ಬಾಗಿಲು ತೆರೆದಳು. ನಾನು ಆ ಮಹಿಳೆಯ ಸೌಂದರ್ಯದಿಂದ ಆಕೆಯ ಕಣ್ಣುಗಳಿಂದ ನಾನು ಸ್ಟನ್ ಆದೆ. ಆಕೆಯಲ್ಲಿ ತುಂಬಾ ಸೂಕ್ಷ್ಮತೆ ಇದೆ, ತುಂಬಾ ಸೌಂದರ್ಯವಿದೆ ಎಂಬುದರ ಅರಿವಾಯ್ತು. ಆಕೆ ಮಾತನಾಡಲು ಶುರು ಮಾಡುತ್ತಿದ್ದಂತೆ ಆಕೆಯ ಧ್ವನಿಯೂ ತುಂಬಾ ಸೊಗಸಾಗಿದೆ ಎಂಬುದು ನನಗೆ ತಿಳಿಯಿತು ಎಂದು ಸಂಜಯ್ ಲೀಲಾ ಬನ್ಸಾಲಿ ಅವರು ಹೇಳಿದ್ದಾರೆ. 

ನಂತರ ನನಗೆ ನಾನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದೇನೆ ಎಂಬುದರ ಅರಿವಾಯ್ತು. ಏಕೆಂದರೆ ಈ ಹುಡುಗಿ ಅಚ್ಚೊತ್ತಿದಂತಿದ್ದಾಳೆ, ಈಕೆ ಎಲ್ಲೋ ಕರೆದುಕೊಂಡು ಹೋಗುತ್ತಾಳೆ ಎಂದು ನನಗೆ ತಿಳಿದಿತ್ತು. ನೀವು ಹೇಗೆ ಅವರನ್ನು ಸಂಪರ್ಕಿಸುತ್ತೀರಿ ಎಂಬುದು ನಿಮಗೆ ಬಿಟ್ಟಿದ್ದು, ಆದರೆ ನಿಮ್ಮ ಆತ್ಮವು ಅವರ ಆತ್ಮದೊಂದಿಗೆ ಸಂಪರ್ಕ ಹೊಂದಬೇಕು ಎಂದು ಅವರು ಹೇಳಿದರು.

ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್​ ಸಿಂಗ್

ಸಂಜಯ್‌ ಲೀಲಾ ಬನ್ಸಾಲಿ ಮತ್ತು ದೀಪಿಕಾ ಮೊದಲು 2013 ರಲ್ಲಿ ಗೋಲಿಯೋನ್ ಕಿ ರಾಸ್ಲೀಲಾ ರಾಮ್ ಲೀಲಾ ಸಿನಿಮಾಕ್ಕಾಗಿ ಮೊದಲ ಬಾರಿ ಜೊತೆಯಾಗಿ ಕೆಲಸ ಮಾಡಿದರು. ಇದರಲ್ಲಿ ರಣವೀರ್ ಸಿಂಗ್, ಸುಪ್ರಿಯಾ ಪಾಠಕ್, ರಿಚಾ ಚಡ್ಡಾ, ಶರದ್ ಕೇಳ್ಕರ್, ಗುಲ್ಶನ್ ದೇವಯ್ಯ, ಬರ್ಖಾ ಬಿಷ್ತ್ ಸೇನ್‌ಗುಪ್ತಾ ಮತ್ತು ಅಭಿಮನ್ಯು ಸಿಂಗ್ ಕೂಡ ನಟಿಸಿದ್ದಾರೆ. ಈ ಸಿನಿಮಾದ ರಾಮ್ ಚಾಹೆ ಲೀಲಾ ಚಾಹೆ ಹಾಡಿನಲ್ಲಿ ಪ್ರಿಯಾಂಕಾ ಚೋಪ್ರಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದಾದ ನಂತರ ಅವರು 2015ರಲ್ಲಿ ಮತ್ತೆ ಜೊತೆಯಾಗಿದ್ದು, ಬಾಜಿರಾವ್ ಮಸ್ತಾನಿ ಎಂಬ ಮತ್ತೊಂದು ಐತಿಹಾಸಿಕ ಸಿನಿಮಾವನ್ನು ತೆರೆಗೆ ತಂದರು. ಇದರಲ್ಲೂ ರಣ್ವೀರ್ ಸಿಂಗ್ , ಪ್ರಿಯಾಂಕಾ ಚೋಪ್ರಾ ಪ್ರಮುಖ ತಾರಾಗಣದಲ್ಲಿದ್ದರೆ,  ತನ್ವಿ ಅಜ್ಮಿ, ವೈಭವ್ ತತ್ವವಾದಿ, ಮಿಲಿಂದ್ ಸೋಮನ್, ಮಹೇಶ್ ಮಂಜ್ರೇಕರ್ ಮತ್ತು ಆದಿತ್ಯ ಪಾಂಚೋಲಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.  ಇದಾದ ನಂತರ 2018ರಲ್ಲಿ ಮತ್ತೆ ಪದ್ಮಾವತ್ ಸಿನಿಮಾದಲ್ಲಿ ಈ ನಿರ್ದೇಶಕ ನಟಿ ಜೋಡಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಜೊತೆ,  ರಣ್ವೀರ್‌ ಸಿಂಗ್, ಶಾಹಿದ್ ಕಪೂರ್, ಅದಿತಿ ರಾವ್ ಹೈದರಿ, ಜಿಮ್ ಸರ್ಭ್, ರಜಾ ಮುರಾದ್ ಮತ್ತು ಅನುಪ್ರಿಯಾ ಗೋಯೆಂಕಾ  ನಟಿಸಿದ್ದಾರೆ.

ಇನ್ನು ದೀಪಿಕಾ ಅವರ ಮುಂದಿನ ಸಿನಿಮಾ ಬಗ್ಗೆ ಹೇಳುವುದಾದರೆ ಅವರ ಸಿಂಗಮ್ ಅಗೈನ್ ಶೀಘ್ರದಲ್ಲೇ ಅಂದರೆ ನವಂಬರ್ 1 ರಂದು ತೆರೆಕಾಣಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್‌ ಸಿಂಗ್, ಟೈಗರ್ ಶ್ರಾಫ್, ಕರೀನಾ ಕಪೂರ್, ಅಜಯ್ ದೇವಗನ್, ಜಾಕಿ ಶ್ರಾಫ್, ಅಕ್ಷಯ್ ಕುಮಾರ್‌ ಅರ್ಜುನ್ ಕಪೂರ್ ನಟಿಸಿದ್ದಾರೆ. 
 

click me!