
ವಾಷಿಂಗ್ಟನ್: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿದಾಗ ಅಲ್ಲಿಯ ಸಂಸ್ಕೃತಿ, ಆಹಾರ, ವೇಷಭೂಷಣ ಸೇರಿದಂತೆ ಹವಾಮಾನ ಬೇರೆಯಾಗಿರುತ್ತದೆ. ಭಾರತ ಮತ್ತು ವಿದೇಶಿ ಸಂಸ್ಕೃತಿ ತುಂಬಾ ವಿಭಿನ್ನವಾಗಿರುತ್ತದೆ. ಇಂದು ಹಲವು ವ್ಲಾಗರ್‌ಗಳು ದೇಶಗಳನ್ನು ಸುತ್ತುತ್ತಾ ಅಲ್ಲಿಯ ಸಂಪ್ರದಾಯ ಹಾಗ ಆ ಪ್ರದೇಶದ ಮಾಹಿತಿಯನ್ನು ನೀಡುತ್ತಿರುತ್ತಾರೆ. ಈ ಮೂಲಕ ಮನೆಯಲ್ಲಿಯೇ ಕುಳಿತು ಬೇರೆ ದೇಶಗಳು ಹೇಗಿವೆ ಎಂಬುದನ್ನು ನೋಡಬಹುದಾಗಿದೆ. ಕೆಲವೊಮ್ಮೆ ವ್ಲಾಗರ್‌ಗಳ ವಿಡಿಯೋಗಳು ಕುತೂಹಲಕಾರಿ ವಿಷಯವನ್ನು ರಿವೀಲ್ ಮಾಡುತ್ತವೆ. ವ್ಲಾಗರ್‌ಗಳು ಸಹ ಹೊಸ ವಿಷಯ/ಪ್ರದೇಶ/ಆಚರಣೆಗಳನ್ನು ತಮ್ಮ ನೋಡುಗರಿಗೆ ತೋರಿಸಲು ಪ್ರಯತ್ನಿಸುತ್ತಿರುತ್ತಾರೆ.
ಇದೀಗ ವ್ಲಾಗರ್ ಒಬ್ಬರು ಅಮೆರಿಕದ ರಸ್ತೆ ಬದಿಯಲ್ಲಿರುವ ಬೋರ್ಡ್ ಮೇಲೆ ಕಿಸ್ ಆಂಡ್ ರೈಡ್ ಬರೆದಿರೋದನ್ನು ತೋರಿಸಿದ್ದಾರೆ. ಇದರ ಜೊತೆಯಲ್ಲಿ ಈ ರೀತಿ ಯಾಕೆ ಬರೆಯಲಾಗಿರುತ್ತದೆ ಎಂಬ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಿದ್ದಾರೆ. Sadia Zeb Ranjha ಹೆಸರಿನ ಮಹಿಳಾ ವ್ಲಾಗರ್ ಈ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಭಾರತದಲ್ಲಿ ರಸ್ತೆ ಬದಿಯಲ್ಲಿರುವ ಫಲಕಗಳ ಮೇಲೆ ಸ್ಥಳದ ಹೆಸರು, ಟ್ರಾಫಿಕ್ ಸನ್ನೆಗಳು ಇರುತ್ತವೆ. ಆದ್ರೆ ಇಲ್ಲಿ ಇದೆಲ್ಲದರ ಜೊತೆ ಕಿಸ್ ಆಂಡ್ ರೈಡ್ ಎಂಬುದಾಗಿ ಬರೆಯುಲಾಗಿರುತ್ತದೆ.
ಹೋಟೆಲ್‌ನಲ್ಲಿ ಪುರುಷನ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು; ನನ್ನ ಜೀವನವೇ ಹಾಳಾಯ್ತು ಅಂತ ಕಣ್ಣೀರಿಟ್ಟ ಪತ್ನಿ!
ಸಾದಿಯಾ ಝೆಬ್ ರಂಜ್ಹಾ ಹೇಳುವ ಪ್ರಕಾರ, ನಿಲ್ದಾಣಗಳಿಗೆ ಪ್ರಯಾಣಿಕರನ್ನು ಅಂದ್ರೆ ಕುಟುಂಬಸ್ಥರು ಅಥವಾ ಆಪ್ತರನ್ನು ಪಿಕ್ ಆಂಡ್ ಡ್ರಾಪ್ ಮಾಡಲು ಬರುವ ಜನರಿಗಾಗಿ ಫಲಕಗಳ ಮೇಲೆ ಕಿಸ್ ಆಂಡ್ ರೈಡ್ ಎಂದು ಬರೆಯಲಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಫಲಕಗಳನ್ನು ಶಿಕಾಗೋ ಟ್ರಾಂಜಿಟ್ ಅಥಾರಿಟಿಯಿಂದಲೇ ಅಳವಡಿಸಲಾಗಿರುತ್ತದೆ. ಈ ಹೆಸರನ್ನು ಪ್ರಾಧಿಕಾರದ ಜನರಲ್ ಮ್ಯಾನೇಜರ್ ಒಬ್ಬರು ನೀಡಿದ್ದರು. ಅಂದಿನಿಂದ ಅಮೆರಿಕಾದ ಶಿಕಾಗೋ ಭಾಗದಲ್ಲಿನ ರಸ್ತೆಗಳ ಬದಿ ಈ ರೀತಿ ಬರಹವುಳ್ಳು ಫಲಕಗಳನ್ನು ಕಾಣಬಹುದಾಗಿದೆ.
ಯಾಕೆ ಈ ಹೆಸರು?
ವಿದೇಶದಲ್ಲಿ ಯಾರನ್ನಾದರೂ ವೆಲ್ ಕಮ್ ಮಾಡಬೇಕಾದ್ರೆ ಚುಂಬಿಸಿಯೇ ಸ್ವಾಗತಿಸಲಾಗುತ್ತದೆ. ಅದೇ ರೀತಿ ಬೀಳ್ಕೊಡುವ ಸಂದರ್ಭದಲ್ಲಿಯೂ ಕಿಸ್ ಮಾಡಿಯೇ ಬೈ ಹೇಳುವ ಸಂಸ್ಕೃತಿ ಇದೆ. ಹಾಗಾಗಿ ನಿಲ್ದಾಣಕ್ಕೆ ಆಪ್ತರನ್ನು ಬಿಡಲು ಅಥವಾ ಕರೆದುಕೊಂಡು ಹೋಗಲು ಬರೋರು ಅವರಿಗೆ ಕಿಸ್ ಮಾಡಿ ಮುಂದಿನ ಪ್ರಯಾಣ ಆರಂಭಿಸಲಿ ಎಂಬ ಉದ್ದೇಶದಿಂದ ಈ ಫಲಕಗಳನ್ನು ಅಳವಡಿಸಲಾಗಿದೆ. ಇದೊಂದು ಸ್ನೇಹಪೂರ್ವಕ ಫಲಕ ಎಂದು ಇಲ್ಲಿನ ಜನರು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ