ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ವಿಶ್ ಮಾಡಿದ ಪತ್ನಿ ಸೋನಲ್

Published : Oct 09, 2024, 11:41 AM ISTUpdated : Oct 09, 2024, 12:08 PM IST

ಸ್ಯಾಂಡಲ್’ವುಡ್ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪ್ರೀತಿಯ ಗಂಡನ ಹುಟ್ಟುಹಬ್ಬಕ್ಕೆ ಪತ್ನಿ ಸೋನಲ್ ಮೊಂಥೆರೋ ರೊಮ್ಯಾಂಟಿಕ್ ವಿಶ್ ಮಾಡಿದ್ದಾರೆ.   

PREV
17
ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ರೊಮ್ಯಾಂಟಿಕ್ ವಿಶ್ ಮಾಡಿದ ಪತ್ನಿ ಸೋನಲ್

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡು ಚೌಕ, ಕಾಟೇರ, ರಾಬರ್ಟ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಸುಧೀರ್ (Tharun Sudhir) ಇಂದು ಅಕ್ಟೋಬರ್ 9 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 
 

27

ಆಗಸ್ಟ್ ತಿಂಗಳಲ್ಲಿ ನಟಿ ಸೋನಲ್ ಮೊಂಥೆರೋ (Sonal Monteiro) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ತರುಣ್ ಸುಧೀರ್, ಮದುವೆ ಬಳಿಕ ಮೊದಲ ಬಾರಿ ಪತ್ನಿ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಬಾರಿ ವಿಶೇಷವಾಗಿ ಮಾಲ್ಡೀವ್ಸ್ ನಲ್ಲಿ ಈ ಜೋಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 
 

37

ಮದುವೆಯಾಗಿ ಎರಡು ತಿಂಗಳ ಬಳಿಕ ತಮ್ಮ ಡ್ರೀಮ್ ಡೆಸ್ಟಿನೇಶನ್ ಮಾಲ್ಡೀವ್ಸ್ ಗೆ ಹನಿಮೂನ್ ಗೆ ತೆರಳಿರುವ ಜೋಡಿ, ಈಗಾಗಲೇ ಅಲ್ಲಿ ಸ್ಪೆಷಲ್ ಆಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಫೋಟೊಗಳನ್ನು ತರುಣ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಶೇರ್ ಮಾಡಿದ್ದರು. 
 

47

ಇದೀಗ ಸೋನಲ್ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು (Romantic photos) ಶೇರ್ ಮಾಡೊ ಮೂಲಕ ಅಷ್ಟೇ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ ದುಬೈಗೆ ತೆರಳಿದ್ದು, ಅಲ್ಲಿ ತೆಗೆದಂತಹ ಫೋಟೊಗಳು ಇವಾಗಿವೆ. 
 

57

ದುಬೈನ ಮರುಭೂಮಿಯಲ್ಲಿ, ಇಬ್ಬರು ಕೈ ಕೈಹಿಡಿದು, ಕಣ್ಣೋಟ ಬೆರೆಸಿ, ಸೂರ್ಯಾಸ್ತಮಾನದ ಸೊಬಗಿನ ಹಿನ್ನೆಲೆಯಲ್ಲಿ ತೆಗೆಸಿಕೊಂಡಿರುವ ಫೋಟೊಗಳನ್ನು ಶೇರ್ ಮಾಡಿರುವ ಸೋನಲ್ 'ಪ್ರಪಂಚದ ಅತ್ಯಂತ ಪ್ರೀತಿಯ, ಕೇರ್ ಮಾಡುವ, ಮೃದು ಹೃದಯದ ಗಂಡನಿಗೆ ಹ್ಯಾಪಿ ಬರ್ತ್ ಡೇ ಎಂದು ಮುದ್ದಾಗಿ ಬರೆದುಕೊಂಡಿದ್ದಾರೆ. 
 

67
Tharun Sudhir Sonal

ಅಷ್ಟೇ ಅಲ್ಲ ನನ್ನ ಜೀವನದ ಪ್ರತಿ ಹಂತದಲ್ಲೂ ಪ್ರೇರಣೆ ನೀಡುವ ಹಾಗೂ ಯಾವ ವ್ಯಕ್ತಿ ಜೊತೆ ನಾನು ಜೀವನ ಕಳೆಯೋದಕ್ಕೆ ಇಷ್ಟಪಡ್ತಿನೋ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಂತೋಷ ಯಾವಾಗಲೂ ತುಂಬಿರಲಿ ಎಂದು ಹಾರೈಸಿದ್ದಾರೆ  ಸೋನಲ್ ಮೊಂಥೆರೋ. 

77

ತರುಣ್ ಸುಧೀರ್ ಹುಟ್ಟುಹಬ್ಬದ ಕನ್ನಡ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಹ ಶುಭ ಕೋರಿದ್ದಾರೆ. ಕಾಟೇರ ಯಶಸ್ಸಿನ ಸಂಭ್ರಮದಲ್ಲಿರುವ ತರುಣ್ ಮುಂದೆ ಯಾವ ಸಿನಿಮಾ ಮಾಡಲಿದ್ದಾರೆ ಎನ್ನುವ ಕುತೂಹಲ ಕೂಡ ಜನರಲ್ಲಿದೆ. ಒಟ್ಟಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ಸ್ಯಾಂಡಲ್ ವುಡ್ ನ ಟ್ಯಾಲೆಂಟೆಡ್ ನಿರ್ದೇಶಕರಿಗೆ ನಮ್ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು. 
 

Read more Photos on
click me!

Recommended Stories