ಸಿದ್ದರಾಮಯ್ಯ ಹೋದಲ್ಲೆಲ್ಲಾ ಮುಂದಿನ ಸಿಎಂ ಕೂಗು, ಯಾರಾಗ್ತಾರೆ..?

May 30, 2022, 3:39 PM IST

ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮುಂದಿನ ಸಿಎಂ ಯಾರೆಂಬ ಗೊಂದಲ ಹೆಚ್ಚುತ್ತಲೇ ಇದೆ.  ಕಾರ್ಯಕರ್ತರು ತಮ್ಮ ತಮ್ಮ ನಾಯಕರನ್ನೇ ಸಿಎಂ ಎಂದು ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದ್ರು ಸಹ, ನೆಕ್ಸ್ಟ್ ಸಿಎಂ ಘೋಷಣೆ ಮಾತ್ರ ನಿಲ್ಲುತ್ತಲೇ ಇಲ್ಲ. ಹೀಗಾಗಿ ಕೈ ಪಕ್ಷದಿಂದ ನೆಕ್ಸ್ಟ್ ಸಿಎಂ ಯಾರು ಅನ್ನೋ ಪ್ರಶ್ನೆ ಮತ್ತೆ ಮತ್ತೆ ಉದ್ಭವಿಸುತ್ತಲೇ ಇದೆ.

Explained:ಸಾವರ್ಕರ್ ಸುತ್ತ ಯಾಕಿಷ್ಟು ವಿವಾದ.? ಕ್ಷಮಾಪಣಾ ಪತ್ರದಲ್ಲಿದ್ದದ್ದೇನು.?
 
ಭೈರತಿ ಸುರೇಶ್ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳುತ್ತಿದ್ದಂತೆ, ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಆಕಾಂಕ್ಷಿಗಳು ರೇಸ್‌ಗೆ ಬಿದ್ದಂತಿದೆ.  ಜಿ ಪರಮೇಶ್ವರ್ ನಾನು ಕೂಡ ಸಿಎಂ ಅಭ್ಯರ್ಥಿ ಅನ್ನೋ ಅರ್ಥದಲ್ಲಿ ಮಾತ್ನಾಡಿದ್ದಾರೆ. ಒಂದು ವೇಳೆ ದಲಿತರಿಗೆ ಮುಂದಿನ ಸಿಎಂ ಪಟ್ಟ ಎಂಬ ಕೂಗು ಕಾಂಗ್ರೆಸ್‌ನಲ್ಲಿ ಜೋರಾಗಿ, ಈ ಕೂಗಿಗೆ ಹೈಕಮಾಂಡ್ ಒಪ್ಪಿದ್ದೇ ಆದ್ರೆ, ಆಗ ಮತ್ತೊಂದು ಸವಾಲು ರಾಜ್ಯ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಳ್ಳುತ್ತೆ. ಕಾಂಗ್ರೆಸ್ನಲ್ಲಿ ಎಲೆಕ್ಷನ್ ಹತ್ತಿರ ಬಂದಂತೆ ಸಿಎಂ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಈ ಬಿರುಕನ್ನು ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಸರಿಪಡಿಸದೇ ಹೋದ್ರೆ, ಎಲೆಕ್ಷನ್ ಸಂದರ್ಭದಲ್ಲಿ ಪಕ್ಷಕ್ಕೆ ಹೊಡೆತ ಬೀಳೋದು ಖಂಡಿತ.