ಇಸ್ರೇಲ್ ದಾಳಿಯ ವಿರುದ್ಧ ಇರಾನ್ ಗುಡುಗಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ದಾಳಿ ಬಗ್ಗೆಅಧಿಕೃತ ಹೇಳಿಕೆ ನೀಡಿರುವ ಇರಾನ್, 'ಬಾಹ್ಯ ಆಕ್ರಮಣಕಾರಿ ಕೃತ್ಯಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿ ಕೊಳ್ಳುವ ಅರ್ಹತೆ ಮತ್ತು ಬಾಧ್ಯತೆ ಇರಾನ್‌ಗೆ ಇದೆ' ಎಂದು ಹೇಳಿದೆ.
ಟೆಲ್ ಅವಿವ್/ತೆಹ್ರಾನ್(ಅ.27): ಕಳೆದ ಅ.1ರಂದು 180 ಕ್ಷಿಪಣಿ ನೆ ಬಳಸಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್, ಶನಿವಾರ ಬೆಳ್ಳಂಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಲೆ 100 ವಿಮಾನಗಳ ಮೂಲಕ 200 ಕ್ಷಿಪಣಿ ಬಳಸಿ ಭೀಕರ 'ನಿರ್ದೇಶಿತ ವೈಮಾನಿಕ ದಾಳಿ ನಡೆಸಿದೆ.
ಅಮೆರಿಕ ನಿರ್ಮಿತ 2-35, 2- 151, 2 -2680 ಯುದ್ಧವಿಮಾನ ಬಳಸಿ 2000 ಕಿ.ಮೀ.ನಷ್ಟು ದೂರ ಸಾಗಿ ಇರಾನ್ ಸನಿಹವೇ ಬಂದು ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಯಲ್ಲಿ ನಾಲ್ವರು ಇರಾನ್ ಯೋಧರು ಬಲಿಯಾಗಿದ್ದಾರೆ. 'ಇರಾನ್‌ನ ಸೇನಾ ನೆಲೆಗಳು ಮತ್ತು ಕ್ಷಿಪಣಿ ಉತ್ಪಾದನಾ ಘಟಕಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ' ಎಂದು ಇಸ್ರೇಲ್ ಹೇಳಿದೆ.
undefined
ಇರಾನ್ ಮೇಲೆ ಭಾರೀ ದಾಳಿಗೆ ಇಸ್ರೇಲ್ ಸಿದ್ಧತೆ- ಸೋರಿಕೆಯಾದ ಅಮೆರಿಕದ 2 ರಹಸ್ಯ ದಾಖಲೆಗಳಿಂದ ಪತ್ತೆ
ದಾಳಿಯಲ್ಲಿ ತನ್ನ ಇಬ್ಬರು ಯೋಧರು ಅಸುನೀಗಿದ್ದಾರೆ ಎಂದು ಇರಾನ್ ಹೇಳಿಕೆ ಬಿಡುಗಡೆ ಮಾಡಿದ್ದು. ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಗುಡುಗಿದೆ. ಇರಾನ್ ಪರಮಾಣು ಘಟಕಗಳು ಮತ್ತು ತೈಲ ಬಾವಿಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂಬ ಆತಂಕ ಇತ್ತಾದರೂ ಸದ್ಯಕ್ಕೆ ಅಂಥ ದಾಳಿಯಿಂದ ಇಸ್ರೇಲ್ ದೂರವೇ ಉಳಿದಿದೆ. ಆದರೆ ಈ ದಾಳಿಯಿಂದ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿಯನ್ನು ಇನ್ನಷ್ಟು ವಿಕೋಪಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆ.
ಇರಾನ್-ಇಸ್ರೇಲ್ ಮಾತಿನ ಸಮರ:
ಘಟನೆಯಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದರಾದರೂ, 'ವಾಯುರಕ್ಷಣಾ ವ್ಯವಸ್ಥೆಗೆ ಚಾಲನೆ ನೀಡಿದ ಕಾರಣ ಕ್ಷಿಪಣಿಗಳನ್ನು ಹಿಮ್ಮೆಟ್ಟಿಸಲಾಗಿದ್ದು. ಹೆಚ್ಚಿನ ಹಾನಿ ಸಂಭವಿಸಿಲ್ಲ. ಸೀಮಿತ ಪ್ರಮಾಣದ ಹಾನಿ ಆಗಿದೆ' ಎಂದು ಇರಾನ್ ಸೇನೆ ಹೇಳಿದೆ. ಆದರೆ, 'ಇರಾನ್ ನಮ್ಮ ನಾಗರಿಕರ ಪ್ರಾಣಕ್ಕೆ ಅಪಾಯ ತರುವ ರೀತಿ 2 ಬಾರಿ ದಾಳಿ ನಡೆಸಿತ್ತು. ಅದಕ್ಕೆ ಇಂದು ಬೆಲೆ ತೆತ್ತಿದೆ. ನಮ್ಮ ಹೊಣೆಗಾರಿಕೆಯನ್ನು ನಾವು ಪೂರೈಸಿ ದೇವೆ. ದಾಳಿ ಮುಗಿದಿದೆ' ಎಂದು ಇಸ್ರೇಲ್ ಸೇನಾ ಪಡೆಯ ವಕ್ತಾರ ಡೇನಿಯಲ್ ಹಗೇರಿ ಹೇಳಿದ್ದಾರೆ.
ಸಂಯಮ ವಹಿಸಿ:
ಭಾರತದಿಂದ ಸಲಹೆ ಪಶ್ಚಿಮ ಏಷ್ಯಾ ಸ್ಥಿತಿ ಬಗ್ಗೆ ಕಳವಳವಾಗಿದೆ. ಮುಗ್ಧ ಜನರು, ಒತ್ತೆಯಾಳುಗಳ ಬಳಲುವಿಕೆಯಿಂದ ಯಾರಿಗೂ ಲಾಭವಿಲ್ಲ. ಎಲ್ಲರೂ ಸಂಯ ಮದಿಂದ ಇರಬೇಕು. ಸಮಸ್ಯೆಗೆ ರಾಜ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಪುನರುಚ್ಚರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇರಾನ್ ಮೇಲೆ ದಾಳಿ ಏಕೆ?
1 ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸ್ತಿರುವ ಹಮಾಸ್, ಹಿಜ್ಜುಲ್ಲಾ ಉಗ್ರರ ಹಿಂದಿರುವ ಶಕ್ತಿಯೇ ಇರಾನ್
2 ಹಿಜ್ಜುಲ್ಲಾ ಮುಖ್ಯಸ್ಥ ಹಸನ್ ನಸ್ಯಲ್ಲಾ, ಇರಾನ್ ಕಮಾಂಡರ್ ಅನ್ನು ಇಸ್ರೇ ಕ್ರೇಲ್ ಕೊಂದಿದ್ದಕ್ಕೆ ಇರಾನ್ ಗೆ ಸಿಟ್ಟು ರಂದು ಇಸ್ರೇಲ್
3 ಮೇಲೆ 180ಕ್ಕೂ ಹೆಚ್ಚು ಕ್ಷಿಪಣಿ 3 ಗಳನ್ನು ಬಳಿಸಿ ದಾಳಿ ಮಾಡಿದ ಇರಾನ್ ಸೇನಾ ಪಡೆಗಳು
4 ಆ ದಾಳಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು 'ಇಸ್ರೇಲ್ ನಿಂದ ಇರಾನ್ ಮೇಲೆ 200 ಕ್ಷಿಪಣಿ ಬಳಸಿ ದಾಳಿ
ಇರಾನ್ ಮೇಲೆ 36 ವರ್ಷದಲ್ಲೇ ದೊಡ್ಡ ದಾಳಿ
1980ರಿಂದ 1988 ರವರೆಗೆ ಇರಾನ್-ಇರಾಕ್ ಯುದ್ದ ನಡೆದಿತ್ತು. ಬಳಿಕ ಇಸ್ರೇಲ್ ಕೆಲವು ಬಾರಿ ಚಿಕ್ಕಪುಟ್ಟ ದಾಳಿಗಳನ್ನು ಇರಾನ್ ಮೇಲೆ ನಡೆಸಿತ್ತಾದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿರಲಿಲ್ಲ. ಹೀಗಾಗಿ 1988ರ ಬಳಿಕ ಅಂದರೆ 36 ವರ್ಷ ನಂತರ ಇರಾನ್ ಮೇಲೆ ವಿದೇಶವೊಂದು ನಡೆಸಿದ ಮೊದಲ ದೊಡ್ಡ ದಾಳಿ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಅಣುಸ್ಥಾವರ, ತೈಲ ಬಾವಿಯ ಮೇಲಿಲ್ಲ ದಾಳಿ
ಅಕ್ಟೋಬರ್ 1ರ ದಾಳಿಗೆ ಪ್ರತೀಕಾರವಾಗಿ ಇರಾನ್ ಅಣು ಸ್ಥಾವರ, ತೈಲ ಬಾವಿಗಳ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂದು ಹೇಳಲಾಗಿತ್ತು. ಆದರೆ ಅಂತಹ ದಾಳಿಯಿಂದ ಮಧ್ಯಪ್ರಾಚ್ಯದಲ್ಲಿನ ದ್ವೇಷ ಊಹಿಸಲಾಗದಷ್ಟು ವಿಕೋಪಕ್ಕೆ ಹೋಗ ಬಹುದು ಎಂದು ಅರಿತು ಇಸ್ರೇಲ್ ಸೀಮಿತವಾಗಿ ದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗಿದೆ.
ಇರಾನ್ ವಿರುದ್ಧ ಪ್ರತೀಕಾರ ತೀರಿಸಲು ಮುಂದಾದ ಇಸ್ರೇಲ್‌ಗೆ ಅಮೆರಿಕದ ಥಾಡ್ ರಕ್ಷಣೆ
ಆಪರೇಷನ್ ಡೇಸ್ ಆಫ್ ರಿಪೆಂಟೆನ್ಸ್ ಇಸ್ರೇಲ್ ಕಾರ್ಯಾಚರಣೆ ಕೋಡ್‌ನೇಮ್
ಇರಾನ್ ಮೇಲೆ ದಾಳಿ ಮಾಡಿದ ಇಸ್ರೇಲ್ ತನ್ನ ಕಾರ್ಯಾಚರಣೆಗೆ 'ಆಪರೇಷನ್ ಡೇಸ್ ಆಫ್ ರಿಪೆಂಟೆನ್ಸ್' (ಪಶ್ಚಾತ್ತಾಪದ ದಿನ ಕಾರಾಚರಣೆ) ಎಂದುಹೆಸರಿಟ್ಟಿದೆ. ಇದು ಇಸ್ರೇಲಿಗರು ತಮ್ಮ ಕಾರ್ ಗಳಿಗೆ ಪಶ್ಚಾತ್ತಾಪ ಪಡುವ 10 ದಿನಗಳ ಒಂದು ಆಚರಣೆಯ ಹೆಸರು. ಈವರೆಗೂ ಹಮಾಸ್, ಹಿಜ್ಜುಲ್ಲಾ ಸೇರಿ ಅನೇಕ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿ ಸಾವಿರಾರು ಜನರನ್ನು ಕೊಂದಿ ದ್ದಾರೆ. ಹೀಗಾಗಿ ತಮ್ಮ ಜನತೆಯ ಸಾವಿಗೆ ದೇಶಭಕ್ತಿ ಪ್ರದರ್ಶಿಸುವ ಮೂಲಕ ಪಶ್ಚಾತ್ತಾಪ ಪಡುವುದು ಇಸ್ರೇಲಿಗರ ಉದ್ದೇಶ. ಹೀಗಾಗಿ ಇರಾನ್ ಮೇಲೆ ದಾಳಿಗೆ 'ಆಪರೇ ಷನ್ ಡೇಸ್ ಆಫ್ ರಿಪೆಂಟೆನ್ಸ್' ಎಂದು ಹೆಸರಿಟ್ಟಿದೆ.
ಇಸ್ರೇಲ್ ವಿರುದ್ದ ತಕ್ಕ ಪ್ರತೀಕಾರ:
ಇರಾನ್ ತೆಹ್ರಾನ್:
ಇಸ್ರೇಲ್ ದಾಳಿಯ ವಿರುದ್ಧ ಇರಾನ್ ಗುಡುಗಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ದಾಳಿ ಬಗ್ಗೆ ಶನಿವಾರ ಮಧ್ಯಾಹ್ನ ಅಧಿಕೃತ ಹೇಳಿಕೆ ನೀಡಿರುವ ಇರಾನ್, 'ಬಾಹ್ಯ ಆಕ್ರಮಣಕಾರಿ ಕೃತ್ಯಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿ ಕೊಳ್ಳುವ ಅರ್ಹತೆ ಮತ್ತು ಬಾಧ್ಯತೆ ಇರಾನ್‌ಗೆ ಇದೆ' ಎಂದು ಹೇಳಿದೆ.