May 14, 2023, 12:03 PM IST
ಬೆಂಗಳೂರು(ಮೇ.14): ರಾಜ್ಯದಲ್ಲಿ ಬಹುಮರ ಪಡೆದ ಬಳಿಕ ಇದೀಗ ಸಿಎಂ ಆಯ್ಕೆ ಕಸರತ್ತು ಆರಂಭವಾಗಿದೆ. ಯಾರಾಗ್ತಾರೆ ಸಿಎಂ ಡಿಕೆಶಿನಾ?, ಸಿದ್ದರಾಮಯ್ಯನಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಎದ್ದಿವೆ. ಸಿಎಂ ಯಾರಾಗ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಸಿಎಂ ಯಾರು ಆಗ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ಉತ್ತರ ಸಿಗಲಿದೆ. ಹೊಸ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ಪಡೆ ಮುಂದಾಗಿದೆ. ಗೊಂದಲ ರಹಿತವಾಗಿ ಸಿಎಂ ಅಯ್ಕೆ ಮುಗಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಶಾಸಕರ ಅಭಿಪ್ರಾಯ ಪಡೆದುಕೊಂಡು ಅಂತಿಮ ತೀರ್ಮಾನಕ್ಕೆ ಬರಲು ನಾಯಕರು ಸಿದ್ಧತೆ ನಡೆಸಿದ್ದಾರೆ. ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ.
Karnataka Election Results 2023: ಡಿಕೆಶಿ, ಸಿದ್ದರಾಮಯ್ಯ ಇಬ್ಬರ ಮನೆ ಮುಂದೆಯೂ ಸಿಎಂ ಬ್ಯಾನರ್ !