ಪೋಷಕಾಂಶಗಳ ಭಂಡಾರ
ಡಾರ್ಕ್ ಚಾಕೊಲೇಟ್‌ನಲ್ಲಿ ಆರೋಗ್ಯಕ್ಕೆ ಉಪಯುಕ್ತವಾದ ಪೋಷಕಾಂಶಗಳಿವೆ. ಇದರಲ್ಲಿ ಕರಗುವ ನಾರಿನಂಶ ಹೇರಳವಾಗಿದೆ. ಇದರ ಜೊತೆಗೆ ಕಬ್ಬಿಣ, ಮೆಗ್ನೀಷಿಯಂ, ಮ್ಯಾಂಗನೀಸ್‌ನಂತಹ ಖನಿಜಾಂಶಗಳೂ ಇವೆ.
ಡಾರ್ಕ್ ಚಾಕೊಲೇಟ್‌ನಲ್ಲಿ 70-85% ಕೋಕೋ ಇರುತ್ತೆ. 100 ಗ್ರಾಂ ಡಾರ್ಕ್ ಚಾಕೊಲೇಟ್‌ನಲ್ಲಿ 11 ಗ್ರಾಂ ನಾರಿನಂಶ ಮತ್ತು ಕಬ್ಬಿಣ ಇರುತ್ತೆ. ಇದು ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತೆ. ಇದಲ್ಲದೆ, ಡಾರ್ಕ್ ಚಾಕೊಲೇಟ್‌ನಲ್ಲಿ ಫಾಸ್ಪರಸ್, ಪೊಟ್ಯಾಶಿಯಂ, ಸತು ಮತ್ತು ಸೆಲೆನಿಯಮ್ ಕೂಡ ಇರುತ್ತೆ.