ದೀಪಾವಳಿಯಂದು ಮಾಟ-ಮಂತ್ರದಿಂದ ತಪ್ಪಿಸಿಕೊಳ್ಳಲು ಜ್ಯೋತಿಷಿಗಳು ನೀಡುವ ಸಲಹೆಗಳು. ನಕಾರಾತ್ಮಕ ಶಕ್ತಿಗಳನ್ನು ತಡೆಯಲು ಕೆಲವು ವಿಶೇಷ ಕ್ರಮಗಳನ್ನು ತಿಳಿಸಲಾಗಿದೆ. ಹಿತಶತ್ರುಗಳಿಂದ ರಕ್ಷಣೆ ಪಡೆಯಲು ಈ ಸಲಹೆಗಳು ಸಹಾಯಕವಾಗುತ್ತವೆ.
21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಇಂದಿಗೂ ಮಾಟ-ಮಂತ್ರ ಅಂದ್ರೆ ಜನರು ಹೆದರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಾಟ-ಮಂತ್ರ ನಿವಾರಣೆಗಾಗಿ ವಿಶೇಷ ಪೂಜೆಗಳನ್ನು ಸಹ ಮಾಡಲಾಗುತ್ತದೆ. ಹಿತಶತ್ರುಗಳಿಂದ ರಕ್ಷಣೆ ಪಡೆಯಲು, ಜೀವನದಲ್ಲಿ ಯಶಸ್ಸು ಗಳಿಸಲು ಹೋಮ-ಹವನಗಳನ್ನು ಅತ್ಯಂತ ಶ್ರದ್ಧಯಿಂದ ಮಾಡಲಾಗುತ್ತದೆ. ಇಂದಿಗೂ ಕೆಲವರು ಚಾಡಿ-ಮೋಡಿ, ಮಾಟ-ಮಂತ್ರಗಳನ್ನು ನಂಬುತ್ತಾರೆ. ತಮ್ಮ ಏಳಿಗೆಯನ್ನು ತಡೆಯಲು ಮಾಟ ಮಾಡಿಸಲಾಗಿದೆ ಎಂಬ ಮಾತುಗಳನ್ನು ಆಗಾಗ್ಗೆ ಕೇಳಿರುತ್ತವೆ. ಇವೆಲ್ಲಗಳ ನಿವಾರಣೆಗಾಗಿ ಮನೆದೇವರು ಸೇರಿದಂತೆ ವಿವಿಧ ಗುಡಿ-ಮಂದಿರಗಳಿಗೆ ಜನರು ತೆರಳುತ್ತಿರುತ್ತಾರೆ. ಆದ್ರೆ ಕೆಲ ವಿಶೇಷ ಕ್ರಮಗಳ ಮೂಲಕ ನಕಾರಾತ್ಮಕ ಶಕ್ತಿಗಳನ್ನು ತಡೆಯಲು ಸಾಧ್ಯ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಧನಾತ್ಮಕತೆ ಇದ್ದಲ್ಲಿ ನಕಾರಾತ್ಮಗೆ ಸ್ಥಳವಿರಲ್ಲ ಎಂಬುವುದು ಎಲ್ಲರ ಬಲವಾದ ನಂಬಿಕೆಯಾಗಿದೆ.
ಕುಲದೇವತೆಗೆ ಹರಕೆ ಹೊತ್ತುಕೊಂಡರೆ ಎಲ್ಲವೂ ಸರಿಯಾಗುತ್ತೆ ಎಂದು ಕುಟುಂಬದಲ್ಲಿನ ಹಿರಿಯರು ಹೇಳುತ್ತಿರುತ್ತಾರೆ. ವಿಶೇಷ ದಿನಗಳಲ್ಲಿ ಮಾಡಿಕೊಳ್ಳುವ ಹರಕೆಗೆ ಕುಲದೇವತೆ ಫಲ ನೀಡುತ್ತಾಳೆ. ಇದೀಗ ಅಂತಹ ವಿಶೇಷ ಸಂದರ್ಭ ಈಗ ಬಂದಿದೆ. ದೀಪಾವಳಿ ಆರಂಭವಾಗಿದ್ದು, ಕುಲದೇವರು ಅಥವಾ ಕುಲದೇವತೆ ಮುಂದೆ ಕೇಳಿಕೊಳ್ಳುವ ಬೇಡಿಕೆಗಳು ಈಡೇರುತ್ತೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಉದಾಹರಣಗೆ, ಮನೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿದ್ರೆ ಪೋಷಕರು, ಒಂದಷ್ಟು ಹಣವನ್ನು ಮುಡಿಪು ಕಟ್ಟಿ ಇಡುವ ಪದ್ದತಿ ಇನ್ನೂ ಜೀವಂತವಾಗಿದೆ. ನಂತರ ದೇವಸ್ಥಾನಕ್ಕೆ ತೆರಳಿ ಮುಡಪು ಸಲ್ಲಿಸಲಾಗುತ್ತದೆ.
undefined
ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಣೆ ಮಾಡಲಾಗುತ್ತದೆ. ದೀಪಾವಳಿಯ ರಾತ್ರಿ ಜನರು ತಂತ್ರ-ಮಂತ್ರ ಆಚರಣೆಗಳನ್ನು ಮಾಡುತ್ತಾರೆ. ಇತರರಿಗೆ ಹಾನಿ ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ. ದೀಪಾವಳಿಯ ದಿನದಂದು ನಕಾರಾತ್ಮಕ ಶಕ್ತಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಜ್ಯೋತಿಷ್ಯದ ಈ ಕ್ರಮಗಳನ್ನು ಅನುಸರಿಸುವ ಮೂಲಕ ನಕಾರಾತ್ಮಕ ಶಕ್ತಿಗಳಿಂದ ಪಾರಾಗಬಹುದಾಗಿದೆ.
ಹೇಗೆ ಪತ್ತೆ ಮಾಡೋದು?
ನಿಮ್ಮ ಮನೆ ಬಳಿ ಗೊಂಬೆ, ಪೂಜೆಯ ಸಾಮಾಗ್ರಿಗಳು, ಕತ್ತರಿಸಿ ಕುಂಕುಮ ತುಂಬಿದ ನಿಂಬೆಹಣ್ಣು, ಸಿಹಿ ಪದಾರ್ಥ, ಕೆಂಪು ಬಟ್ಟೆಯಿಂದ ಕಟ್ಟಲಾದ ವಸ್ತುಗಳು ಕಂಡು ಬಂದ್ರೆ ನಿಮ್ಮ ವಿರುದ್ಧ ನಕಾರಾತ್ಮಕ ಶಕ್ತಿಯ ಪ್ರಯೋಗಕ್ಕೆ ಪ್ರಯತ್ನಗಳು ನಡೆದಿವೆ ಎಂದು ಅರ್ಥ ಮಾಡಿಕೊಳ್ಳಬೇಕು. ಇಂತಹ ವಸ್ತುಗಳು ಭವಿಷ್ಯದಲ್ಲಿ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ಹೇಳಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಜ್ಯೋತಿಷ್ಯದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಜನರು ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ ನಿರ್ಜನ ಪ್ರದೇಶ ಅಥವಾ ಮೂರು ಮಾರ್ಗ ಸಂಧಿಸುವ ಸ್ಥಳದಲ್ಲಿ ಪೂಜೆ ಸಾಮಾಗ್ರಿ, ಆಹಾರ, ಮಡಿಕೆ, ಮೊಟ್ಟೆ, ನಿಂಬೆಹಣ್ಣು, ಕೆಂಪು ಬಟ್ಟೆಯಲ್ಲಿ ಸುತ್ತಿ ಕೆಲ ವಸ್ತುಗಳನ್ನು ಎಸೆದಿರುತ್ತಾರೆ. ಆದ್ರೆ ಇಂತಹ ವಸ್ತುಗಳನ್ನು ಸ್ಪರ್ಶಿಸಲು ಹೋಗಬಾರದು. ಒಂದು ವೇಳೆ ಸ್ಪರ್ಶಿಸಿದ್ರೆ ಅವರಲ್ಲಿರೋ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ಆವರಿಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಿರುತ್ತಾರೆ
ಇದನ್ನೂ ಓದಿ: ದೀಪಾವಳಿ ಲಕ್ಷ್ಮಿ ಪೂಜೆಗೆ ತಾವರೆ ಕಡ್ಡಾಯ ಏಕೆ? ಏನಿದರ ಮಹತ್ವ?
ತಂತ್ರ-ಮಂತ್ರಗಳಿಂದ ಪಾರಾಗೋದು ಹೇಗೆ?
1.ಈರೀತಿಯ ವಸ್ತುಗಳು ಕಾಣಿಸಿದ್ರೆ ಮೊದಲು ಭಯಪಡಬಾರದು. ಶುದ್ಧವಾಗಿ ಮಡಿಯಿಂದ ಸಮೀಪದ ಆಂಜನೇಯನ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿಸಿ, ಹನುಮಾನ್ ಚಾಲೀಸಾ ಪಠಿಸಬೇಕು. ನಂತರ ಆಂಜನೇಯನಿಗೆ ಬೆಲ್ಲ ಅರ್ಪಿಸಿ, ಪ್ರತಿ ಮಂಗಳವಾರ ಅಥವಾ ಶನಿವಾರ ತುಪ್ಪದಿಂದ ದೀಪ ಹಚ್ಚಿದರೆ ನಕಾರಾತ್ಮಕ ಶಕ್ತಿಗಳು ಹತ್ತಿರ ಸುಳಿಯಲ್ಲ.
2.ಗೋವಿನ ಸಗಣಿಗೆ ಸ್ವಲ್ಪ ನೀರು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಇದರ ಮೇಲೆ ನಾಣ್ಯ ಏರಿಸಿ, ಕುಂಕುಮವನ್ನು ಏಳು ಬಾರಿ ಹಚ್ಚಬೇಕು. ನಂತರ ಅದನ್ನು ಏಳು ಬಾರಿ ಎತ್ತಿ ಹಿಡಿದು ಅಡ್ಡರಸ್ತೆಯಲ್ಲಿರಿಸಬೇಕು. ನಂತರ ಹಿಂದಿರುಗಿ ನೋಡದೇ ಬಂದು, ಕೈ-ಕಾಲು, ಮುಖ ತೊಳೆದಕೊಂಡು ಮನೆಯೊಳಗೆ ಹೋಗಿ.
3.ಜನರು ರಸ್ತೆಯಲ್ಲಿಟ್ಟಿರುವ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು. ಇಂತಹ ವಸ್ತುಗಳ ಬದಿಯಿಂದ ಸಾಗಬೇಕು. ಒಂದು ವೇಳೆ ಇಂತಹ ವಸ್ತುಗಳನ್ನು ಮುಟ್ಟಿದ್ರೆ ಅಥವಾ ದಾಟಿದ್ರೆ ಅದರಲ್ಲಿರುವ ನಕಾರಾತ್ಮಕ ಶಕ್ತಿ ನಿಮ್ಮನ್ನು ಪ್ರವೇಶಿಸಬಹುದು. ಈ ರೀತಿಯಾದಾಗ ದೈಹಿಕ, ಮಾನಸಿಕ, ಆರ್ಥಿಕ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಹಾಗಾಗಿ ಇಂತಹ ವಸ್ತುಗಳಿಂದ ದೂರ ಇರೋದು ಒಳ್ಳೆಯದು.
4.ಒಂದು ವೇಳೆ ಇಂತಹ ವಸ್ತುಗಳನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ರೆ ಮನೆ ಹೊರಗೆ ನಿಂತು ತಲೆ ಮೇಲೆ ನೀರು ಸುರಿದುಕೊಳ್ಳಬೇಕು. ಇಡೀ ದೇಹ ಮತ್ತು ನಿಮ್ಮ ಬಟ್ಟೆ ಸಂಪೂರ್ಣ ಒದ್ದೆಯಾಗಿರಬೇಕು. ನಂತರ ಒಂದು ಹಿಡಿ ಸಾಸಿವೆಯನ್ನು ತೆಗೆದುಕೊಂಡು ನಿಮ್ಮ ತಲೆ ಸುತ್ತ ಏಳು ಬಾರಿ ಪ್ರದಕ್ಷಿಣೆ ಹಾಕಿಕೊಂಡು ದೇವಸ್ಥಾನದಲ್ಲಿರುವ ಹೂವಿನ ಕುಂಡದಲ್ಲಿ ಹಾಕಿ. ಇದೆಲ್ಲಾ ಮುಗಿದ್ಮೇಲೆ ಸ್ನಾನ ಮಾಡಿ, ಮನೆಯಲ್ಲಿರುವ ದೇವರ ಮುಂದೆ ದೀಪ ಬೆಳಗಿ ಪೂಜೆ ಸಲ್ಲಿಸಬೇಕು.
ಇದನ್ನೂ ಓದಿ: ದೀಪಾವಳಿ 2024 ರಾಶಿ ಭವಿಷ್ಯ: ಈ 4 ರಾಶಿಯವರಿಗೆ ಶುರುವಾಗಲಿದೆ ಒಳ್ಳೆಯ ದಿನಗಳು