ಕೊಲೆ ಆರೋಪಿ ನಟ ದರ್ಶನ್‌ಗೆ ಬೇಲ್‌ ಸಿಕ್ಕಿದ್ದು ಖುಷಿ ತಂದಿದೆ: ಸಚಿವ ಜಮೀರ್ ಅಹ್ಮದ್ ಖಾನ್‌

Published : Oct 30, 2024, 06:41 PM ISTUpdated : Oct 30, 2024, 06:42 PM IST
ಕೊಲೆ ಆರೋಪಿ ನಟ ದರ್ಶನ್‌ಗೆ ಬೇಲ್‌ ಸಿಕ್ಕಿದ್ದು ಖುಷಿ ತಂದಿದೆ:  ಸಚಿವ ಜಮೀರ್ ಅಹ್ಮದ್ ಖಾನ್‌

ಸಾರಾಂಶ

ನ್ಯಾಯಾಲಯದಲ್ಲಿ ಬೇಲ್ ಆಗಿದೆ. ಆತ್ಮೀಯರು ಇರೋ ಕಾರಣಕ್ಕಾಗಿ ಖುಷಿಯಾಗಿದೆ. ಸಹಜವಾಗಿಯೇ ಖುಷಿಯಾಗಿದೆ. ನಾನು ನಟ ದರ್ಶನ್‌ ಈ ಘಟನೆ ಆಗೋ ಮುಂಚೆ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು. ಈಗ ಹೋಗಿ ಆರೋಗ್ಯ ವಿಚಾರಿಸುತ್ತೇನೆ ಎಂದ ಸಚಿವ ಜಮೀರ್ ಅಹ್ಮದ್ ಖಾನ್‌   

ಹಾವೇರಿ(ಅ.30):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿದೆ ಅಂತ ಗೊತ್ತಾಗಿದೆ. ಅಪ್ತರಾಗಿದ್ದರು ಖುಷಿಯಾಗಿದೆ. ನಿಮಗೆ ಖುಷಿಯಾಗಿದೆ ತಾನೆ?. ನ್ಯಾಯಾಲಯದಲ್ಲಿ ಬೇಲ್ ಆಗಿದೆ. ಆತ್ಮೀಯರು ಇರೋ ಕಾರಣಕ್ಕಾಗಿ ಖುಷಿಯಾಗಿದೆ. ಸಹಜವಾಗಿಯೇ ಖುಷಿಯಾಗಿದೆ. ನಾನು ದರ್ಶನ್‌ ಈ ಘಟನೆ ಆಗೋ ಮುಂಚೆ ಪ್ರತಿ ತಿಂಗಳು ಎರಡು ಸಲ ಭೇಟಿಯಾಗುತ್ತಿದ್ದವು. ಈಗ ಹೋಗಿ ಆರೋಗ್ಯ ವಿಚಾರಿಸುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ ಹೇಳಿದ್ದಾರೆ. 

ಇಂದು(ಬುಧವಾರ) ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಉಪಚುನಾವಣೆಯಲ್ಲಿ ಬಿಜೆಪಿ ವಕ್ಫ್‌ ಪ್ರಕರಣ ಎಬ್ಬಿಸಿದ್ದಾರೆ. ಯಾರ ಆಸ್ತಿಯನ್ನ ಬೇರೆ ಅವರು ತೆಗೆದುಕೊಳ್ಳುಲು ಸಾಧ್ಯನಾ?. ನಿಮ್ಮ ಆಸ್ತಿ ತೆಗೆದುಕೊಳ್ಳಲು ಸಾಧ್ಯನಾ?. ಪೊಲಿಟಿಕಲ್ ಗಿಮಿಕ್ ಇದು. ‌ಮಹಾರಾಷ್ಟ್ರ ಚುನಾವಣೆ ಇದೆ. ಹೀಗಾಗಿ ಚುನಾವಣೆ ಗಿಮಿಕ್, ಯಾವುದೇ ವಿಷಯ ಇಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 
ರೈತರು ಅವರ ಜಾಗೆ ತೆಗೆದುಕೊಳ್ಳುಲು ಆಗಲ್ಲ. ರೈತರ ಆಸ್ತಿ ಮುಟ್ಟಲು ಸಾಧ್ಯನಾ?. ಮುಖ್ಯಮಂತ್ರಿ ಆಗಿ ಅವರು ಹಣದ ಮೂಟೆ ಹೊತ್ತುಕೊಂಡು ಓಡಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕ್ಷೇತ್ರ ಇದು. ಮೈಸೂರು, ಶಿವಮೊಗ್ಗ, ಧಾರವಾಡ ಆಯಾ ಜಿಲ್ಲೆಗಳನ್ನು ಮುಖ್ಯಮಂತ್ರಿಗಳು ಹೇಗೆ ಅಭಿವೃದ್ಧಿ ಮಾಡಿದ್ದಾರೆ ನೋಡಿ. ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ನೋಡಿ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿ ಕಾರಿದ್ದಾರೆ. 

ದರ್ಶನ್ ಸರ್ ನಿರಪರಾಧಿ ಆಗ್ಬಿಟ್ರೆ ನಂಗೆ ಹಬ್ಬ; ಏಷ್ಯಾನೆಟ್ ಸುವರ್ಣಗೆ ತರುಣ್ ಸುಧೀರ್ ಹೇಳಿಕೆ!

ಸಿದ್ದರಾಮಯ್ಯ ಇಡಿ ರಾಜ್ಯವನ್ನ ಅಭಿವೃದ್ಧಿ ಮಾಡಿದ್ದಾರೆ. ಶಿಗ್ಗಾವಿ ಮತದಾರರು ಹಣಕ್ಕೆ ಮಾರಾಟವಾಗುತ್ತಾರಾ. ಇಲ್ಲಿ ಸ್ವಾಭಿಮಾನದ ಜನ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಶಿಗ್ಗಾವಿಯಲ್ಲಿ 8 ಸಾವಿರ ಲೀಡ್ ಅಗಿದೆ. ಆಗ ಬೊಮ್ಮಾಯಿ ಶೇಂಗಾ ಬೀಜ ತಿನ್ನುತ್ತಿದ್ದರಾ? ಎಂದು ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ. 

PREV
Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ