
ನಟ ದರ್ಶನ್ (Darshan) ಮಧ್ಯಂತರ ಜಾಮೀನು ಪಡೆದುಕೊಂಡಿದ್ದು ಗೊತ್ತೇ ಇದೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ಗೆ ಬೇಲ್ ಸಿಕ್ಕ ಖುಷಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ತುರುಣ್ ಸುಧೀರ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು 'ಈಗ ಸ್ವಲ್ಪ ನಿರಾಳ ಆಗಿದೆ. ಅವರು ನಿರಪರಾಧಿ ಆಗಿ ಹೊರ ಬರಬೇಕು.
ಅವರು ಆರೋಗ್ಯದ ಕಡೆ ಗಮನ ಕೊಡಲೇಬೇಕು. ಬೆನ್ನು ನೋವಿನ ವಿಷಯ ತಿಳಿದು ಭಯ ಆಗಿತ್ತು. ದರ್ಶನ್ ಸರ್ ಸಿನಿಮಾಗಾಗಿ ನೂರಾರು ಕೋಟಿ ಬಂಡವಾಳ ಹೂಡಿರೋರ ಕಥೆ ಏನು ಅಂತ ಟೆನ್ಷನ್ ಆಗಿತ್ತು. ಈಗ ಚಿಕಿತ್ಸೆ ಪೆಡೆದು ಮತ್ತೆ ರೆಡಿ ಆಗುತ್ತಾರೆ. ದರ್ಶನ್ ಸರ್ ಆರೋಗ್ಯದ ದೃಷ್ಟಿಯಲ್ಲಿ ನೋಡಿದಾಗ ಜಾಮೀನು ಸಿಕ್ಕಿದ್ದು ಖುಷಿ ಆಗಿದೆ. ದರ್ಶನ್ ಆರೋಪಿ ಹೊರತು ಅಪರಾಧಿ ಅಲ್ಲ. ಒಬ್ಬ ನಟನಿಗೆ ಫಿಟ್ನೆಸ್ ತುಂಬಾ ಮುಖ್ಯ' ಎಂದಿದ್ದಾರೆ ತರುಣ್ ಸುಧೀರ್.
ನಟ ದರ್ಶನ್ ಪುತ್ರ ವಿನೀಶ್‌ಗೆ ಭಾರೀ ಗಿಫ್ಟ್; ನಾಳೆ ಅಪ್ಪನ ಜೊತೆ ಹುಟ್ಟುಹಬ್ಬ!
ಆದರೆ ದರ್ಶನ್ ಸರ್ ಆರೋಗ್ಯ ಹಾಳಾಗಿದ್ದು ನನಗೆ ಆತಂಕ ಆಗಿತ್ತು. ದರ್ಶನ್ ಸರ್ ಜಾಮೀನು ಸಿಗಲಿ ಅಂಥ ದೇವರಲ್ಲಿ ಬೇಡಿದ್ದೆ. ಅವರ ಹೆಲ್ತ್ ಸರಿ ಹೋಗಲಿ, ಅವರನ್ನ ನಂತರ ಭೇಟಿ ಮಾಡುತ್ತೇನೆ. ಕಾಟೇರ ಸಿನಿಮಾ ಶೂಟಿಂಗ್ ಟೈಂ ನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ರು. ಆದರೂ ಶೂಟಿಂಗ್ ನಿಲ್ಲಿಸೋದು ಬೇಡ ಅಂದ್ರು. ಕಾಟೇರ ಟೈಮ್ ನಲ್ಲೇ ಬೆನ್ನು ನೋವಿನ ಬಗ್ಗೆ ಮಾತಾಡಿದ್ರು.
ಆಗ ಆಪರೇಷನ್ ಅಂಥ ಹೋದ್ರೆ ಚಿತ್ರೀಕರಣ ನಿಲ್ಲುತ್ತೆ ಅಂತ ಅಂದಿದ್ರು. ಬಳ್ಳಾರಿ ಜೈಲಿಗೆ ಹೋದ ಮೇಲೆ ಅವರ ಬೆನ್ನು ನೋವು ಹೆಚ್ಚಾಗಿದೆ. ದರ್ಶನ್ ಸರ್ ನೋವು ತೋರಿಸದೆ ಇರುವಂತಹ ವ್ಯಕ್ತಿ. ದರ್ಶನ್ ಸರ್ ಆರೋಗ್ಯ ಸರಿ ಹೋಗುತ್ತಿದ್ದಂತೆ ಅವರನ್ನ ಭೇಟಿ ಮಾಡುತ್ತೇನೆ. ದರ್ಶನ್ ಸರ್ ನಿರಪರಾಧಿ ಅಂತ ಆದ್ರೆ ಅದೆ ನನಗೆ ಹಬ್ಬ...' ಎಂದಿದ್ದಾರೆ ಏಷ್ಯಾನೆಟ್ ಸುವರ್ಣ ಜೊತೆ ಮಾತನಾಡಿರುವ ದರ್ಶನ್ ನಟನೆಯ 'ಕಾಟೇರ' ಸಿನಿಮಾ ನಿರ್ದೇಶಕರಾದ ತರುಣ್ ಸುಧೀರ್.
ಮಧ್ಯಂತರ ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಆಪ್ತರ ಒಳಮಾತು ಬಹಿರಂಗ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.