Mar 12, 2023, 5:22 PM IST
ಬೆಂಗಳೂರು (ಮಾ.12): ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ನಮ್ಮದು ಅಂತಿರೋರ ಮಾತಿನ ಯುದ್ಧ..! ಮೋದಿ ಬರುವ ಮೊದಲೇ ರಣರಣವಾಯಿತು ರಸ್ತೆ ಯುದ್ಧ..! ಈ ಹೈವೇ ಕ್ರೆಡಿಟ್ ವಾರ್‌ಗೆ ಕೈ-ಕಮಲ ಮಾತ್ರ ಕುಸ್ತಿಗೆ ಬಿದ್ದಿಲ್ಲ. ಬದಲಾಗಿ ದಳವೂ ಕೂಡ ಕ್ರೆಡಿಟ್‌ಗಾಗಿ ರೋಡ್ ಶೋ ಅಸ್ತ್ರ ಪ್ರಯೋಸಿದೆ. ಹಾಗಾದರೆ ಈ ರಸ್ತೆಯ ಕ್ರೆಡಿಟ್ ಯಾರಿಗೆ ಸೇರಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಬೆಂಗಳೂರು ಮೈಸೂರು ಹೆದ್ದಾರಿ ಒಂದು, ನೂರಾರು ಹೆಸರು. ರಾಜಕೀಯ ಕೆಸರು ಅನ್ನೋ ಹಾಗಾಗಿದೆ. ಎಲೆಕ್ಷನ್ ಹೊತ್ತಲ್ಲಿ ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಕ್ರೆಡಿಟ್‌ಗಾಗಿ ಜೆಡಿಎಸ್ ಕೂಡ ಸ್ಕೆಚ್ ಹಾಕಿಕೊಂಡಿದೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ನಮ್ಮದು ಅಂತಿರೋರ ಮಾತಿನ ಮಲ್ಲಯುದ್ಧ ಇನ್ನೂ ತಾರಕಕ್ಕೇರಿದೆ. ಮೋದಿ ಬರುವ ಮೊದ್ಲೆ ದಶಪಥ ಹೈವೇ ರಣರಣವಾಗಿದೆ. 3 ಪಕ್ಷಗಳ ಟಾಕ್ ವಾರ್ ತಾರಕಕ್ಕೇರಿದೆ. ಮಾತಿನ ಮಲ್ಲಯುದ್ಧಕ್ಕೆ ಬಿದ್ದಿರೋ ನಾಯಕರಿಗೆ ಮೋದಿ ಏನ್ ಉತ್ತರ ಕೊಡ್ತಾರೆ ಅನ್ನೋದೇ ಕುತುಹಲ ಶುರುವಾಗಿದೆ. ಆದರೆ, ಇದಕ್ಕೆ ದಿನಾಂಕದ ಸಹಿತ ರಸ್ತೆ ಅಭಿವೃದ್ಧಿಗೆ ಮಾಡಲಾದ ಎಲ್ಲ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಚ್ಚಿಟ್ಟಿದ್ದು, ಈ ರಸ್ತೆಯ ಕ್ರೆಡಿಟ್ ಸಂಪೂರ್ಣವಾಗಿ ಬಿಜೆಪಿ ಸರ್ಕಾರದ್ದಾಗಿದೆ ಎಂದು ತಿಳಿಸಿದರು.