ದೀಪಾವಳಿಗೆ ಸಿಹಿ ಸುದ್ದಿ ಹಂಚಿಕೊಂಡ ಹರಿಪ್ರಿಯಾ; ಡಾಲಿ ಧನಂಜಯ ಮದುವೆಗೂ ಮುನ್ನ, ವಸಿಷ್ಠ ತಂದೆ ಆಗ್ತಾರೆ!

By Sathish Kumar KH  |  First Published Nov 1, 2024, 12:05 PM IST

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವದಂದು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು (ನ.01): ಕರ್ನಾಟಕ ಜನತೆ ಕನ್ನಡ ರಾಜ್ಯೋತ್ಸದ ಖುಷಿಯಲ್ಲಿರುವಾಗ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಈ ಖುಷಿಯನ್ನು ಡಬಲ್ ಮಾಡಿಕೊಂಡಿದ್ದಾರೆ. ಇಷ್ಟು ದಿನ ಬೇಬಿಬಂಪ್ ಕಾಣಿಸುತ್ತಿದೆ ನೀವು ಪ್ರಗ್ನೆಂಟಾ ಎಂದು ಕೇಳಿದರೂ ಉತ್ತರಿಸದ ನಟಿ ಹರಿಪ್ರಿಯಾ ಇದೀಗ ನಾವು ನಮ್ಮ ಕುಡಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳುವ ಮೂಲಕ ತಾವು ಗರ್ಭಿಣಿ ಎಂಬುದನ್ನು ಖಚಿತಪಡಿಸಿದ್ದಾರೆ.

ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ಹರಿಪ್ರಿಯಾ ಅವರು, 'ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು.. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ..!! ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ. ನಿಮ್ಮ ಸಿಂಹಪ್ರಿಯ' ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಕೊನೆಗೂ ಡಾಲಿ ಮದುವೆ ಫಿಕ್ಸ್.. ಡಾಕ್ಟರ್ ಜೊತೆ ಧನಂಜಯ್ ಕಲ್ಯಾಣ: ಹುಡುಗಿ ಯಾರು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಟಗರು ಸಿನಿಮಾದ ಮೂಲಕ ಖಡಕ್ ವಿಲನ್‌ಗಳಾಗಿ ಎಂಟ್ರಿ ಕೊಟ್ಟ ಡಾಲಿ ಧನಂಜಯ ಮತ್ತು ವಸಿಷ್ಠ ಸಿಂಹ ಇಬ್ಬರೂ ಆಪ್ತ ಸ್ನೇಹಿತರು. ಆದರೆ, ಡಾಲಿ ಧನಂಜಯ ಇಂದು ತಾನು ವೈದ್ಯೆಯನ್ನು ಮದುವೆ ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ನಟ ವಸಿಷ್ಠ ಸಿಂಹ ತಾನು ತಂದೆ ಆಗುತ್ತಿದ್ದೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಚಂದನವನದ ಮುದ್ದಾದ ಜೋಡಿಗಳಲ್ಲಿ ಒಂದಾಗಿರುವ  ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasishta Simha) ಬರ್ತ್ ಡೇ ಸೆಲೆಬ್ರೇಶನ್ ಗಾಗಿ ಮಾಲ್ಡೀವ್ಸ್‌ಗೆ ಹೋಗಿ ತಮ್ಮ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದರು. ಫೋಟೊ ಮತ್ತು ವಿಡೀಯೋಗಳನ್ನು ಶೇರ್ ಮಾಡಿರುವ ಹರಿಪ್ರಿಯಾ ಬರ್ತ್ ಡೇ ವೀಕ್ (birthday week) ಇಲ್ಲಿದೆ ಎಂದು ಪೋಸ್ಟ್ ಮಾಡಿಕೊಂಡಿದ್ದರು. ಹರಿಪ್ರಿಯಾ ಮತ್ತು ವಸಿಷ್ಠ (VAsistha Simha) ಶೇರ್ ಮಾಡಿರುವಂತಹ ಫೋಟೊಗಳನ್ನು ಮಾಲ್ಡೀವ್ಸ್ ಹೋಗಿರುವುದು ಖಚಿತವಾಗಿತ್ತು. ಇದೀಗ ಮೊನ್ನೆ ಬರ್ತಡೇ ಆಚರಿಸಿಕೊಂಡ ಸಿಂಹಪ್ರಿಯಾ ಜೋಡಿ ಇದೀಗ ತಾವು ಅಪ್ಪ-ಅಮ್ಮ ಆಗುತ್ತಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ನಟಿ ಹರಿಪ್ರಿಯಾ ಪ್ರೆಗ್ನೆಂಟ್: ಬೇಬಿ ಬಂಪ್ ನೋಡಿ ಖಚಿತಪಡಿಸಿದ ಅಭಿಮಾನಿಗಳು!

ಹರಿಪ್ರಿಯಾ ಅವರು ಪೋಸ್ಟ್ ಹಂಚಿಕೊಂಡ ಬೆನ್ನಲ್ಲಿಯೇ ನೂರಾರು ಅಭಿಮಾನಿಗಳು ಕಂಗ್ರಾಜುಲೇಷನ್ಸ್ ಎಂದು ಶುಭ ಕೋರಿದ್ದಾರೆ. ಇನ್ನು ಕೆಲವರು ಜ್ಯೂನಿಯರ್ ಸಿಂಹ ಬರ್ತಾನೆ ಎಂದು ಹೇಳಿದ್ದಾರೆ. ಆದರೆ, ಮತ್ತೊಬ್ಬರು ನಿಮಗೆ ಮೊದಲು ಹೆಣ್ಣು ಮಗು ಹುಟ್ಟುತ್ತದೆ. ಹೆಣ್ಣು ಮಗು ಆದ ನಂತರ 2ನೇ ಮಗು ಗಂಡು ಮಗು ಆಗುತ್ತದೆ ಎಂದು ಹೇಳಿದ್ದಾರೆ. ಇನ್ನು ಈ ಮೊದಲೇ ನಿಮ್ಮ ವಿಡಿಯೋದಲ್ಲಿ ನಿಮ್ಮ ನಡಿಗೆ ಹಾಗೂ ಹೊಟ್ಟೆಯನ್ನು ನೋಡಿ ನೀವು ಪ್ರಗ್ನೆಂಟ್ ಅಲ್ವಾ ಎಂದು ಕಾಮೆಂಟ್ ಮಾಡಿದ್ದೆ. ನೀವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮಗೆ ಈಗ 5 ತಿಂಗಳು ಆಗಿದೆ ಅಲ್ವಾ? ಎಂದು ಕೇಳಿದ್ದಾರೆ.

click me!