ಬೆನ್‌ ಸ್ಟೋಕ್ಸ್‌ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ!

By Kannadaprabha News  |  First Published Nov 1, 2024, 11:09 AM IST

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮನೆ ಕಳ್ಳತನವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 


ಲಂಡನ್‌: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಪಾಕಿಸ್ತಾನ ಪ್ರವಾಸದಲ್ಲಿದ್ದಾಗ ಅವರ ಮನೆಗೆ ನುಗ್ಗಿದ ದರೋಡೆಕೋರರು ಚಿನ್ನಾಭರಣ ಸೇರಿದಂತೆ ದುಬಾರಿ ವಸ್ತುಗಳನ್ನು ದೋಚಿದ್ದಾರೆ. ಈ ಬಗ್ಗೆ ಸ್ವತಃ ಸ್ಟೋಕ್ಸ್‌ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

‘ಅ.17ರಂದು ಕ್ಯಾಸ್ಟಲ್‌ ಈಡನ್‌ನಲ್ಲಿರುವ ನನ್ನ ಮನೆಗೆ ನುಗ್ಗಿದ ಕೆಲ ಮುಸುಕುಧಾರಿಗಳು ಚಿನ್ನಾಭರಣ ಸೇರಿ ದುಬಾರಿ ವಸ್ತುಗಳನ್ನು ದೋಚಿದ್ದಾರೆ. ಆ ವಸ್ತುಗಳ ಜೊತೆ ನಾನು, ನನ್ನ ಕುಟುಂಬ ಭಾವನಾತ್ಮಕ ಸಂಬಂಧ ಹೊಂದಿದೆ. ಅದರ ನಷ್ಟ ಭರಿಸಲಾಗದು. ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿರುವಾಗಲೇ ಈ ಘಟನೆ ನಡೆದಿರುವುದು ಆಘಾತಕಾರಿ’ ಎಂದಿದ್ದಾರೆ. ಅಲ್ಲದೆ, ಕಳವಾದ ಉಂಗುರ, ಮಾಲೆ, ಬ್ಯಾಗ್‌ನ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

pic.twitter.com/Rb1mAk8Jrh

— Ben Stokes (@benstokes38)

Tap to resize

Latest Videos

undefined

ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಸೋಲು ಮುಖಭಂಗ ಅನುಭವಿಸಿದೆ. ಮೊದಲ ಟೆಸ್ಟ್ ಪಂದ್ಯ ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡವು ಆ ಬಳಿಕ ಸತತ ಎರಡು ಟೆಸ್ಟ್ ಪಂದ್ಯ ಸೋತು ಸರಣಿ ಕೈಚೆಲ್ಲಿದೆ.

ಇಂದಿನಿಂದ ಹಾಂಕಾಂಗ್‌ ಸಿಕ್ಸ್ ಕ್ರಿಕೆಟ್‌: 12 ತಂಡಗಳು ಕಣಕ್ಕೆ; ಭಾರತ ತಂಡಕ್ಕೆ ಕನ್ನಡಿಗ ಕ್ಯಾಪ್ಟನ್

ಟೆಸ್ಟ್‌ ರ್‍ಯಾಂಕಿಂಗ್‌: ಜಸ್ಪ್ರೀತ್‌ ಬುಮ್ರಾ ಹಿಂದಿಕ್ಕಿ ಕಗಿಸೋ ರಬಾಡ ನಂಬರ್‌ 1

ದುಬೈ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಐಸಿಸಿ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಒಂದೂ ವಿಕೆಟ್‌ ಪಡೆಯಲು ವಿಫಲರಾದ ಬೂಮ್ರಾ, ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಎರಡು ಸ್ಥಾನ ಕುಸಿದು ಮೂರನೇ ಸ್ಥಾನ ತಲುಪಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಪಂದ್ಯದ ಮೂಲಕ ಟೆಸ್ಟ್‌ನಲ್ಲಿ 300 ವಿಕೆಟ್‌ ಮೈಲುಗಲ್ಲು ಸಾಧಿಸಿದ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅಗ್ರಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾದ ಜೋಶ್‌ ಹೇಜಲ್‌ವುಡ್‌ 2ನೇ ಸ್ಥಾನಕ್ಕೇರಿದ್ದಾರೆ. ಆರ್‌.ಅಶ್ವಿನ್‌ ಎರಡು ಸ್ಥಾನ ಕುಸಿದು ನಾಲ್ಕನೇ ಸ್ಥಾನ ತಲುಪಿದ್ದಾರೆ.

ವೈಟ್‌ವಾಶ್ ಮುಖಭಂಗದಿಂದ ಪಾರಾಗುತ್ತಾ ಟೀಂ ಇಂಡಿಯಾ?

ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್‌ ಒಂದು ಸ್ಥಾನ ಮೇಲೇರಿ ಮೂರನೇ ಸ್ಥಾನ ತಲುಪಿದ್ದು, ರಿಷಭ್‌ ಪಂತ್‌ ಹಾಗೂ ವಿರಾಟ್‌ ಕೊಹ್ಲಿ ಕ್ರಮವಾಗಿ 11 ಮತ್ತು 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ರಿಷಭ್‌ 5, ಕೊಹ್ಲಿ 6 ಸ್ಥಾನ ಕುಸಿತ ಕಂಡಿದ್ದಾರೆ. ಶುಭ್‌ಮನ್‌ ಗಿಲ್‌ 20, ರೋಹಿತ್‌ ಶರ್ಮಾ 24ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಾಗೂ ಆರ್‌.ಅಶ್ವಿನ್‌ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.
 

click me!