ಯಾರು ನಿನ್ನಿಂದಾಗಲ್ಲ ಅಂತಾರೋ ಅದನ್ನೇ ಮಾಡಿ ತೋರಿಸುವವಳು ನಾನು: ಪ್ರಿಯಾಂಕಾ ಉಪೇಂದ್ರ

By Kannadaprabha News  |  First Published Nov 1, 2024, 11:29 AM IST

ಪೊಲೀಸ್‌ ಇಲಾಖೆಗೆ ಹೆಣ್ಣುಮಕ್ಕಳು ಬಂದರೆ ಅವರ ಕೊಡುಗೆ ಹೇಗಿರಬಹುದು ಎಂಬುದನ್ನು ಹೇಳುತ್ತಾ ಈ ಪಾತ್ರವನ್ನು ಲೇಡಿ ಪೊಲೀಸರಿಗೆ ಡೆಡಿಕೇಟ್‌ ಮಾಡಿದ್ದೇವೆ ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.


ಪ್ರಿಯಾ ಕೆರ್ವಾಶೆ

* ಉಗ್ರಾವತಾರ ಕಥೆ ಕೇಳಿದ ಕೂಡಲೇ ಒಪ್ಪಿಕೊಂಡಿರಂತೆ?
ಹೌದು. ಪವರ್‌ಫುಲ್‌ ಪೊಲೀಸ್‌ ಆಫೀಸರ್‌ ಪಾತ್ರ. ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಇರುತ್ತೆ. ಅದಕ್ಕೆಲ್ಲ ನಿಮ್ಮನ್ನು ಟ್ರೈನ್‌ ಮಾಡ್ತೀವಿ ಅಂದಿದ್ದರು. ಆ ಹೊತ್ತಿಗೆ ಹಾರರ್‌ ಥ್ರಿಲ್ಲರ್‌ ಕಥೆಗಳೇ ಹೆಚ್ಚು ಬರುತ್ತಿದ್ದವು. ನಾನು ಒಂದು ಬದಲಾವಣೆ ಎದುರು ನೋಡುತ್ತಿದ್ದೆ. ಈ ಸಿನಿಮಾದ ಪಾತ್ರ ಮೊದಲ ನರೇಶನ್‌ನಲ್ಲೇ ಇಷ್ಟವಾಯ್ತು. ಕಥೆಗೆ ಸಂಬಂಧಿಸಿ ಒಂದಿಷ್ಟು ಐಡಿಯಾಗಳನ್ನು ಹೇಳಿ ಗ್ರೀನ್‌ ಸಿಗ್ನಲ್‌ ಕೊಟ್ಟೇ ಬಿಟ್ಟೆ.

Tap to resize

Latest Videos

undefined

* ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ನಿಮ್ಮ ಗ್ಲ್ಯಾಮರ್ ಹೆಚ್ಚಾಯ್ತು ಅಂದಿದ್ದರು ಉಪೇಂದ್ರ..
ಇದು ನನ್ನ ರಿಯಲ್‌ ಫೇಸ್. ಮೇಕಪ್‌ ಮೂಲಕ ಡಲ್‌ ಮಾಡಬಹುದಿತ್ತು. ಆದರೆ ಹಾಗೆ ಫೇಕ್ ಲುಕ್‌ನಲ್ಲಿ ಬರುವುದಕ್ಕಿಂತ ನನ್ನ ಒರಿಜಿನಲ್‌ ಲುಕ್‌ನಲ್ಲಿ ಸ್ಕ್ರೀನ್‌ ಮೇಲೆ ಬರುವುದೇ ಬೆಟರ್ ಅನಿಸಿತು. ಈ ಸಿನಿಮಾ ಗೆದ್ದ ಮೇಲೆ ಡಲ್‌ ಮೇಕಪ್‌ನಲ್ಲಿ ಇನ್ನೊಮ್ಮೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಬರುತ್ತೇನೆ.

ಹೊರ ರಾಜ್ಯದಿಂದ ಬಂದು ಕನ್ನಡಕ್ಕೆ ಹೆಗಲು ಕೊಟ್ಟು 'ಪ್ರೇಮ ಭಾಷೆ ಕನ್ನಡ' ಎಂದ ತಾರೆಯರಿವರು!

* ನಿಮ್ಮ ಮೊದಲ ಆ್ಯಕ್ಷನ್‌ ಸಿನಿಮಾ. ರಿಯಲ್ ಫೈಟ್ಸ್‌ ಖುಷಿ ಕೊಟ್ಟಿತಾ? ಬೇಡಪ್ಪಾ ಅನಿಸಿತಾ?
ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು 10 ಸಲ ಯೋಚಿಸುವವಳು ನಾನು. ಈ ಸಿನಿಮಾದ ಸ್ಟಂಟ್ಸ್‌ಗೆ ನಾನು ಕಂಪ್ಲೀಟ್‌ ರೆಡಿಯಾಗುವ ವಿಶ್ವಾಸ ಇದ್ದ ಕಾರಣವೇ ಒಪ್ಪಿಕೊಂಡೆ. ಆಮೇಲೆ ಹಿಂತಿರುಗಿ ನೋಡುವ ಮಾತೇ ಬರಲಿಲ್ಲ. ಕೆಲವರೆಲ್ಲ ಫೈಟ್‌ ಬೇರೆಯವರಿಂದ ಮಾಡಿಸಿ ಅಂದರು, ಕೆಲವರು ಈ ರೀತಿ ಪಾತ್ರದ ನಿಮಗೆ ಚೆನ್ನಾಗಿರಲ್ಲ ಅಂದರು. ಯಾರು ಒಂದು ಟಾಸ್ಕ್‌ ನಿನ್ನಿಂದಾಗಲ್ಲ ಅಂತಾರೋ ಅದನ್ನೇ ಮೊದಲು ಮಾಡಿ ತೋರಿಸುವವಳು ನಾನು. ಹೀಗಾಗಿ ಇಷ್ಟಪಟ್ಟು, ಕಷ್ಟಪಟ್ಟು ರಿಯಲ್‌ ಫೈಟ್‌ ದೃಶ್ಯಗಳಲ್ಲಿ ತೊಡಗಿಸಿಕೊಂಡೆ. ಇದಕ್ಕಾಗಿ ಸ್ಟಂಟ್‌ ಮಾಸ್ಟರ್ಸ್‌ ಹತ್ರ ಟ್ರೈನಿಂಗ್‌ ಪಡೆದಿದ್ದೆ. ತೆರೆಯ ಮೇಲೆ ರಿಸಲ್ಟ್‌ ನೋಡುವಾಗ ಕಷ್ಟಪಟ್ಟಿದ್ದಕ್ಕೂ ಸಾರ್ಥಕ ಅನಿಸುತ್ತೆ.

* ಈ ಸಿನಿಮಾದಲ್ಲಿರುವ ಸಿದ್ದಿ ಹಾಡಿನ ಬಗ್ಗೆ?
ಈ ಹಾಡನ್ನು ಮೊದಲ ಸಲ ಕೇಳಿದ್ದೇ ಮನಸ್ಸಲ್ಲಿ ಕುಳಿತು ಬಿಟ್ಟಿತು. ಹಿಂದೆ ನನ್ನ ‘ಹೂವೆ ಹೂವೆ’ ಹಾಡಿನ ವಿಚಾರದಲ್ಲೂ ಹೀಗೇ ಆಗಿತ್ತು. ಆ ಹಾಡಿನಂತೆ ಇದೂ ಕೂಡ ಮಿಲಿಯನ್‌ಗಟ್ಟಲೆ ವೀಕ್ಷಣೆ ದಾಖಲಿಸಿ ಮೆಚ್ಚುಗೆ ಪಡೆಯುತ್ತಿದೆ. ಬಹಳ ಖುಷಿ ಇದೆ.

* ದೀಪಾವಳಿ ಹಬ್ಬಕ್ಕೆ ಸಿನಿಮಾ ಸೂಪರ್ ಬ್ಲಾಸ್ಟ್ ಆಗುತ್ತಾ?
ನಿಮ್ಮ ಹಾರೈಕೆ ನಿಜವಾಗಲಿ. ಹಲವರಿಗೆ ಸ್ಫೂರ್ತಿಯಾಗುವ, ಹೆಣ್ಣುಮಕ್ಕಳ ದೌರ್ಜನ್ಯದ ವಿರುದ್ಧ ಸಿಡಿದೇಳುವ ಇಂಥಾ ಸಿನಿಮಾಗಳು ನಿಜಕ್ಕೂ ಗೆಲ್ಲಬೇಕು. ಆಧುನಿಕ ಕಾಲಘಟ್ಟ, ಸುಶಿಕ್ಷಿತ ಸಮಾಜವಿದ್ದರೂ ಮಹಿಳೆಯರ ಮೇಲಿನ ಅತ್ಯಾಚಾರ, ಆ್ಯಸಿಡ್‌ ದಾಳಿ, ಹಿಂಸೆ ದೌರ್ಜನ್ಯಗಳೆಲ್ಲ ಮೇರೆ ಮೀರಿ ಏರುತ್ತಿವೆ. ಹೆಣ್ಣುಮಕ್ಕಳ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಮನಸ್ಥಿತಿ ಬೆಳೆಯುತ್ತಿವೆ. ನಮ್ಮ ಸಿನಿಮಾ ಇಂಥವನ್ನೆಲ್ಲ ಪ್ರಶ್ನೆ ಮಾಡುತ್ತದೆ. ಹೆಣ್ಣುಮಕ್ಕಳಲ್ಲಿ ಬಲ ತುಂಬುವ, ಗಂಡು ಮಕ್ಕಳಲ್ಲಿ ಪರಿವರ್ತನೆ ಮೂಡಿಸುವ ಕೆಲಸ ಮಾಡುತ್ತದೆ.

ಮಾತೃಭಾಷೆ ಕನ್ನಡ ಅಲ್ಲ, ಬದುಕಿನ ಭಾಷೆ ಕನ್ನಡ ಅಂದುಕೊಂಡ ಬೇರೆ ಭಾಷೆ ಹಿನ್ನೆಲೆಯ ಸೆಲೆಬ್ರಿಟಿಗಳು ಇವರು!

* ಸಿನಿಮಾದ ಹೈಲೈಟ್ಸ್‌?
- ಹೀರೋಯಿನ್‌ ಆ್ಯಕ್ಷನ್‌ ಸೀಕ್ವೆನ್ಸ್‌ ಬಹಳ ವರ್ಷದ ಬಳಿಕ ಬರುತ್ತಿದೆ. ಆರೇಳು ರೋಚಕ ಫೈಟ್‌ಗಳಿವೆ.
- ಸಾಮಾಜಿಕ ಸಂದೇಶವನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದ್ದೇವೆ.
- ಪೊಲೀಸ್‌ ಇಲಾಖೆಗೆ ಹೆಣ್ಣುಮಕ್ಕಳು ಬಂದರೆ ಅವರ ಕೊಡುಗೆ ಹೇಗಿರಬಹುದು ಎಂಬುದನ್ನು ಹೇಳುತ್ತಾ ಈ ಪಾತ್ರವನ್ನು ಲೇಡಿ ಪೊಲೀಸರಿಗೆ ಡೆಡಿಕೇಟ್‌ ಮಾಡಿದ್ದೇವೆ.
- 12 ಜನ ಹೊಸ ನಟಿಯರು ಬಹಳ ಪರಿಣಾಮಕಾರಿಯಾಗಿ ನಟಿಸಿದ್ದಾರೆ.
- ಕೃಷ್ಣ ಬಸ್ರೂರ್‌ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಸೊಗಸಾಗಿ ಬಂದಿವೆ.

click me!