ಮೂಲತಃ ಕೇರಳದ ಈ ನಟಿ ಭಾವನಾ ಮೆನ್, ಮಲಯಾಳಂ ಸಿನಿರಂಗದ ಮೂಲಕ ಸಿನಿಮಾ ನಟನೆಗೆ ಬಂದರು. ನಟಿಗೆ ಬೇಕಾದ ಅಂದಚೆಂದದ ಜೊತೆಗೆ ಅಭಿನಯದಲ್ಲೂ ಸೈ ಎನ್ನಿಸಿಕೊಂಡಿದ್ದ ಭಾವನಾಗೆ ಅವಕಾಶಗಳ ಸುರಿಮಳೆಯೇ ಆಯ್ತು...
ನಟಿ ಭಾವನಾ ಮೆನನ್ (Bhavana Menon) ಜೀವನದಲ್ಲಿ ಪಟ್ಟಿರುವ ಸಂಕಷ್ಟಗಳ ಸರಮಾಲೆ ಬಗ್ಗೆ ಹಲವರಿಗೆ ಗೊತ್ತಿಲ್ಲ. ಕಾರಣ, ಅವರು ಯಾವುದನ್ನೂ ಹೆಚ್ಚಾಗಿ ಹೇಳಿಕೊಂಡಿಲ್ಲ. ಆದರೆ, ತಮ್ಮ ಜೀವನದಲ್ಲಿ ನಡೆದ ವೈಯಕ್ತಿಕ ನೋವನ್ನು ಮಾತ್ರ ತಕ್ಷಣವೇ ಹೇಳಿಕೊಂಡು, ಆ ಹೇಳಿಕೆ ಸಹ ಕೊಟ್ಟಿದ್ದರು ಕನ್ನಡದ 'ಜಾಕಿ' ಚಿತ್ರದ ಖ್ಯಾತಿಯ ನಟಿ ಭಾವನಾ. ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಚಿತ್ರದಲ್ಲಿ ನಟಿಸಿ ಸ್ಯಾಂಡಲ್‌ವುಡ್ ಸಿನಿಪ್ರಿಯರ ಗಮನಸೆಳದ ನಟಿ.
ಮೂಲತಃ ಕೇರಳದ ಈ ನಟಿ ಭಾವನಾ ಮೆನ್, ಮಲಯಾಳಂ ಸಿನಿರಂಗದ ಮೂಲಕ ಸಿನಿಮಾ ನಟನೆಗೆ ಬಂದರು. ನಟಿಗೆ ಬೇಕಾದ ಅಂದಚೆಂದದ ಜೊತೆಗೆ ಅಭಿನಯದಲ್ಲೂ ಸೈ ಎನ್ನಿಸಿಕೊಂಡಿದ್ದ ಭಾವನಾಗೆ ಅವಕಾಶಗಳ ಸುರಿಮಳೆಯೇ ಆಯ್ತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಸ್ಟಾರ್ ನಟಿಯಾಗಿ ಬೆಳೆದು ನಿಂತರು ಭಾವನಾ ಮೆನನ್. ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳೂ ಅವರಿಗೆ ಭಾಗ್ಯದ ಬಾಗಿಲು ತೆರೆದು ಸ್ವಾಗತಿಸಿತು.
undefined
ಯಶ್ ಮೇಲೆ ಮುಗಿಬಿದ್ದ ಪ್ರಕೃತಿ ಪ್ರಿಯರು; ರಾಕಿಭಾಯ್ 'ಪುಷ್ಪರಾಜ್' ಆಗ್ಬಿಟ್ರಾ ಅಂತ ಕೋಪ!
ಸಿನಿಮಾ ನಟಿಯಾಗಿ ಉತ್ತುಂಗದಲ್ಲಿ ಇದ್ದಾಗಲೇ 2017ರಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಬೀಸಿತು. ಆಗ, ನಟಿ ಭಾವನಾ ಅವರು ಮಲಯಾಳಂ ಸಿನಿಮಾರಂಗದಿಂದ ಭಾವನಾ 5 ವರ್ಷಗಳ ಗ್ಯಾಪ್ ತೆಗೆದುಕೊಂಡರು. ಬೆಂಗಳೂರಿನ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಅವರೊಂದಿಗೆ 2017ರಲ್ಲಿ ನಿಶ್ಚಿತಾರ್ಥ ಹಾಗು 2018ರಲ್ಲಿ ಮದುವೆ ಮಾಡಿಕೊಂಡಿದ್ದಾರೆ ನಟಿ ಭಾವನಾ.
ಬಳಿಕ, 2022ರಲ್ಲಿ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ವಾಪಸ್ ಬಂದ ಭಾವನಾ ಮತ್ತೆ (Ntikkakkakkoru Premondarnn) ಸಿನಿಮಾದಲ್ಲಿ ನಟಿಸಿದರು. ಆದರೆ, ಆ ಚಿತ್ರವು 2023ರಲ್ಲಿ ಬಿಡುಗಡೆಯಾಯಿತು. ಅವರಿಗೆ ಮತ್ತೆ ಮೊದಲಿನ ಸ್ವಾಗತ ಸಿಗಲಿಲ್ಲ ಎನ್ನಬಹುದು. ಸಿಕ್ಕ ಪಾತ್ರಗಳನ್ನು ಮಾಡುತ್ತ, ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ನಟಿ ಭಾವನಾ ಬದುಕು ಸಾಗುತ್ತಿದೆ. ಈಗಲೂ ಕೂಡ ಕೆಲವು ಪಾತ್ರಗಳನ್ನು ಒಪ್ಪಿಕೊಂಡು ನಟಿಯಾಗಿ ಮುಂದುವರೆಯುತ್ತಿದ್ದಾರೆ ಭಾವನಾ ಮೆನನ್.
ಕನ್ನಡದಲ್ಲಿ ಅದಾಗಲೇ ಎರಡು ಭಾವನಾ ಹೆಸರಿನ ನಟಿಯರು ಇರುವ ಕಾರಣಕ್ಕೆ, ಈ ನಟಿಗೆ ಜಾಕಿ ಭಾವನಾ ಎಂದೇ ಕರೆಯಲಾಗುತ್ತದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಕೂಡ ಭಾವನಾ ಅವರಿಗೆ ಭಾರಿ ಎಂದು ಹೇಳಿಕೊಳ್ಳುವಷ್ಟು ಅವಕಾಶಗಳು ಸಿಗಲಿಲ್ಲ ಎಂದೇ ಹೇಳಬೇಕು. ಆದರೆ, ತಮಗೆ ಸಿಕ್ಕ ಪಾತ್ರವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿ ಕನ್ನಡಿಗರಿಗೆ ಮನರಂಜನೆ ನೀಡುವಲ್ಲಿ ಸಫಲರಾಗಿದ್ದಾರೆ ಈ ಭಾವನಾ.
ದೀಪಾವಳಿ ಶುಭಾಶಯ ಹೇಳಿದ 'ಪುಷ್ಪಾ 2' ಟೀಮ್; ಬಿಡುಗಡೆಗೆ ಮುನ್ನ ಬೆಣ್ಣೆ ಸವರೋದಾ?
ಆದರೆ, ತಮ್ಮದೇ ಪರ್ಸನಲ್ ಸಮಸ್ಯೆಗಳಿಂದ ನೊಂದು-ಬೆಂದ ಭಾವನಾ ಮೆನನ್, ಮತ್ತೆ ಫಿನಿಕ್ಸ್‌ನಂತೆ ಜೀವನದಲ್ಲಿ ಎದ್ದು ಬಂದರೂ, ಸಿನಿಮಾ ಕೆರಿಯರ್‌ನಲ್ಲಿ ಅದು ಸಾಧ್ಯವೇ ಆಗಲಿಲ್ಲ ಎನ್ನಬಹುದು. ಬಂದಂತೆ ಬದುಕನ್ನು ಸ್ವೀಕರಿಸಬೇಕು ಎಂಬ ತತ್ವದಡಿ ಇರುವಂತೆ ಈಗ ಭಾವನಾ ಜೀವನ ನಡೆಯುತ್ತಿದೆ, ಬದುಕಿನ ಬಂಡಿ ಸಾಗುತ್ತಿದೆ. ಸಿನಿಮಾರಂಗದಲ್ಲಿ ಒಬ್ಬರು ನಟಿಯಾಗಿ ತಮ್ಮದೇ ಒಂದು ಛಾಪನ್ನು ಮೂಡಿಸುವಲ್ಲಿ ಭಾವನಾ ಸಫಲರಾಗಿದ್ದಂತೂ ಹೌದು!