ಮಗು ಹುಟ್ಟಿದ ಬಳಿಕ ಚಡ್ಡಿಯೋ ಫ್ರಾಕೋ ಹೊಲಿಸ್ಬೇಕು: ಸ್ವಪಕ್ಷದ ನಾಯಕರ ವಿರುದ್ಧ ರಾಮಲಿಂಗರೆಡ್ಡಿ ಗರಂ

Jul 24, 2022, 4:39 PM IST

ಬೆಂಗಳೂರು, (ಜುಲೈ.24): ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೂ ಏಳೆಂಟು ತಿಂಗಳು ಬಾಕಿ ಇದೆ. ಅಲ್ಲದೇ ಚುನಾವಣೆ ಮುಗಿದು ಪಕ್ಷ ಮೆಜಾರಿಟಿ ಬಂದಮೇಲೆ ಸಿಎಂ ಯಾರಾಗ್ಬೇಕು ಎನ್ನುವ ಚರ್ಚೆಗಳು ಶುರುವಾಗುತ್ತೆ. ಆದ್ರೆ, ಅದಕ್ಕೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಂದಿನ ಮುಖ್ಯಮಂತ್ರಿ ಕುರ್ಚಿಗಾಗಿ ಕುಸ್ತಿ ಜೋರಾಗಿದೆ. ಇದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೂಸು ಹುಟ್ಟುವ ಮುನ್ನ ಕುಲಾವಿ, ಯಾವತ್ತೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ: ಬಿಎಸ್‌ವೈ ವ್ಯಂಗ್ಯ

ಹೌದು...ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕುರ್ಚಿ ಕಿತ್ತಾಟವನ್ನು ಬಿಜೆಪಿ ವ್ಯಂಗ್ಯವಾಡುತ್ತಿದೆ. ಇದರಿಂದ ಕಾಂಗ್ರೆಸ್‌ನ ಇನ್ನುಳಿದ ನಾಯಕರ ಆಕ್ರೊಶಕ್ಕೆ ಕಾರಣವಾಗಿದ್ದು, ಸ್ವಪಕ್ಷದ ನಾಯಕರ ಮೇಲೆ ಅಸಮಾಧಾನಗೊಂಡಿದ್ದಾರೆ. ಇದೀಗ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗರೆಡ್ಡಿ ಕೂಡ ಗರಂ ಆಗಿದ್ದು, ಮಗು ಹುಟ್ಟಿದ ಬಳಿಕ ಚಡ್ಡಿಯೋ ಫ್ರಾಕೋ ಹೊಲಿಸ್ಬೇಕು ಎಂದು ಇಬ್ಬರು ನಾಯಕರುಗಳಿಗೆ ಟಾಂಗ್ ಕೊಟ್ಟಿದ್ದಾರೆ.