ಸೀರಿಯಲ್‌ ಶೂಟಿಂಗ್‌ ಸೆಟ್‌ನಲ್ಲಿ ನಟಿ ಉಮಾಶ್ರೀ ಹೀಗೆಲ್ಲಾ ವ್ಯಾಯಾಮ ಮಾಡ್ತಾರಾ? ವಿಡಿಯೋ ವೈರಲ್

Published : Dec 02, 2024, 06:40 PM IST
ಸೀರಿಯಲ್‌ ಶೂಟಿಂಗ್‌ ಸೆಟ್‌ನಲ್ಲಿ ನಟಿ ಉಮಾಶ್ರೀ ಹೀಗೆಲ್ಲಾ ವ್ಯಾಯಾಮ ಮಾಡ್ತಾರಾ? ವಿಡಿಯೋ ವೈರಲ್

ಸಾರಾಂಶ

ಪುಟ್ಟಕ್ಕನ ಮಕ್ಕಳು ಶೂಟಿಂಗ್‌ ಸೆಟ್‌ನಲ್ಲಿ ನಟಿ ಉಮಾಶ್ರೀ ಇಷ್ಟೊಂದು  ವ್ಯಾಯಾಮ ಮಾಡ್ತಾರಾ? ಮುಂಗುಸಿಗೆ ಏನೇನು ವ್ಯಾಯಾಮ ಹೇಳಿಕೊಟ್ಟಿದ್ದಾರೆ ನೋಡಿ!   

ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ ನಟಿ ಉಮಾಶ್ರೀ. ಈಗ 67ರ ಹರೆಯದಲ್ಲಿಯೂ ಅವರ ಮಾಗಿದ ನಟನೆಗೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿನ ಅವರ ನಟನೆಗೆ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ.  ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ.  ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ  ಪ್ರತಿಭಾನ್ವಿತ ಅಭಿನೇತ್ರಿ ಇವರು.  ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ  ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ  ಕಣ್ಣುಗಳಲ್ಲಿಯೇ  ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.   325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಸರ್ಕಾರದ ಶಾಸನ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗ ಇಲಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2013 ರಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಇಂತಿಪ್ಪ ನಟಿ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸೆಟ್‌ನಲ್ಲಿ ಕೆಲವೊಂದು ವ್ಯಾಯಾಮಗಳನ್ನು ಹೇಗೆ ಮಾಡುತ್ತಾರೆ ಎನ್ನುವ ವಿಡಿಯೋ ವೈರಲ್‌ ಆಗಿದೆ. ಗಜೇಂದ್ರ ಮರಸಾನಿಗೆ ಎನ್ನುವವರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಡಿಯೋ ಶೇರ್‍‌ ಮಾಡಿದ್ದಾರೆ. ಇದರಲ್ಲಿ ಇದೇ ಸೀರಿಯಲ್‌ನ ಮುಂಗುಸಿ ಪಾತ್ರಧಾರಿಗೆ ಉಮಾಶ್ರಿಯವರು ಕೆಲವೊಂದು ವ್ಯಾಯಾಮಗಳನ್ನು ಕುಳಿತಲ್ಲಿಯೇ ಹೇಳಿಕೊಡುವುದನ್ನು ನೋಡಬಹುದು. ವ್ಯಾಯಾಮ ಎಂದರೆ ದೈಹಿಕ ಶ್ರಮದ ಅಗತ್ಯವಂತೂ ಇದ್ದೇ ಇದೆ. ಆದರೆ ಕೇವಲ ದೈಹಿಕ ಶ್ರಮವಷ್ಟೇ ಅಲ್ಲದೆ, ಕುಳಿತಲ್ಲಿಯೇ ಇಡೀ ದೇಹಕ್ಕೆ ಚೈತನ್ಯ ತುಂಬಬಲ್ಲ ಕೆಲವೊಂದು ವ್ಯಾಯಾಮಗಳೂ ಇವೆ. ಅವುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ ನಟಿ ಉಮಾಶ್ರೀ. ಕೈ-ಕಾಲು, ನಾಲಿಗೆ, ಕಿವಿ ಇವುಗಳನ್ನು ಚುರುಕಾಗಿಸುವ ಮೂಲಕ ಇಡೀ ದೇಹ ಪ್ರಕ್ರಿಯೆಯನ್ನು ಹೇಗೆ ಚುರುಕುಗೊಳಿಸಬಹುದು ಎನ್ನುವುದನ್ನು ಈ ವ್ಯಾಯಾಮಗಳಿಂದ ತಿಳಿಯಬಹುದು ಹಾಗೂ ಇದೇ ರೀತಿಯ ವ್ಯಾಯಾಮಗಳು ಉಮಾಶ್ರಿ ಅವರನ್ನು ಚುರುಕಾಗಿ ಇಡಿಸುತ್ತಿದೆ ಎನ್ನುವುದು ಕೂಡ ತಿಳಿದುಬರುತ್ತದೆ. 

ಸೀರಿಯಲ್ ಸೆಟ್‌ನಲ್ಲಿ ಎಲ್ಲರನ್ನೂ ಸುಸ್ತು ಮಾಡೋ ಸಿಹಿಯ ತುಂಟಾಟ ನೋಡೋದೇ ಚೆಂದ!

ಅಂದಹಾಗೆ ಉಮಾಶ್ರೀಯವರು, ಯಾವುದೇ  ಪಾತ್ರಕ್ಕೂ   ಜೀವ ತುಂಬುವ ಶೈಲಿ ಶ್ಲಾಘನೀಯ. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ಅಂದಹಾಗೆ ಉಮಾಶ್ರೀ ಅವರಿಗೆ ಇದೀಗ 67 ವರ್ಷ ವಯಸ್ಸು.  ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ  ಪ್ರತಿಭಾನ್ವಿತ ಅಭಿನೇತ್ರಿಯಾಗಿದ್ದಾರೆ ಇವರು. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ  ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ  ಕಣ್ಣುಗಳಲ್ಲಿಯೇ  ತುಂಬಿಕೊಡುತ್ತಾರೆ. ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ.   325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸತತ ಐದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡ ನಟಿ ಎನಿಸಿದ್ದಾರೆ. 

ಹಾಗೆ ನೋಡಿದರೆ ಉಮಾಶ್ರೀಯವರು ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳಬೇಕಿತ್ತು. ಅಭಿನಯದಿಂದಲೇ ಮೋಡಿ ಮಾಡುತ್ತಿದ್ದರೂ, ಸಿನಿಮಾಗಳಲ್ಲಿ ಇವರಿಗೆ ಸಿಕ್ಕಿದ್ದು ಬೇರೆಯದ್ದೇ ರೀತಿಯ ಪಾತ್ರ. ಚಿಕ್ಕಪುಟ್ಟ ಪಾತ್ರ ಮಾಡಿದರೂ ಅದರಲ್ಲಿಯೂ ಜೀವಂತಿಕೆ ತುಂಬುತ್ತಿದ್ದರೂ, ಇವರ ನಿಜವಾದ ಪ್ರತಿಭೆಯನ್ನು ನಿರ್ದೇಶಕರು ಗುರುತಿಸಿಯೇ ಇಲ್ಲವೆನ್ನುವ ಕೊರಗು ಅವರ ಅಭಿಮಾನಿಗಳದ್ದು. ಒಂದು ವೇಳೆ ಇವರ ನಿಜವಾದ ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿದ್ದೇ ಆದರೆ ಅವರಿಂದು ರಾಜ್ಯಕ್ಕೆ ಸೀಮಿತವಾಗುತ್ತಿರಲಿಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಅಭಿಮಾನಿಗಳು. ಇದಕ್ಕೆ ಇವರ ಗುಲಾಬಿ ಟಾಕೀಸ್​ ಚಿತ್ರವೇ ಸಾಕ್ಷಿ. ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಮತ್ತು ಓಶಿಯಾನ್ಸ್ ಅಂತರರಾಷ್ಟ್ರೀಯ ಕಲಾಭಿಮಾನಿಗಳ ಪ್ರಶಸ್ತಿಯನ್ನು ಈ ಚಿತ್ರ ನಟಿಗೆ ತಂದುಕೊಟ್ಟಿದೆ.  ಇಂಥ ಕೆಲವೇ ಕೆಲವು ಚಿತ್ರಗಳು ಉಮಾಶ್ರೀ ಅವರ ಪಾಲಿಗೆ ಬಂದಿದೆ ಎನ್ನುವುದೂ ಅಷ್ಟೇ ಸತ್ಯ. 
 

ಸೀರಿಯಲ್‌ ಸೆಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ವಿಡಿಯೋ ವೈರಲ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?