Dec 4, 2020, 1:26 PM IST
ಬೆಂಗಳೂರು (ಡಿ. 04): ಹಲವು ವರ್ಷಗಳ ಕುತೂಹಲಕ್ಕೆ ತೆರೆ ಎಳೆದಿರುವ ತಮಿಳು ಸೂಪರ್‌ಸ್ಟಾರ್ ರಜನೀಕಾಂತ್ ಕೊನೆಗೂ ರಾಜಕೀಯಕ್ಕೆ ಪ್ರವೇಶಿಸುವ ಘೋಷಣೆ ಮಾಡಿದ್ದಾರೆ. ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, 2021ರಲ್ಲಿ ನಡೆಯುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿ ಎಲ್ಲವನ್ನೂ ಬದಲಿಸುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಜನೀಕಾಂತ್ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ರಜನಿ ರಾಜಕೀಯ ಪ್ರವೇಶದಿಂದ ಯಾರಿಗೆ ಲಾಭ ಅಥವಾ ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಪಟ್ಟು ಬಿಡ್ತಿಲ್ಲ, ಮಾತುಕತೆಗೂ ಬಗ್ಗುತ್ತಿಲ್ಲ; ಮೋದಿ ಸಿಂಹಾಸನವನ್ನೇ ಅಲುಗಾಡಿಸುತ್ತಾ ಅನ್ನದಾತನ ಆಕ್ರೋಶ?
ಆಡಳಿತಾರೂಢ ಎಐಎಡಿಎಂಕೆ ಜೊತೆ ಅವರಿಗೆ ಒಳ್ಳೆಯ ಸಂಬಂಧವಿಲ್ಲ. ಹಾಗೆಯೇ, ವಿಪಕ್ಷದಲ್ಲಿರುವ ಡಿಎಂಕೆ ಜೊತೆಗೂ ಹತ್ತಿರದ ಸಂಬಂಧಗಳಿಲ್ಲ. ಇನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಅವರು ಕೃಷ್ಣ-ಅರ್ಜುನರಿದ್ದಂತೆ ಎಂದು ಹೊಗಳಿದ್ದುಂಟು. ಹೀಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವೂ ಇದೆ.