Jul 13, 2023, 8:10 PM IST
ಬೆಂಗಳೂರು(ಜು.13): ಮಹಾಘಟಬಂಧನ್ ಸಭೆ ಈಗಾಗಲೇ ಪಾಟ್ನಾದಲ್ಲಿ ನಡೆದಿದೆ. ಅದರ ಎರಡನೇ ಸಭೆ ಜು.13 ಹಾಗೂ 14 ರಂದು ಶಿಮ್ಲಾದಲ್ಲಿ ಅಂತ ಫಿಕ್ಸ್ ಅಗಿತ್ತು, ಆದರೆ, ಇದೀಗ ಬೆಂಗಳೂರಿನಲ್ಲಿ ನಡೆಯಲಿದೆ. ಹೌದು, ಜು. 17 ಮತ್ತು 18 ರಂದು ಬೆಂಗಳೂರಿನಲ್ಲಿ ವಿಪಕ್ಷಗಳಿಂದ ಮಹತ್ವದ ಚರ್ಚೆ ನಡೆಯಲಿದೆ. ರಾಜ್ಯಲ್ಲಿ ಎರಡು ದಿನಗಳ ಕಾಲ ಮಹಾಘಟಬಂಧನ್ ಸಭೆ ನಡೆಯಲಿದೆ. ಮಹಾಘಟಬಂಧನ್ ಸಭೆಗೂ ಮುನ್ನ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಸಚಿವರ ಜೊತೆ ಲೋಕಸಭಾ ಚುನಾವಣೆ ಕುರಿತಂತೆ ಸಭೆ ನಡೆಸಲಿದ್ದಾರೆ. ಪ್ರತಿ ಸಚಿವರಿಗೂ ರಾಹುಲ್ ಗಾಂಧಿ ಚುನಾವಣಾ ಟಾಸ್ಕ್ ನೀಡಲಿದ್ದಾರೆ.
ಕರ್ನಾಟಕ ಕಳೆದುಕೊಂಡ ಬಳಿಕ ಬಿಜೆಪಿ ಹೊಸ ತಂತ್ರ, ದಕ್ಷಿಣದಲ್ಲಿ ಕಮಲ ಅರಳಿಸಲು ಮೋದಿ ಕ್ಷೇತ್ರ ಬದಲಾವಣೆ!