Party Rounds ಉತ್ತರವಿಲ್ಲದ ಹತ್ತಾರು ಪ್ರಶ್ನೆಗೆ ಮೇ.13ಕ್ಕೆ ಸಿಗಲಿದೆ ಉತ್ತರ!

Mar 29, 2023, 7:54 PM IST

ಬೆಂಗಳೂರು (ಮಾ.29): ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆದರೆ, ಉತ್ತರವಿಲ್ಲದ ಹಲವಾರು ಪ್ರಶ್ನೆಗಳಿಗೆ ಮೇ. 13ಕ್ಕೆ ಉತ್ತರ ಸಿಗಲಿದೆ. ಲಿಂಗಾಯತ ಮತಬ್ಯಾಂಕ್‌ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತಂತೆ ಈ ಬಾರಿ ನಿಂತುಕೊಳ್ಳಲಿದೆಯೇ? ಕಳೆದ ಸಲ ಕೈಕೊಟ್ಟಿದ್ದ ದಲಿತರ ವೋಟ್‌ಬ್ಯಾಂಕ್‌ ಈ ಬಾರಿ ವಾಪಾಸ್‌ ಬರುತ್ತಾ? ಒಕ್ಕಲಿಗರು ಈ ಹಿಂದೆ ನಿಂತುಕೊಂಡಂತೆ ಜೆಡಿಎಸ್‌ಗೆ ಬೆಂಬಲ ನೀಡ್ತಾರಾ? ಅನ್ನೋ ಪ್ರಶ್ನೆಗಳಿವೆ.

ಈ ಎಲ್ಲಾ ಪ್ರಶ್ನೆಗಳಿಗೆ ಮೇ ತಿಂಗಳ 13ನೇ ತಾರೀಖಿನಂದು ಉತ್ತರ ಸಿಗಲಿದೆ. ರಾಜ್ಯ ವಿಧಾನಸಭೆಯೆ ಮೇ.10ರಂದು ಚುನಾವಣೆ ನಡೆಯಲಿದ್ದರೆ, ಫಲಿತಾಂಶ ಮೇ 13ಕ್ಕೆ ಪ್ರಕಟವಾಗಿದೆ. ಅಲ್ಲಿಗೆ ರಾಜ್ಯದಲ್ಲಿ ಮೂರು ಪ್ರಮುಖ ಪಕ್ಷಗಳ ಹಣೆಬರಹ ಕೂಡ ನಿರ್ಧಾರವಾಗಲಿದೆ.

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ

ಹಾಲಿ ಬಿಜಿಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇದೆಯೇ? ಹಾಲಿ ಕಾಂಗ್ರೆಸ್‌ ನಾಯಕರು ಒಗ್ಗಟ್ಟು ತೋರಿಸ್ತಾರಾ? ಭ್ರಷ್ಟಾಚಾರದ ಆರೋಪ ಬಿಜೆಪಿ ಹೊಡೆತ ನೀಡುತ್ತಾ? ಕುರುಬರು ಕಾಂಗ್ರೆಸ್‌ ಪರ ನಿಲ್ತಾರಾ? ಎಸ್‌ಸಿಎಸ್‌ಟಿ ಮೀಸಲಾತಿ ವಿಸ್ತರಣೆಯ ಲಾಭ ಬಿಜೆಪಿಗೆ ಸಿಗುತ್ತಾ? ಇನ್ನೂ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.