
ಬಿಗ್ ಬಾಸ್ ಕನ್ನಡ 11 ಆರಂಭವಾಗಿ ಒಂದು ತಿಂಗಳು ಕಳೆದಿದೆ. 29 ಸೆಪ್ಟೆಂಬರ್ 2024 ರಂದು ಈ ಸೀಸನ್ ಪ್ರಾರಂಭವಾಯಿತು.ವಿವಾದಾತ್ಮಕ ವ್ಯಕ್ತಿಗಳಿರುವ ಈ ಶೋ ನಲ್ಲಿ ವಿವಾದಗಳೇ ಹೆಚ್ಚಾಗಿದೆ ಎಂಬುದು ವೀಕ್ಷಕರ ವಾದ. ಅದಕ್ಕೆ ತಕ್ಕಂತೆ ಇಬ್ಬರನ್ನು ಮನೆಯಿಂದ ಹೊರ ಕಳಿಸಿದ್ದೇ ಸಾಕ್ಷಿ.
ಅಕ್ಟೋಬರ್ 31 ಸಂಚಿಕೆಯಲ್ಲಿ ಲಕ್ಷುರಿ ಬಜೆಟ್ ಗೆ ಎರಡು ತಂಡಗಳನ್ನು ಮಾಡಲಾಗಿತ್ತು.ಟೀಮ್ ಮಾಡುವಾಗ ಚೈತ್ರಾ ಕುಂದಾಪುರ ಅವರನ್ನು ಯಾರೂ ಕೂಡ ಆಯ್ಕೆ ಮಾಡಿಕೊಳ್ಳದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಕೊನೆಯವರೆಗೆ ಉಳಿದ ಚೈತ್ರಾ ಬಳಿಕ ಗೌತಮಿ ಜಾಧವ್ ಅವರ ಟೀಂಗೆ ಹೋಗಬೇಕಾಯ್ತು. ಕೊನೆತನಕ ಉಳಿದಿದ್ದು ಚೈತ್ರಾಗೆ ಬೇಸರ ತರಿಸಿತು.
ಧನ್‌ರಾಜ್ & ಗೌತಮಿ ನಡುವೆ ಏನಾಯ್ತು? ಗೌತಮಿ ಬಂಪ್ ಗೆ ಹೊಡೆದ್ರಂತೆ ಧನು!
ಟಾಸ್ಕ್ ನಡೆದು ಗೌತಮಿ ಟೀಂ ವಿನ್ ಆಗಿ ಲಕ್ಷುರಿ ಬಜೆಟ್ ಪಡೆದರು. ಇಷ್ಟಾದರೂ ಚೈತ್ರಾ ಮಾತ್ರ ತನ್ನನ್ನು ಸೇರಿಸಿಕೊಳ್ಳದ್ದಕ್ಕೆ ಭವ್ಯಾ ಅವರ ಮೇಲೆ ಕೋಪಗೊಂಡು ಊಟದ ಸಮಯದಲ್ಲಿ ಅದನ್ನೇ ಹೇಳುತ್ತಿದ್ದರು. ಕೊನೆಗೆ ಭವ್ಯಾ ಅವರು ಚೈತ್ರಾ ಅವರ ವರ್ತನೆಯಿಂದ ಅರ್ಧಕ್ಕೆ ಊಟ ಕೂಡ ಬಿಟ್ಟರು.
ಇಷ್ಟೆಲ್ಲ ಆಗಿ ಹೊರಗಡೆ ಸ್ವಿಮ್ಮಿಂಗ್ ಪೂಲ್ ಬಳಿ ಕೂಡ ಚೈತ್ರಾ ಅವರು ಭವ್ಯಾ ಅವರಿಗೆ ಟೀಂ ಗೆ ಸೇರಿಸಿಕೊಳ್ಳದ್ದನ್ನೇ ಮಾತನಾಡಿದರು.ಚೈತ್ರಾ ಅವರ ಮಾತನ್ನು ನಿಲ್ಲಿಸಲು ಭವ್ಯಾ, ತ್ರಿವಿಕ್ರಮ್ ಸೇರಿ ಹಲವರು ಕೊನೆಗೆ ಅವರ ಮೈಕ್ ಅನ್ನು ತೆಗೆದು ಅಡಗಿಸಿಟ್ಟರು. ಮೈಕ್ ಕೊಟ್ಟ ಮೇಲೂ ಚೈತ್ರಾ ಅವರ ಮಾತು ಮುಂದುವರೆಯಿತು ಹೀಗಾಗಿ ಕೊನೆಗೆ ಮೈಕ್ ತೆಗೆದು ಸ್ವಿಮ್ಮಿಂಗ್ ಪೂಲ್ ಗೆ ಎತ್ತಿ ಬಿಸಾಡಿದರು.
ಭವಿಷ್ಯದಲ್ಲಿ ಮಾತು ಕಡಿಮೆ ಮಾಡಿ ಆಟದ ಕಡೆ ಚೈತ್ರಾ ಗಮನ ಹರಿಸಿದರೆ ಬದಲಾವಣೆ ಕಾಣಬಹುದು ಇಲ್ಲದಿದ್ದರೆ ಇದೇ ರೀತಿ ಮನೆಯವರು ಅವರನ್ನು ಮೂಲೆ ಗುಂಪು ಮಾಡೋದ್ರಲ್ಲಿ ಎರಡು ಮಾತಿಲ್ಲ.
ತ್ರಿವಿಕ್ರಮ್ ಗೌತಮಿ ಬಿಟ್ಟು ಈ ವಾರ ಮನೆಯಿಂದ ಹೊರಹೋಗಲು ಕ್ಯಾಪ್ಟನ್ ಹನುಮಂತ ಸಹಿತ ಎಲ್ಲರೂ ನಾಮಿನೇಟ್!
ಇನ್ನು ಈ ವಾರ ಮನೆಯವರಿಗೆ ಬಿಗ್‌ಬಾಸ್ ಸಪ್ರೈಸ್ ನೀಡುತ್ತಿದ್ದಾರೆ. ಮನೆಯವರ ಸಂದೇಶ ಓದಲು ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಮನೆಯವರಿಗೆ ತೊಂದರೆ ನೀಡಲು ಟೀಂ ಅವರು ಬಂದಾಗ ಯಾವುದೇ ರಿಯಾಕ್ಟ್ ಮಾಡಬಾರದು ಮಾಡಿದರೆ ಫೌಲ್, ಮೂರು ಬಾರಿ ಫೌಲ್ ಆದರೆ ಪತ್ರ ಸಿಗುವುದಿಲ್ಲ ಎಂದಿದ್ದಾರೆ. ಈ ಟಾಸ್ಕ್ ನಲ್ಲಿ ಅನುಷಾ ರೈ ಗೆದ್ದು ಮನೆಯವರು ಬರೆದ ಲೆಟರ್ ಪಡೆದಿದ್ದಾರೆ. ಧನ್‌ರಾಜ್ ಅವರಿಗೆ ಮುಂದಿನ ಟಾಸ್ಕ್ ಇತ್ತು. ಆದರೆ ಧನ್‌ರಾಜ್ ಎರಡು ಬಾರಿ ಮತ್ತು ತ್ರಿವಿಕ್ರಮ್ ಅವರು 1 ಬಾರಿ ಫೌಲ್ ಆಗಿದ್ದಾರೆ. ಹೀಗಾಗಿ ಧನ್‌ರಾಜ್ ಅವರಿಗೆ ಬಿಗ್‌ಬಾಸ್ ಲೆಟರ್ ಕೊಡುತ್ತಾರೋ ಇಲ್ಲವೋ ಎಂಬುದು ನಾಳಿನ ಎಪಿಸೋಡ್ ನಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.