ಡ್ರೋನ್ ಪ್ರತಾಪ್’ನಂತೆ ಹನುಮಂತನೂ ಫಿನಾಲೆಗೆ ಬರಲಿ… ಬಡವರ ಮನೆ ಮಕ್ಳು ಬೆಳಿಬೇಕು ಅಂತಿದ್ದಾರೆ ಜನ!

First Published Oct 31, 2024, 11:30 PM IST

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಡ್ರೋನ್ ಪ್ರತಾಪ್ ಮತ್ತು ಸೀಸನ್ 11 ರ ಸ್ಪರ್ಧಿ ಹನುಮಂತ ಇಬ್ಬರನ್ನೂ ಜನ ಹೋಲಿಕೆ ಮಾಡಿದ್ದು, ಪ್ರತಾಪ್ ನಂತೆ , ಹನುಮಂತ ಕೂಡ ಫಿನಾಲೆಗೆ ಬರಬೇಕು ಅಂತ ಬಯಸ್ತಿದ್ದಾರೆ ಜನ. 
 

ಕಲರ್ಸ್ ಕನ್ನಡದ ಅತಿ ದೊಡ್ಡ ರಿಯಾಲಿಟಿ(Kannada reality show) ಶೋ ಬಿಗ್ ಬಾಸ್ ಸೀಸನ್ 11 ಶುರುವಾಗಿ ಈಗಾಗಲೇ ಒಂದು ತಿಂಗಳು ಪೂರ್ಣಗೊಂಡಿದೆ. ಅಷ್ಟರಲ್ಲಿ ನಾಲ್ಕು ಜನ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅಲ್ಲದೇ ಒಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ಸದ್ಯ ವೈಲ್ಡ್ ಕಾರ್ಡ್ ಸ್ಪರ್ಧಿ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. 
 

ಹೌದು, ವೈಲ್ಡ್ ಕಾರ್ಡ್ ಎಂಟ್ರಿ (Wild cared entry) ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟವರು ಸರಿಗಮಪ ಮೂಲಕ ಜನಪ್ರಿಯತೆ ಪಡೆದು, ಹತ್ತು ಹಲವು ರಿಯಾಲಿಟಿ ಶೋಗಲ್ಲಿ ಭಾಗವಹಿಸಿದವರು ಹನುಮಂತ. ಇದೀಗ ತಮ್ಮ ಮುಗ್ದ ಮಾತುಗಳ ಮೂಲಕ ಮನೆ ಮಂದಿ ಮನಸ್ಸು ಗೆಲ್ಲುತ್ತಾ ಬಂದಿದ್ದಾರೆ ಹನುಮಂತ. 
 

Latest Videos


ಹನುಮಂತ ಬಂದ ಕೂಡಲೇ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು, ಈಗ ಎರಡನೇ ಬಾರಿಯೂ ಕ್ಯಾಪ್ಟನ್ ಆಗಿ ಮತ್ತೆ ಆಯ್ಕೆ ಆಗಿದ್ದಾರೆ.  ಮೊದಲ ವಾರದಲ್ಲಿ ಎಲ್ಲರನ್ನೂ ಹ್ಯಾಂಡಲ್ ಮಾಡೋದಕ್ಕೆ ಹೆದರಿ,ಕೊನೆಗೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿತ್ತು, ಹನುಮಂತ ಪರಿಸ್ಥಿತಿ, ಹಾಗಾಗಿ ಎರಡನೆ ವಾರ ಮತ್ತೆ ಕ್ಯಾಪ್ಟನ್ ಆಗುತ್ತಿದ್ದಂತೆ, ದೇವರೆ ಇಲ್ಲಿ ಯಾರ ನಡುವೆಯೂ ಜಗಳ ಆಗಬಾರದು ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. 
 

ಇನ್ನು ಹನುಮಂತನ ಕೆಲವು ನಡವಳಿಕೆ ನೋಡಿ, ಕೆಲವು ಜನರು, ಹನುಮಂತ ನಾಟಕ ಮಾಡ್ತಿದ್ದಾರೆ. ಅವರು ನಿಜವಾಗಿಯೂ ಬುದ್ಧಿವಂತಹ ಆದ್ರೆ, ಇಲ್ಲಿದೆ ಬಂದು ಪೆದ್ದನಂತೆ ನಾಟಕ ಮಾಡ್ತಾನೆ ಅಂತಾನೂ ಹೇಳಿದ್ರು. ಆದರೆ ಇನ್ನೂ ಹಲವಾರು ಜನ ಹನುಮಂತ (Hanumantha)ನಿಜ್ವಾಗಿಯೂ ಪ್ರಾಮಾಣಿಕ, ಇನ್ನೂ ಮುಗ್ಧ ಎನ್ನುತ್ತೀದ್ದಾರೆ. 
 

ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹನುಮಂತನ ಜೊತೆಗೆ ಸೀಸನ್ 10 ರ ರನ್ನರ್ ಆಗಿರುವ ಡ್ರೋನ್ ಪ್ರತಾಪ್ ಅವರನ್ನ ಹೋಲಿಕೆ ಮಾಡಲಾಗುತ್ತಿದೆ. ಹನುಮಂತ ಕೂಡ ಫಿನಾಲೆಗೆ ಹೋಗಬೇಕು. ಬಡವರ ಮಕ್ಕಳು ಬೆಳೆಯಬೇಕು ಎಂದು ಹೇಳಿ ಬೆಂಬಲ ನೀಡುತ್ತಿದ್ದಾರೆ. 

ಡ್ರೋನ್ ಪ್ರತಾಪ್ ಬಿಗ್ ಬಾಸ್ ಸೀಸನ್ 10ಕ್ಕೆ (Bigg Boss Season10) ಎಂಟ್ರಿ ಕೊಟ್ಟಾಗ, ತುಂಬಾನೆ ಸರಳ ಜೀವಿ, ಯಾರ ಜೊತೆಗೆ ಸರಿಯಾಗಿ ಮಾತನಾಡೋದಿಲ್ಲ, ಜಗಳ ಅಂತೂ ಇಲ್ವೇ ಇಲ್ಲ, ತಾವಾಯಿತು ತಮ್ಮ ಕೆಲಸ ಆಯ್ತು  ಅನ್ನುವಂತೆ ಇದ್ದರು. ನಂತರ ತಮ್ಮ ಮಾತು, ಆಟದ ಶೈಲಿ ಎಲ್ಲವನ್ನು ಬದಲಾಯಿಸಿಕೊಂಡು ಫಿನಾಲೆವರೆಗೂ ತಲುಪಿದ್ದರು. 

ಇದೀಗ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತ ಕೂಡ ಆರಂಭದಲಿ ತುಂಬಾ ಸೈಲೆಂಟ್ ಇದ್ರು, ಈವಾಗ ಕೊಂಚ ಕೊಂಚ ಸ್ಟ್ರಾಂಗ್ ಆಗುತ್ತಿದ್ದಾರೆ. ಹಾಗಾಗಿ ಜನರು ಕೂಡ ಹನುಮಂತನನನ್ನು ಒಪ್ಪಿಕೊಂಡಿದ್ದು, ಪ್ರತಾಪ್ ನಂತೆ ಹನುಮಂತ ಕೂಡ  (Drone Prathap) ಎಲ್ಲರನ್ನೂ ನೋಡಿ ಅಡುತ್ತಾ,  ಸ್ಟ್ರಾಂಗ್ ಆಗಬೇಕು , ಬಡವರ ಮಕ್ಕಳು ಬೆಳಿಬೇಕು,  ಎನ್ನುತ್ತಿದ್ದಾರೆ ವೀಕ್ಷಕರು. ನಿಮಗೂ ಹಾಗೇ ಅನಿಸುತ್ತಾ? ಹನುಮಂತ ಈ ಸೀಸನ್ ವಿನ್ನರ್ ಆಗ್ತಾರ ಕಾದು ನೋಡಬೇಕು. 

click me!