Party Rounds: ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಮೊದಲ ಲಿಸ್ಟ್‌ ರೆಡಿ! ಈ ಬಾರಿ ಬೇರೆ ರಣತಂತ್ರ!

Mar 16, 2023, 8:25 PM IST

ಬೆಂಗಳೂರು (ಮಾ.16): ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆ 2023ರ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಕುರಿತು ಭಾರಿ ಪ್ರಮಾಣದ ಕುತೂಹಲ ಆರಂಭವಾಗಿದೆ. ಆದರೆ, ನಾಳೆ (ಮಾ.17)  ಬಿಡುಗಡೆ ಆಗುವ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಕಳಿಸಲಾಗಿದೆ. ಯಾರಿಗೆ, ಯಾವ ಕ್ಷೇತ್ರದ ಟಿಕೆಟ್‌ ಸಿಕ್ಕಿದೆ ನೀವೇ ನೋಡಿ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಎಲ್ಲರೂ ಅರ್ಜಿ ಹಾಕುವುದು ಕಡ್ಡಾಯವಾಗಿತ್ತು. ಅದರಂತೆ 5 ಸಾವಿರ ರೂ. ಕೊಟ್ಟು ಅರ್ಜಿ ಖರೀದಿಸಿ, 2 ಲಕ್ಷ ರೂ. ಹಣವನ್ನು ಕಟ್ಟಿ ಅಜಿ ಸಲ್ಲಿಕೆ ಮಾಡಬೇಕಿತ್ತು. ಹೀಗೆ, ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ 5 ರಿಂದ 10 ಅಭ್ಯರ್ಥಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಹಲವು ಸಭೆಗಳನ್ನು ನಡೆಸಿದ್ದ ಕೆಪಿಸಿಸಿ ಸ್ಕ್ರೀನಿಂಗ್‌ ಕಮಿಟಿ ಒಂದು ಕ್ಷೇತ್ರಕ್ಕೆ 1 ರಿಂದ 2 ಹೆಸರುಗಳನ್ನು ಆಯ್ಕೆ ಮಾಡಿ ಎಐಸಿಸಿಗೆ ಕಳುಹಿಸಿದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳು ಮೊದಲು ಹಾಲಿ ಶಾಸಕರ ಹೆಸರನ್ನು ಘೋಷಣೆ ಮಾಡುವುದು ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಕಾಂಗ್ರೆಸ್‌ ಜೆಡಿಎಸ್‌ ಹಾಗೂ ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲು ಮುಂದಾಗಿದೆ.