ಭಾರತ ವಿಶ್ವಗುರುವಾಗುವುದರಲ್ಲಿ ದಾಪುಗಾಲು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

By Kannadaprabha NewsFirst Published Sep 30, 2024, 6:52 PM IST
Highlights

ತಮ್ಮ ಐದು ಬಾರಿಯ ಗೆಲವಿಗೆ ಹಾಗೂ ಬಿಜೆಪಿ ದಿಗ್ವಿಜಯಕ್ಕೆ ಪ್ರತಿಯೊಬ್ಬ ಬೂತ್‌ ಮಟ್ಟದ ಕಾರ್ಯಕರ್ತರ ಸತತ ಪರಿಶ್ರಮವೇ ಕಾರಣ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ತಾವೆಲ್ಲರೂ ಒಗ್ಗೂಡಿ ಮನೆಮನೆಗೆ ತೆರಳಿ ಇನ್ನಷ್ಟು ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಧಾರವಾಡ (ಸೆ.30): ತಮ್ಮ ಐದು ಬಾರಿಯ ಗೆಲವಿಗೆ ಹಾಗೂ ಬಿಜೆಪಿ ದಿಗ್ವಿಜಯಕ್ಕೆ ಪ್ರತಿಯೊಬ್ಬ ಬೂತ್‌ ಮಟ್ಟದ ಕಾರ್ಯಕರ್ತರ ಸತತ ಪರಿಶ್ರಮವೇ ಕಾರಣ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ತಾವೆಲ್ಲರೂ ಒಗ್ಗೂಡಿ ಮನೆಮನೆಗೆ ತೆರಳಿ ಇನ್ನಷ್ಟು ಸದಸ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಇಲ್ಲಿಯ ಸಿ.ಎಸ್‌. ಪಾಟೀಲ ಭವನದಲ್ಲಿ ಧಾರವಾಡ-71 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಅಭಿನಂದನಾ ಸಮರ್ಪಣಾ ಕಾರ್ಯಕ್ರಮ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರು ಕನಿಷ್ಠ ನೂರು ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಸಕ್ರಿಯ ಕಾರ್ಯಕರ್ತರಾಗಬೇಕು. ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವಗುರುವಾಗುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದ್ದು, 2047ರಲ್ಲಿ ಅದು ಈಡೇರಬೇಕಿದೆ. ತಾವೆಲ್ಲರೂ ಪಕ್ಷವನ್ನು ಇನ್ನೂ ಬಲಪಡಿಸಿ ಮೋದಿಯವರ ಕೈಬಲಪಡಿಸಬೇಕೆಂದು ನುಡಿದರು.

Latest Videos

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಈ ಪ್ರಸಿದ್ಧ ನಟಿ ಹಿಂದೆ ಬಿದ್ದು ಪ್ರೀತಿಸಿದ್ರಂತೆ: ಆದರೆ ಅದು ಒನ್ ವೇ ಲವ್!

ಪಕ್ಷದ ಜಿಲ್ಲಾಧ್ಯಕ್ಷರು, ಮಂಡಳ ಅಧ್ಯಕ್ಷರು ಹಾಗೂ ಮಹಿಳಾ ಕಾರ್ಯಕರ್ತರನ್ನು ಕೇಂದ್ರ ಸಚಿವರು ಅಭಿನಂದಿಸಿದರು. ವಿಧಾನಪರಿಷತ್ ಸದಸ್ಯ ಎನ್‌. ರವಿಕುಮಾರ, ಎಸ್‌.ವಿ. ಸಂಕನೂರ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ‌ ಮಸೂತಿ, ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಕೆಎಂಎಫ್‌ ಅಧ್ಯಕ್ಷ ಶಂಕರ ಮುಗದ, ಮಂಡಳ ಅಧ್ಯಕ್ಷ ಸುನೀಲ ಮೋರೆ, ರುದ್ರಪ್ಪ ಅರಿವಾಳ, ಜಯತೀರ್ಥ ಕಟ್ಟಿ, ಸವಿತಾ ಅಮರಶೆಟ್ಟಿ, ಗುರುನಾಥಗೌಡರ, ಸಂಗನಗೌಡ ರಾಮನಗೌಡರ, ಶ್ರೀನಿವಾಸ ಕೋಟ್ಯಾನ, ಹರೀಶ ಬಿಜಾಪುರ ಇದ್ದರು.

ಆಯುರ್ವೇದ ಉಳಿಸಿ, ಬೆಳೆಸಲು ಕೇಂದ್ರ ಸರ್ಕಾರ ಬದ್ಧ: ಪ್ರಾಚೀನ ಸಂಸ್ಕೃತಿ ಮತ್ತು ಔಷಧ ಪದ್ಧತಿಯಾಗಿರುವ ಆಯುರ್ವೇದವನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಇಂದು ಭಾರತದ ಆಯುರ್ವೇದ ಜಗತ್ತಿನಾದ್ಯಂತ ಪ್ರಾಮುಖ್ಯತೆ ಪಡೆದಿದೆ. ಇದರ ಉಳಿವಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಬಿವಿಬಿ ಕಾಲೇಜಿನ ಕೆಎಲ್‌ಇ ಟೆಕ್‌ ಆಡಿಟೋರಿಯಂನಲ್ಲಿ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸೆಟೆಲೈಟ್ ನ್ಯಾಷನಲ್ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.₹1.40 ಲಕ್ಷ ಕೋಟಿ ವಹಿವಾಟು:

ಕೇಂದ್ರ ಆಯುಷ್ ಸಚಿವಾಲಯ ಆಯುರ್ವೇದದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ. 2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧ ಕೇವಲ ₹24,000 ಕೋಟಿ ವಹಿವಾಟು ಆಗುತ್ತಿತ್ತು. ಇದೀಗ ₹1.40 ಲಕ್ಷ ಕೋಟಿಗೆ ತಲುಪಿದೆ. ಬಜೆಟ್‌ನಲ್ಲಿ ₹500 ಕೋಟಿ ಬದಲು ₹3000 ಕೋಟಿ ನೀಡಲಾಗಿದೆ ಎಂದರು. ಕೇಂದ್ರ ಆಯುಷ್ ಸಚಿವಾಲಯದ ಆಶ್ರಯದಲ್ಲಿ ಮುಂಬರುವ ಡಿಸೆಂಬರ್ 12ರಿಂದ 15ರ ವರೆಗೆ ಉತ್ತರಾಖಂಡದ ಡೆಹರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆ್ಯಂಡ್ ಹೆಲ್ತ್ ಎಕ್ಸ್‌ಪೋ ಆಯೋಜಿಸಲಾಗುತ್ತಿದೆ. 

ಶ್ರೀದೇವಿ ಜೊತೆ ಸಿನಿಮಾ ಮಾಡಿದ್ರೆ 'ಫ್ಲಾಫ್' ಆಗುತ್ತೆ ಎಂದು ಆ ಸ್ಟಾರ್ ನಟನಿಗೆ ಬಾಲಯ್ಯ ಹೇಳಿದ್ರಂತೆ!: ಕೊನೆಗೆ ಏನಾಯ್ತು?

ಇದರಲ್ಲಿ 50 ರಾಷ್ಟ್ರಗಳು, 5000 ಆಯುರ್ವೇದ ತಜ್ಞರು ಭಾಗವಹಿಸಲಿದ್ದಾರೆ. ಇದರ ಭಾಗವಾಗಿ ದೇಶದೆಲ್ಲೆಡೆ 20 ಸೆಟೆಲೈಟ್ ಸೆಮಿನಾರ್ ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮವೂ ಇದರ ಭಾಗವಾಗಿದೆ ಎಂದರು. ಡಾ. ಮಾಧವ ದಿಗ್ಗಾವಿ, ಡಾ. ಎಸ್.ವಿ. ಹಿರೇಮಠ, ಡಾ. ದತ್ತಾ ನಾಡಗಿರ, ಡಾ. ಎಲ್.ಎನ್. ಶೆಣೈ, ಡಾ. ಸೌರಭ ಎಸ್.ಕೆ, ಡಾ. ಪ್ರಮೋದ ಕಟ್ಟಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಡಾ. ಸೂರಜ್ ಕಂಬಾರ ಅವರು ಆಯುರ್ವೇದ ಕುರಿತು ಉಪನ್ಯಾಸ ನೀಡಿದರು.

click me!