ಬಿಗ್ ಬಾಸ್ ಮನೆ ಸೇರಿದ ಪದ್ಮಾವತಿ ಧಾರಾವಾಹಿ ಹೀರೋ ಸಾಮ್ರಾಟ್; ಆದ್ರೆ ತುಳಸಿ ಎಲ್ಲಿದ್ದಾಳೆ ಗೊತ್ತಾ?

First Published | Sep 30, 2024, 7:02 PM IST

ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್ ಆಗಿ ಪದ್ಮಾವತಿ ಧಾರಾವಾಹಿಯ ನಟ ಸಾಮ್ರಾಟ್ ಅಲಿಯಾಸ್ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಇದೇ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟನಿಗೆ ಜೋಡಿಯಾಗಿದ್ದ ತುಳಸಿ ಅಲಿಯಾಸ್ ದೀಪ್ತಿ ಮಾನೆ ಎಲ್ಲಿದ್ದಾಳೆ ಗೊತ್ತಾ? ಇಲ್ಲಿ ನೋಡಿ ಮಾಹಿತಿ...
 

ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್ ಆಗಿ ಪದ್ಮಾವತಿ ಧಾರಾವಾಹಿಯ ನಟ ಸಾಮ್ರಾಟ್ ಅಲಿಯಾಸ್ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ತನ್ನ ಕಷ್ಟದ ಜೀವನವನ್ನು ಹೇಳಿಕೊಂಡು, ತನ್ನ ಛಲವನ್ನು ತೋರಿಸಿ ಸೀದಾ ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಹೋಗಿದ್ದಾನೆ. ಆದರೆ, ಈತನೊಂದಿಗೆ ಇದೇ ಪದ್ಮಾವತಿ ಧಾರಾವಾಹಿಯಲ್ಲಿ ಜೋಡಿಯಾಗಿದ್ದ ತುಳಸಿ ಅಲಿಯಾಸ್ ದೀಪ್ತಿ ಮಾನೆ ಎಲ್ಲಿದ್ದಾಳೆ ಗೊತ್ತಾ? ಯಾಕೆ ಎಲ್ಲಿಯೂ ಕಾಣ್ತಿಲ್ಲ ಎಂದು ಹುಡುಕುವವರ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕರ್ನಾಟಕದ ದಾವಣಗೆರೆಯ ಬೆಡಗಿ ದೀಪ್ತಿ ಮಾನೆ ಅವರು ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣವನ್ನು ದಾವಣಗೆರೆಯಲ್ಲಿ ಪೂರೈಸಿದ್ದಾರೆ. ನಂತರ ಫ್ಯಾಷನ್ ಡಿಸೈನಿಂಗ್ ಪದವಿಗೆ ಬೆಂಗಳೂರಿಗೆ ಬಂದಿದ್ದ ದೀಪ್ತಿ ಮಾನೆ ಕೋರ್ಸ್ ಮುಕ್ತಾಯದ ಜೊತೆಗೆ ಸಿನಿಮಾ ಮತ್ತು ಕಿರುತೆರೆ ಮೇಲೆ ಆಸಕ್ತಿ ತೋರಿಸುತ್ತಾಳೆ.

Tap to resize

ನಟನಾ ಲೋಕಕ್ಕೆ ಕಾಲಿಡಲು ನಿರ್ಧಾರ ಮಾಡಿದ್ದ ದೀಪ್ತಿ ಅವಕಾಶಗಳಿಗಾಗಿ ಕಾಯದೇ ತಾವೇ ಅವಕಾಶವನ್ನು ಹುಡುಕುತ್ತಾ ಹೋದರು. ಆಡಿಶನ್‌ಗಳಿಗೆ ಹೋಗಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದ ದೀಪ್ತಿ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿಕೊಳ್ಳುತ್ತಾರೆ. ತಮಿಳಿನ ಎವನ್ ಮತ್ತು ದೇವದಾಸ್ ಬ್ರದರ್ಸ್ ಸಿನಿಮಾದಲ್ಲಿ ನಟಿಸುತ್ತಾರೆ.

ಇದಾದ ನಂತರ ಕನ್ನಡದ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಹಿಂಗ್ಯಾಕೆ ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಳ್ಳುತ್ತಾರೆ. ಆದರೆ, ಈಕೆಯ ನಟನೆಗೆ ಜನರು ಸೈ ಎಂದರೂ ಸಿನಿಮಾ ಕಥೆಗೆ ಕೈ ಕೊಟ್ಟರು. ಸಿನಿಮಾದಿಂದ ಅಷ್ಟೇನೂ ಖ್ಯಾತಿ ಬರಲಿಲ್ಲ. ಇದಾದ ನಂತರ ಪುನಃ ನಮ್ಮೂರ ಹೈಕ್ಳು ಸಿನಿಮಾದಲ್ಲಿ ನಟಿಸುತ್ತಾರೆ. ಇದಾದ ನಂತರ ಕನ್ನಡದಲ್ಲಿ ಅವಕಾಶ ಕಡಿಮೆ ಆಗಿದ್ದಕ್ಕೆ ಇಕ ಸೆ ಲವ್ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ.

ಈ ವೇಳೆ 2018ರ ವೇಳೆಗೆ ಕರಾಳಿಯ ಸಮುದ್ರ ತೋರದಲ್ಲಿ ದೇವಿಯ ಮಹಾತ್ಮೆ ಕುರಿತ ಧಾರಾವಾಹಿಯೊಂದಕ್ಕೆ ನಾಯಕಿಯನ್ನು ಹುಡುಕುತ್ತಿದ್ದ ಪದ್ಮಾವತಿ ಧಾರಾವಾಹಿ ನಿರ್ದೇಶಕರ ಕಣ್ಣಿಗೆ ಈ ದೀಪ್ತಿ ಬಿದ್ದಿದ್ದಾಳೆ. ಆಗ ದೀಪ್ತಿಯೇ ಧಾರಾವಾಹಿ ನಾಯಕಿ ಎಂದು ಫಿಕ್ಸ್ ಮಾಡಿ ಆಕೆಯಿಂದ ಉತ್ತಮ ನಟನೆಯನ್ನೂ ತೆಗಿಸಿದ್ದಾರೆ. ಇನ್ನು ಕಲರ್ಸ್ ಕನ್ನಡದ 2028ರ ಅನುಬಂಧ ಅವಾರ್ಡ್ಸ್‌ನಲ್ಲಿ ಪದ್ಮಾವತಿ ಧಾರಾವಾಹಿಯ ಸಾಮ್ರಾಟ್ ಮತ್ತು ತುಳಸಿ ಜೋಡಿ ಜನ ಮೆಚ್ಚಿದ ಜೋಡಿ ವಿಭಾಗದಲ್ಲಿ ಪ್ರಶಸ್ತಿಯನ್ನೂ ಗಳಿಸಿದ್ದರು.

ಬಳುಕುವ ಬಳ್ಳಿಯಂತಿದ್ದ ಚೆಲುವೆ ದೀಪ್ತಿ ಮಾನೆಗೆ ಪದ್ಮಾವತಿ ಧಾರಾವಾಹಿಯಲ್ಲಿ ದೈವ ಭಕ್ತೆ, ಮುಗ್ಧೆಯ ಪಾತ್ರವನ್ನು ನೀಡಲಾಗಿರುತ್ತದೆ. ಮತ್ತೊಂದೆಡೆ ಸಾಮ್ರಾಟ್‌ನ ಪಾತ್ರಕ್ಕೆ ತ್ರಿವಿಕ್ರಮ್ ಅವರನ್ನು ಆಯ್ಕೆ ಮಾಡಲಾಗಿರುತ್ತದೆ. ಈ ಇಬ್ಬರ ಜೋಡಿ ಪದ್ಮಾವತಿ ಧಾರಾವಾಹಿಯಲ್ಲಿ ಭಾರೀ ಕಮಾಲ್ ಮಾಡಿತ್ತು. ಪದ್ಮಾವತಿ ಧಾರಾವಾಹಿಯು ಬರೋಬ್ಬರಿ 3 ವರ್ಷಗಳ ಕಾಲ ಪ್ರಸಾರವಾಗಿದೆ. ಇಲ್ಲಿ ದೈವ ಭಕ್ತೆ ಆಗಿದ್ದ ತುಳಸಿ ಕೊನೆಗೆ ದೇವರ ಬಗೆಗಿನ ಸತ್ಯವನ್ನು ಶೋಧನೆ ಮಾಡುವಲ್ಲಿ ಇಬ್ಬರ ಜೋಡಿ ಯಶಸ್ವಿ ಆಗುತ್ತದೆ.

ಇದಾದ ನಂತರ ದೀಪ್ತಿ ಮಾನೆ ಸಿನಿಮಾ ಮತ್ತು ಧಾರಾವಾಹಿ ಎರಡರಲ್ಲಿಯೂ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ. ಪ್ರಸ್ತುತ ತೆಲುಗು ಕಿರುತೆರೆ ಜೀ ತೆಲುಗು ವಾಹಿನಿಯ ರಾಧಮ್ಮ ಕೂತುರು (ರಾಧಮ್ಮನ ಮಗಳು) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗು ನಾಡಿನಾದ್ಯಂತ ಕನ್ನಡತಿ ದೀಪ್ತಿ ಮಾನೆ ಮನೆ ಮಗಳಂತೆ ಪ್ರೀತಿ ಗಳಿಸುತ್ತಿದ್ದಾಳೆ. ಆಕೆಯ ನಟನೆಗೆ ಎಲ್ಲರೂ ತಲೆದೂಗುತ್ತಿದ್ದಾರೆ. ಆದರೆ, ಕನ್ನಡದ ಅಭಿಮಾನಿಗಳು ಮಾತ್ರ ದೀಪ್ತಿಯನ್ನು ಕನ್ನಡಕ್ಕೆ ಬರುವಂತೆ ಮನವಿ ಮಾಡಿದ್ದಾರೆ.

ಸಿನಿಮಾ ಹಾಗೂ ಧಾರಾವಾಹಿ ಹೊರತಾಗಿ ನಿಜ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದೀಪ್ತಿ ಮಾನೆ, ಹೇಳಿ ಕೇಳಿ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ನಲ್ಲಿಯೇ ಪದವಿ ಮಾಡಿದ್ದರಿಂದ ನಾವು ನಿರೀಕ್ಷೆ ಮಾಡುವುದಕ್ಕಿಂತ ತುಸು ಹೆಚ್ಚೇ ಫ್ಯಾಷನೇಟ್ ಆಗಿದ್ದಾರೆ. ದೇಶ ವಿದೇಶಗಳನ್ನು ಸುತ್ತುತ್ತಾ, ಜಾಲಿ ಮಾಡುತ್ತಾ ಹಾಟ್ ಫೋಟೋಶೂಟ್‌ಗಳನ್ನು ಮಾಡಿಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ದೀಪ್ತಿ ಮಾನೆಗೆ ಬರೋಬ್ಬರಿ 2.92 ಲಕ್ಷ ಫಾಲೋವರ್ಸ್‌ಗಳಿದ್ದಾರೆ.

Latest Videos

click me!