
ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ ಈ ಸೀರಿಯಲ್ ವೀಕ್ಷಕರ ಬಳಗದಲ್ಲಿ ಭಲೇ ಫೇಮಸ್. ಈತನಿಗೆ ನೆಟ್ಟಿಗರು ಸೈಕೋ ಜಯಂತ ಅಂತಲೇ ಕರೆಯೋದು. ಆ ಮಟ್ಟಿಗೆ ಈ ಪಾತ್ರ ಮನಸ್ಥಿತಿ ವೀಕ್ಷಕರಲ್ಲಿ ಸೆನ್ಶೇಶನ್ ಮೂಡಿಸಿದೆ. ಈ ಜಯಂತನ ಹಿಸ್ಟರಿ ನೋಡಿದವ್ರು ಮಾತು, ಅಯ್ಯೋ ಪಾಪದ ಹುಡುಗ, ಎಲ್ಲೋ ಪರಿಸ್ಥಿತಿಯ ಹೊಡೆತಕ್ಕೆ ಸಿಕ್ಕಿ ಸೈಕೋ ಆಗಿ ಬದಲಾಗಿದ್ದಾನೆ. ಇದೀಗ ಜಾಹ್ನವಿ ಅವನ ಲೈಫಲ್ಲಿ ಬಂದಿದ್ದಾಳಲ್ಲಾ, ಇನ್ನು ಮೇಲಿಂದ ಎಲ್ಲವೂ ನಿಧಾನಕ್ಕಾದರೂ ಬದಲಾಗಬಹುದು ಅಂತಲೇ ಎಲ್ಲರೂ ಅಂದುಕೊಂಡರು. ಆದರೆ ಅವರ ಎಕ್ಸ್‌ಪೆಕ್ಟೇಶನ್ ಫುಲ್ ಉಲ್ಟಾ ಹೊಡೆದು ಬಿಟ್ಟಿತು. ಜಯಂತನ ಸೈಕೋತನ ಹೋಗೋ ಬದಲು ಜಾಹ್ನವಿನೇ ಪರಿಸ್ಥಿತಿಗೆ ಹೊಂದಿಕೊಂಡು ಆತನ ಸ್ವಭಾವಕ್ಕೂ ಅಡ್ಜೆಸ್ಟ್ ಆಗ್ತಾ ಹೋಗತೊಡಗಿದಳು. ಅವನ ಭಯಾನಕ ಬಿಹೇವಿಯರ್ ಅನ್ನೂ ಪ್ರೀತಿಯ ಎಕ್ಸ್‌ಟ್ರೀಮ್ ಅಂದುಕೊಂಡು ಆಕೆ ಅದನ್ನೂ ಒಂದು ರೀತಿಯಲ್ಲಿ ಪಾಸಿಟಿವ್ ಆಗಿಯೇ ತಗೊಂಡಳು ಅಂತ ಹೇಳಬಹುದು.
ಆದರೆ ಈ ಥರದ ಅಡ್ಜೆಸ್ಟ್‌ಮೆಂಟಿನಲ್ಲಿ ಕಳೆದುಹೋದ ಆಕೆಗೆ ತನ್ನ ಸ್ವಾತಂತ್ರ್ಯ ಎಲ್ಲ ಹೊರಟು ಹೋಗಿರುವುದರ ಬಗ್ಗೆ ಆಗಲೀ, ತಾನು ಪಂಜರದ ಹಕ್ಕಿಯ ಹಾಗೆ ಬದುಕುತ್ತಿರುವುದರ ಕುರಿತಾಗಲೀ ಯೋಚನೆ ಬಂದಿರಲಿಲ್ಲ. ಅವಳಿಗೆ ಅವಳ ಸ್ಥಿತಿ ಯಾವ ರೀತಿ ಇದೆ ಅಂತ ತೋರಿಸಿಕೊಟ್ಟದ್ದು ಅಕ್ಕ ಭಾವನಾ.
ಹೆಂಡತಿಯ ತರಕಾರಿ ತರುವ ಸ್ವಾತಂತ್ರ್ಯವನ್ನೂ ಕಸಿದುಕೊಂಡಿರುವ ಓವರ್ ಪೊಸೆಸ್ಸಿವ್ ಜಯಂತ್‌ನಿಗೆ ಇದೀಗ ತನ್ನ ಮನೆಯಲ್ಲೇ ಹೆಂಡತಿಯ ಕಾಲೇಜು ಸ್ನೇಹಿತ ಸಿಕ್ಕಾಕಿಕೊಂಡರೆ ಪರಿಸ್ಥಿತಿ ಹೇಗಿರಬಹುದು.. ಜಯಂತನ ಈ ಹಿಂದಿನ ಹಿಸ್ಟರಿ ಗೊತ್ತಿರುವ ಎಲ್ಲರೂ ಹೇಳುತ್ತಿರುವ ಉತ್ತರ ಅಂದರೆ ಅವನು ಮತ್ತೆ ನಾಗವಲ್ಲಿ ಅವತಾರ ತಾಳ್ತಾನೆ ಅನ್ನೋದು. ಒಂದು ಕಾಲದಲ್ಲಿ ವೀಕ್ಷಕರಲ್ಲೂ ವಿಪರೀತ ಭಯ ಹುಟ್ಟಿಸಿದ್ದ ಜಯಂತನ ಅತಿರೇಕದ ವರ್ತನೆ ಇದೀಗ ಅವರು ಜೋಕ್ ಮಾಡಿ ನಗೋ ಹಾಗೆ ಆಗಿಬಿಟ್ಟಿದೆ. ಹಾರರ್ ಸಿನಿಮಾದಲ್ಲೇ ಆದರೂ ಪದೇ ಪದೇ ಭಯ ಹುಟ್ಟಿಸುವ ಸೀನ್‌ಗಳೇ ಬಂದರೆ ಪ್ರೇಕ್ಷಕರಿಗೆ ಆ ಭಯದ ಸೀನ್ ಕೂಡ ಕಾಮಿಡಿ ಥರ ಕಾಣೋದಿದೆ. ಈ ಸೀರಿಯಲ್‌ನಲ್ಲೂ ಅದೇ ಆಗಿದೆ.
ದರ್ಶನ್ ಪರ ಬ್ಯಾಟ್ ಬೀಸಿದ್ದವರು ಬಿಗ್ ಬಾಸ್ ಮನೆಗೆ, ವೋಟ್ ಗಿಟ್ಟಿಸಿಕೊಳ್ಳೋ ಗಿಮಿಕ್ ಎಂದ ಫ್ಯಾನ್ಸ್
ಜಾಹ್ನವಿ ಮನೆಯಲ್ಲಿ ಫ್ರೆಂಡ್ ಬಂದು ಕೂತಿದ್ದಾನೆ. ಅವನು ಬಂದಿರೋದು ಜಯಂತ್ ಗಮನಕ್ಕೆ ಬಂದಿಲ್ಲ. ಅದನ್ನ ಹೇಳುವ ಸತ್ಯವೂ ಜಾನುಗೆ ಇಲ್ಲ. ಇನ್ನೆಲ್ಲಿ ಗಂಡನಿಗೆ ಸತ್ಯ ಗೊತ್ತಾಗಿ ಬಿಡುತ್ತದೆಯೋ ಎಂಬುದು ಟೆನ್ಶನ್‌ನಲ್ಲೇ ಬದುಕುತ್ತಿದ್ದಾಳೆ. ಆದರೆ ದಿಲೀಪನಿಗೆ ಈ ಜಯಂತ ಎಂಥಾ ಸೈಕೋ ಅನ್ನೋದು ಗೊತ್ತಾಗಿದೆ. ಅಷ್ಟಕ್ಕೂ ಈ ದಿಲೀಪ ಪೊಲೀಸರಿಂದ ತಪ್ಪಿಸಿಕೊಂಡು ಬಂದ ದಿಲೀಪ್ ಸೀದಾ ಜಾನು ಮನೆಗೆ ಬಂದಿದ್ದಾನೆ. ಆದರೆ ಜಾನುಗೆ ಜಯಂತ್ ಬಳಿ ಹೇಳುವ ಧೈರ್ಯವಿಲ್ಲ. ಈ ಘಟನೆಯಿಂದ ಜಯಂತ್ ಕಂಡಾಗಲೆಲ್ಲಾ ಜಾನು ಭಯ ಬಿದ್ದು ಹೋಗಿದ್ದಾಳೆ. ಜಯಂತ್‌ಗೆ ಇದು ಪ್ರಶ್ನೆಯಾಗಿ ಉಳಿದಿದೆ. ಪೊಲೀಸರು ಬಂದಿದ್ದ ಕಾರಣಕ್ಕೆ ಚಿನ್ನುಮರಿ ಭಯ ಬಿದ್ದಿರಬೇಕು ಎಂದುಕೊಂಡಿದ್ದಾನೆ.
ಇಂಥ ಹೆಂಡ್ತಿ ಸಿಕ್ರೆ ಹೇಗೆ ಹ್ಯಾಂಡಲ್ ಮಾಡೋದು? ಅವಿವಾಹಿತ ಯುವಕರಿಗೆ ಶುರುವಾಗಿದೆ ಟೆನ್ಷನ್!
ಆದರೆ ಒಂದು ಹಂತದಲ್ಲಿ ಜಯಂತನಿಗೆ ತನ್ನ ಮನೆಯೊಳಗೆ ಪತ್ನಿಯ ಕಾಲೇಜು ಸ್ನೇಹಿತ ಸೇರಿಕೊಂಡಿರುವುದು ಗೊತ್ತಾಗಿದೆ. ಅವನು ಹೆಂಡತಿಯನ್ನು ಡ್ಯಾನ್ಸ್ ಮಾಡಲು ಒತ್ತಾಯಿಸುತ್ತಲೇ ಅಡಗಿಕೊಂಡಿದ್ದ ಈ ಸ್ನೇಹಿತನ ಕಾಲರ್ ಪಟ್ಟಿ ಹಿಡಿದು ಮೇಲಕ್ಕೆಳೆದಿದ್ದಾನೆ. ದಿಲೀಪನ ಬಗ್ಗೆ ಜಾಹ್ನವಿ ಬಳಿ ಭಯ ಹುಟ್ಟಿಸುವ ಹಾಗೆ ಪ್ರಶ್ನೆ ಕೇಳುತ್ತಿದ್ದಾನೆ. ಇದನ್ನು ಕಂಡು ಸೈಕೋ ಜಯಂತನ ಮತ್ತೊಂದು ನಾಗವಲ್ಲಿ ಅವತಾರಕ್ಕೆ ಮಹಾಜನತೆ ಎದುರು ನೋಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.