ರಾಜ್ಯ, ರಾಷ್ಟ್ರ ಬಿಜೆಪಿಯಲ್ಲಿ ಮೇಜರ್ ಸರ್ಜರಿ: ಕಟೀಲ್ ಮುಂದುವರಿಕೆ, 'ಶಾ' ನಿರ್ಗಮನ

Jan 13, 2020, 8:04 PM IST

ಬೆಂಗಳೂರು/ನವದೆಹಲಿ, [ಜ.13]: ಕರ್ನಾಟಕ ಬಿಜೆಪಿ ಮಾತ್ರವಲ್ಲದೇ ರಾಷ್ಟ್ರ ಬಿಜೆಪಿಯಲ್ಲೂ ಸಹ ಮೇಜರ್ ಸರ್ಜರಿಯಾಗಿದೆ. ರಾಜ್ಯದಲ್ಲಿ 18 ಹೊಸ ಜಿಲ್ಲಾಧಕ್ಷರುಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲದೇ ನಳಿನ್ ಕುಮಾರ್ ಕಟೀಲ್ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಸಲಾಗಿದೆ.

ಅತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬದಲಾವಣೆ: ಇತ್ತ ರಾಜ್ಯದ 18 ಹೊಸ ಜಿಲ್ಲಾಧ್ಯಕ್ಷರ ನೇಮಕ

ಆದ್ರೆ, ಅತ್ತ ಹೈಕಮಾಂಡ್ ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದು, ಹೊಸ ರಾಷ್ಟ್ರೀಯ ಅಧ್ಯಕ್ಷ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ.