ಬೀಳಗಿಯಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳು: ನಿರಾಣಿ ಕ್ಷೇತ್ರದಲ್ಲಿ ಸಹೋದರನಿಗೆ ಅದೃಷ್ಟ ಪರೀಕ್ಷೆ

Apr 22, 2023, 12:03 PM IST

ಬಾಗಲಕೋಟೆ: ಜಿಲ್ಲೆಯ ಬೀಳಗಿ ಕ್ಷೇತ್ರ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಒಂದೇ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಸಚಿವ ಮುರುಗೇಶ್‌ ನಿರಾಣಿ ಕ್ಷೇತ್ರದಲ್ಲಿ ಸಹೋದರ ಸಂಗಮೇಶ್ ನಿರಾಣಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಸಚಿವ ನಿರಾಣಿ ನಾಮಪತ್ರ ತಿರಸ್ಕೃತವಾಗುವ ಆಂತಕದಲ್ಲಿ ಇದ್ದಾರೆ ಎಂಬ ಚರ್ಚೆ ಸಹ ನಡೆಯುತ್ತಿದೆ. ನಾಮಪತ್ರದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ತೆರಿಗೆ ಪಾವತಿ ವಿಚಾರದಲ್ಲೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ರೈತ ಸಂಗದ ಬೆಂಬಲಿತ ಅಭ್ಯರ್ಥಿ ಯಲ್ಲಪ್ಪ ಹೆಗಡಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಬೀದರ್‌ನಲ್ಲಿ ಕಮಲ ಅರಳಿಸಲು ರಣತಂತ್ರ: 6 ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಾ