ಖಾಲಿ ಹೊಟ್ಟೆಯಲ್ಲಿ ಅಗಸೆಬೀಜದ ನೀರನ್ನು ಕುಡಿಯುವುದು ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅವುಗಳು ಯಾವೆಂಬುದು ತಿಳಿಯೋಣ.
Image credits: others
ಕೊಬ್ಬು ಕರಗಿಸುತ್ತದೆ
ಅಗಸೆ ಬೀಜಗಳನ್ನು ನೆನೆಸಿ ಆ ನೀರನ್ನು ಬೆಳಿಗ್ಗೆ ಕುಡಿದರೆ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದರೆ ನಂಬುತ್ತೀರಾ? ಹೌದು ಪರಿಣತರು ಹೇಳುವಂತೆ ಅಗಸೆ ಬೀಜಗಳು ನೆನೆಹಾಕಿದ ನೀರು ಕುಡಿಯುವುದು ಆರೋಗ್ಯಕರವಾಗಿದೆ.
Image credits: others
ಮಧುಮೇಹ ನಿಯಂತ್ರಣ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
Image credits: Getty
ಮೆದುಳಿನ ಆರೋಗ್ಯಕ್ಕೆ
ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಅಗಸೆ ಬೀಜದ ನೀರು ಕುಡಿಯುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
Image credits: Getty
ಹೃದಯದ ಆರೋಗ್ಯಕ್ಕೆ
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇವು ಸಹಾಯ ಮಾಡುತ್ತವೆ.
Image credits: Getty
ತೂಕ ಇಳಿಸಲು ಸಹಾಯಕ
ನಾರಿನಂಶ ಹೊಂದಿರುವ ಇವು ಹಸಿವನ್ನು ಕಡಿಮೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತವೆ.
Image credits: Getty
ಚರ್ಮದ ಆರೋಗ್ಯಕ್ಕೆ
ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
Image credits: Getty
ಮಲಬದ್ಧತೆ ನಿವಾರಣೆ
ಅಗಸೆ ಬೀಜಗಳನ್ನು ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ.