Sep 21, 2020, 5:40 PM IST
ಬೆಂಗಳೂರು (ಸೆ. 21): ಇಂದಿನಿಂದ ರಾಜ್ಯದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಿದೆ. ಕೋವಿಡ್ ನಿರ್ವಹಣೆ, ಆರ್ಥಿಕ ಕುಸಿತ, ನೆರೆ ಪರಿಹಾರ, ಡ್ರಗ್ಸ್ ಮಾಫಿಯಾ, ಡಿಜೆ ಹಳ್ಳಿ ಪ್ರಕರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಕಲಾಪವನ್ನು ಮೂರೇ ದಿನಕ್ಕೆ ಮುಗಿಸುವ ಬಗ್ಗೆ ಚರ್ಚೆಯಾಗಿತ್ತು. ಇದೀಗ ಮೂರು ದಿನದ ಬದಲು 6 ದಿನಕ್ಕೆ ಅಧಿವೇಶನ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಸೆ. 26 ರಂದು ಅಧಿವೇಶನ ಮುಕ್ತಾಯವಾಗುತ್ತದೆ. ಆದರೆ ಕಾಂಗ್ರೆಸ್ 15 ದಿನ ಕಲಾಪ ನಡೆಸುವಂತೆ ಪಟ್ಟು ಹಿಡಿದಿದೆ. ಅನೇಕ ಪ್ರಮುಖ ಬಿಲ್‌ಗಳ ಬಗ್ಗೆ ಚರ್ಚಿಸುವುದಕ್ಕಿದೆ. ಇಷ್ಟು ಬೇಗ ಕಲಾಪವನ್ನು ಮುಗಿಸುವುದು ಬೇಡ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.