ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್‌ಗಳು, ಮೆಸೆಂಜರ್ ಮತ್ತು ವಾಟ್ಸಾಪ್ ಸೇರಿದಂತೆ ಮೆಟಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂಗಳು ಜಾಗತಿಕ ಸ್ಥಗಿತವನ್ನು ಎದುರಿಸುತ್ತಿವೆ. ಬಳಕೆದಾರರು ಪ್ಲಾಟ್‌ಫಾರಂಗಳನ್ನು ಪ್ರವೇಶಿಸಲು, ನಿಧಾನ ಲೋಡಿಂಗ್ ಸಮಯ ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನವದೆಹಲಿ: ಮೇಟಾದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್‌ಗಳು, ಮೆಸೆಂಜರ್ ಮತ್ತು ವಾಟ್ಸಾಪ್ ಕಾರ್ಯಚರಣೆಯಲ್ಲಿ ಅಡಚಣೆಯುಂಟಾಗಿದೆ. ಭಾರತ ಸೇರಿದಂತೆ ಪ್ರಪಂಚದ ಹಲವು ಭಾಗಗಳಲ್ಲಿ ಕಾರ್ಯಚರಣೆಯ ವೇಗ ಕುಂಠಿತವಾಗಿದ್ರೆ, ಕೆಲವು ಕಡೆ ಸ್ಥಗಿತವಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾ ಬಳಕೆದಾರರು ತನ್ನ ಖಾತೆಗಳನ್ನು ನಿರ್ವಹಿಸಲು ಕಷ್ಟ ಅನುಭವಿಸುತ್ತಿದ್ದರೆ. ಬಳಕೆದಾರರು ರಾತ್ರಿ 11 ಗಂಟೆಯಿಂದಲೇ ದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಥ್ರೆಡ್‌ಗಳು, ಮೆಸೆಂಜರ್ ಮತ್ತು ವಾಟ್ಸಾಪ್ ಬಳಕೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಯಾವುದೇ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗಲೂ ಅದು ಲೋಡಿಂಗ್‌ಗಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಕೆಲವರಿಗೆ ಸಾಮಾಜಿಕ ಜಾಲತಾಣಗಳನ್ನು ಪ್ರವೇಶಿಸಲು ಸಹ ಸಾಧ್ಯವಾಗುತ್ತಿಲ್ಲ. ಯಾವುದೇ ಪೋಸ್ಟ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ.
Everyone coming to Twitter to find out if Instagram is down. pic.twitter.com/CXVqyGvpvq
— Priyanka Sharma (@Priyank_asharma)Elon musk has changed the x like button inorder to celebrate instagram been down, like this tweet to see the effect. pic.twitter.com/quLFxlu6UC pic.twitter.com/D0J6Jd2ppc
— Sandeep Yadav (@Sandeep25122002)How X treats , and when they are down.
Do you Agree ?
pic.twitter.com/YfWCyFMfUC