‘ನನ್ನ ಬಗ್ಗೆ ಹಲವು ಬಾರಿ ವದಂತಿಗಳು ಹಬ್ಬಿವೆ. ಹಾಗೆ ಬಂದ ಪ್ರತಿ ಬಾರಿಯೂ ನಾನು ಮೌನವಾಗಿದ್ದೆ. ಯಾಕೆಂದರೆ ನಿಜ ಏನೆಂದು ದೇವರಿಗೆ ತಿಳಿದಿದೆ. ಆದರೆ, ಮೌನವಾಗಿದ್ದೇನೆ ಎಂದು ಇಂತಹ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಈಗ ಪ್ರತಿಕ್ರಿಯಿಸಬೇಕಾದ ಸಮಯ ಬಂದಿದೆ. ನನ್ನ ಸಿನಿಮಾಗಳ ಬಿಡುಗಡೆ, ನನ್ನ ಪ್ರಕಟಣೆಗಳು, ನನ್ನ ವೃತ್ತಿಜೀವನ.. ಹೀಗೆ ನನಗೆ ಸಂಬಂಧಿಸಿದ ಯಾವುದೇ ಆಧಾರರಹಿತ ಸುದ್ದಿಗಳನ್ನು ಪ್ರಕಟಿಸಿದರೆ.. ಅದು ಗುರುತಿಸಲ್ಪಟ್ಟ ಮಾಧ್ಯಮ ಸಂಸ್ಥೆಯಾದರೂ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ಇಷ್ಟು ದಿನ ಸಹಿಸಿಕೊಂಡೆ. ಇನ್ನು ಮುಂದೆ ಇಂತಹ ಕೆಟ್ಟ ವರದಿಗಳನ್ನು ಸಹಿಸಲು ನಾನು ಸಿದ್ಧರಿಲ್ಲ’ ಎಂದು ಬರೆದಿದ್ದಾರೆ. ಪ್ರಸ್ತುತ ಈ ಪೋಸ್ಟ್ ವೈರಲ್ ಆಗಿದೆ.