Aug 7, 2023, 12:28 PM IST
ಲೋಕಸಭೆ ಚುನಾವಣೆಗೆ ಈಗಾಗಲೇ ಟಿಕೆಟ್ ಫೈಟ್ ಶುರುವಾಗಿದೆ. ಪುತ್ರನಿಗೆ ಕಾಂಗ್ರೆಸ್ ಟಿಕೆಟ್‌ಗೆ(ticket) ಸಚಿವರು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅಲ್ಲದೇ ಪುತ್ರನನ್ನು ಕಣಕ್ಕಿಳಿಸಲು ಮುಂದಾದ ಹಾಲಿ ಸಚಿವರಿಗೆ ಹೈಕಮಾಂಡ್(Highcommand) ಶಾಕ್ ನೀಡಿದೆ. ಪುತ್ರನಿಗೆ ಟಿಕೆಟ್ ನೀಡೋಕಾಗಲ್ಲ ನೀವೇ ಬೇಕಿದ್ರೆ ಸ್ಪರ್ಧೆ ಮಾಡಿ ಎಂದು ಸಚಿವ ಎಚ್.ಸಿ. ಮಹಾದೇವಪ್ಪಗೆ(Minister Mahadevappa) ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮೀಟಿಂಗ್ ಬಳಿಕ ಟಿಕೆಟ್ ಮಾತುಕತೆ ನಡೆದಿದೆ. ಪುತ್ರ ಸುನೀಲ್ ಬೋಸ್‌ಗೆ ಸಚಿವ ಮಹಾದೇವಪ್ಪ ಟಿಕೆಟ್ ಕೇಳಿದ್ದರು. ಪುತ್ರನಿಗೆ ಟಿಕೆಟ್ ನಿರಾಕರಿಸಿದ್ದಕ್ಕೆ ತಾವೇ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಚಾಮರಾಜನಗರ ಲೋಕಸಭೆ ಕ್ಷೇತ್ರದಿಂದ ಮಹಾದೇವಪ್ಪ ಸ್ಪರ್ಧೆ ಪಕ್ಕಾ ಎನ್ನಲಾಗ್ತಿದೆ. ಮೈಸೂರು ಕಾಂಗ್ರೆಸ್ (Congress) ಟಿಕೆಟ್ ನಿರೀಕ್ಷೆಯಲ್ಲಿ ಬಿಜೆಪಿ(BJp) ಹಾಲಿ ಎಂಎಲ್‌ಸಿ ಎಚ್. ವಿಶ್ವನಾಥ್ ಇದ್ದಾರೆ. ಇನ್ನೂ ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ತೆರೆ ಮರೆ ಕಸರತ್ತು ನಡೆಸಲಾಗುತ್ತಿದೆ. ಉಡುಪಿ-ಚಿಕ್ಕಮಗಳೂರು ಟಿಕೆಟ್‌ಗೆ ಪ್ರಮೋದ್ ಮದ್ವರಾಜ್ ಆಸಕ್ತಿ ತೋರಿದ್ದಾರೆ.
ಇದನ್ನೂ ವೀಕ್ಷಿಸಿ: ವಿಪಕ್ಷಗಳ ‘ಇಂಡಿಯಾ’ ಕೂಟದಲ್ಲಿ ಭಾರೀ ಬೆಳವಣಿಗೆ: ಮೋದಿ ವಿರುದ್ಧ ಸಾರಥ್ಯಕ್ಕೆ ಸಜ್ಜಾಗ್ತಾರಾ ಸೋನಿಯಾ..?