Bengaluru: ಡಿ.ಕೆ. ಶಿವಕುಮಾರ್‌ ಟ್ಯಾಕ್ಸ್‌ ಬಗ್ಗೆ ಲೋಕಾಯುಕ್ತ ಇಲಾಖೆ ತನಿಖೆ ಮಾಡಲಿ

Aug 13, 2023, 6:43 PM IST

ಬೆಂಗಳೂರು (ಆ.13): ರಾಜಧಾನಿಯಲ್ಲಿ ಕಮೀಷನ್‌ ಆರೋಪ ತಾರಕಕ್ಕೆ ಏರಿಕೆಯಾಗಿದೆ. ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವೇ ಕಡು ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಕೆಎಸ್‌ ಟ್ಯಾಕ್ಸ್‌ ವಸೂಲಿ ಆಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿದ್ದು ಕೂಡಲೇ ನೈತಿಕ ಹೊಣೆಹೊತ್ತು ರಾಜಿನಾಮೆ ನಿಡಬೇಕು. ಇನ್ನು ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕರು ಡಿಕೆಎಸ್‌ ಟ್ಯಾಕ್ಸ್‌ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸಲಿ ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ. 

ಡಿಸಿಎಂ ಡಿಕೆಶಿ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪದ ಹೊಣೆಹೊತ್ತು ಕೂಡಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಬೆಂಗಳೂರಿಗೆ ಸಂಬಂಧ ಇಲ್ಲದ ವ್ಯಕ್ತಿಗೆ ಬೆಂಗಳೂರು ಅಭಿವೃದ್ಧಿ ಸಚಿವರನ್ನಾಗಿ ಮಾಡಿದ್ದಾರೆ. ಕೆಂಪೇಗೌಡ್ರು ಬೆಂಗಳೂರು ಕಟ್ಟಿದ್ದು, ಡಿ.ಕೆ. ಶಿವಕುಮಾರ್ ಬೆಂಗಳೂರು ನಿರ್ನಾಮ ಮಾಡ್ತಿದ್ದಾರೆ. ದಯವಿಟ್ಟು ಕೆಂಪೇಗೌಡ್ರು ಹೆಸರನ್ನ ಡಿ.ಕೆ. ಶಿವಕುಮಾರ್ ಹೆಸರು ಹೇಳ್ಬೇಡಿ ಎಂದು ಮನವಿ ಮಾಡಿದರು. 
ಸತ್ಯ ಹರಿಶ್ಚಂದ್ರ ಸಿದ್ದರಾಮಯ್ಯನವರು, ಸತ್ಯ ಹರಿಶ್ಚಂದ್ರ ಡಿ.ಕೆ. ಶಿವಕುಮಾರ್, ಸತ್ಯ ಹರಿಶ್ಚಂದ್ರರಾದ ಚಲುವರಾಯಸ್ವಾಮಿ ಅವರೇ ಕಮಿಷನ್ ಕೇಳಿರುವ ಬಗ್ಗೆ ಲೋಕಾಯುಕ್ತಕ್ಕೆ ತನಿಖೆ ಕೊಡಲಿ. ಡಿ.ಕೆ. ಶಿವಕುಮಾರ್ ಮೇಲೆ ಕಮಿಷನ್ ಆರೋಪ ಮಾಡಿದೆ. ಕಾಮಗಾರಿ ಬಿಲ್ ಬಗ್ಗೆ ತನಿಖೆಯಾಗಲಿ. ಆದ್ರೆ ಮೊದಲು ಬಿಲ್ ಬಿಡುಗಡೆ ಮಾಡಲಿ. ಆಮೇಲೆ ತನಿಖೆ ಮಾಡಲಿ ಯಾರು ಬೇಡ ಅಂದಿದ್ದು.? ಕಮಿಷನ್‌ ಆರೋಪ ಮಾಡಿದ ಡಿ.ಕೆ. ಶಿವಕುಮಾರ್‌ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.