Apr 17, 2023, 10:50 PM IST
ಬೆಂಗಳೂರು (ಏ.17): ಜಗದೀಶ್ ಶೆಟ್ಟರ್ ಅವರು ಯಾವುದೇ ಕಂಡೀಷನ್ ಕೂಡ ಹಾಕದೇ ಕಾಂಗ್ರೆಸ್‌ಗೆ ಬಂದಿದ್ದಾರೆ. ಇನ್ನು ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿ-ಫಾರಂ ಕೂಡ ಕೊಡಲಾಗಿದೆ. ಆದರೆ, ಈಗ ಜಗದೀಶ್ ಶೆಟ್ಟರ್ ಅವರು ಇನ್ನೂ ಇಬ್ಬರಿಗೆ ಟಿಕೆಟ್ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಖುದ್ದು ಜಗದೀಶ್ ಶೆಟ್ಟರ್ ಅವರು ಯಾವುದೇ ಡಿಮ್ಯಾಂಡ್ ಅನ್ನೂ ಮಾಡಿಲ್ಲ. ಆದರೆ, ಅವರ ಜೊತೆಗೆ ಹೋಗಿರುವಂತಹ ಬೆಂಬಲಿಗರು ಜಗದೀಶ್ ಶೆಟ್ಟರ್ ಅವರೊಂದಿಗೆ ಹೋಗಿ ಸ್ವಾಮಿ ಕಾರ್ಯ, ಸ್ವ ಕಾರ್ಯ ಎರಡನ್ನೂ ಮಾಡಿಕೊಡವಂತೆ ಈ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಹೂವಿನ ಜೊತೆಗೆ ನಾರು ಕೂಡ ಸ್ವರ್ಗ ಸೇರಿತು ಎಂಬಂತೆ ಜಗದೀಶ್ ಶೆಟ್ಟರ್ ಅವರೊಂದಿಗೆ ಕೆಲವರು ಬೆಂಬಲಿಗರು ಕೂಡ ಟಿಕೆಟ್ ಲಾಬಿ ಮಾಡುವ ಮೂಲಕ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಮುಂದಾಗಿದ್ದಾರೆ.