ನಟಿ ನಿತ್ಯಾ ಮೆನನ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ...ಅವರ ಮುಗ್ಧ ಮುಖ ಹಾಗೂ ಆಕರ್ಷಕ ನಗುವನ್ನು ಕನ್ನಡ ಸಿನಿಪ್ರೇಕ್ಷಕರು ಎಂದೂ ಮರೆಯಲಾಗದು..
ನಟಿ ನಿತ್ಯಾ ಮೆಮನ್ (Nithya Menon) ಗೊತ್ತಿಲ್ಲದವರು ಕಡಿಮೆ. ಕನ್ನಡ ಸೇರಿದಂತೆ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ ಅವರು! ಅವರ ನಟನೆಗೆ ಫಿದಾ ಆಗಲೇಬೇಕು ಎಂಬಷ್ಟು ಉತ್ತಮವಾಗಿ ನಟಿಸುತ್ತಾರೆ ನಿತ್ಯಾ ಮೆನನ್. ಕನ್ನಡದಲ್ಲಿ ಅವರ ನಟನೆಯ 'ಮೈನಾ' ಚಿತ್ರವನ್ನು ಯಾರೂ ಮರೆಲು ಸಾಧ್ಯವಿಲ್ಲ. ಕುಂಟಿಯ ಪಾತ್ರದಲ್ಲಿ ಅವರು ಜೀವಿಸಿದ ಪರಿ ಎಂಥವರಲ್ಲೂ ಕಣ್ಣೀರು ತರಿಸಿತ್ತು. ಅವರೀಗ ರಾಷ್ಟ್ರೀಯ ಪ್ರಶಸ್ತಿ ಪಡೆದ ಶ್ರೇಷ್ಠ ನಟಿ ಕೂಡ!
'ನನಗೆ ಓದಲು ಹಾಗೂ ಬರೆಯಲು ಬರುವ ಏಕೈಕ ಭಾಷೆ ಕನ್ನಡ' ಎಂದಿದ್ದಾರೆ ನಟಿ ನಿತ್ಯಾ ಮೆನನ್. ನಿತ್ಯಾ ಮೆನನ್ ಅವರಿಗೆ ತೆಲುಗು, ಮಲಯಾಳಂ ಹಾಗು ತಮಿಳು ಭಾಷೆಗಳು ಮಾತನಾಡಲು ಬರುತ್ತವೆಯಂತೆ. ಆದರೆ, ಮಾತನಾಡುವ ಜೊತೆಗೆ ಬರೆಯಲೂ ಬರುವ ಒಂದೇ ಒಂದು ಭಾಷೆ ಕನ್ನಡ ಎಂಬುದು ಅಚ್ಚರಿ ಎಂದರೂ ಸತ್ಯ ಸಂಗತಿ ಎನ್ನಲಾಗಿದೆ. ನಟಿ ನಿತ್ಯಾಗೆ ಇತ್ತೀಚೆಗೆ ನ್ಯಾಷನಲ್ ಅವಾರ್ಡ್ ಕೂಡ ಸಿಕ್ಕಿದೆ.
undefined
ಜಾರ್ಜಿಯಾ ವಿಡಿಯೋ ಬಗ್ಗೆ ಹೇಳಿದ ಸಾಯಿ ಪಲ್ಲವಿ; ನಟಿಗೆ ಹಳೆಯವೇ ಕಾಡ್ತಿರೋದು ಯಾಕೆ?
ನಿತ್ಯಾ ಮೆನನ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೈನಾ, ಪ್ರಾಣ, ಜೋಶ್, ಸೆವೆನ್ ಓಕ್ಲಾಕ್, ಕೋಟಿಗೊಬ್ಬ 2 ಹಾಗೂ ಐದೊಂದ್ಲ ಐದು ಸಿನಿಮಾಗಳಲ್ಲಿ ನಟಿ ನಿತ್ಯಾ ಮೆನನ್ ನಟಿಸಿದ್ದು, ಅವುಗಳಲ್ಲಿ ಸೂಪರ್ ಹಿಟ್ ಎನಿಸಿದ್ದು ಮೈನಾ ಹಾಗು ಕೋಟಿಗೊಬ್ಬ 2 ಚಿತ್ರಗಳು. ಆದರೆ, ನಟಿ ನಿತ್ಯಾ ಮೆಮನ್ ಅವರ ಮುಗ್ಧ ಮುಖ ಹಾಗೂ ಆಕರ್ಷಕ ನಗುವನ್ನು ಕನ್ನಡ ಸಿನಿಪ್ರೇಕ್ಷಕರು ಎಂದೂ ಮರೆಯಲಾಗದು ಎನ್ನಬಹುದು!
ನಿತ್ಯಾ ಮೆನನ್‌ಗೆ ಇತ್ತೀಚೆಗೆ 70ನೇ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ, ತಮಿಳು ಸಿನಿಮಾ ತಿರುಚಿತ್ರಂಬಾಲಮ್ (Thiruchitrambalam) ಗೆ ನ್ಯಾಷನಲ್ ಅವಾರ್ಡ್ ಶ್ರೇಷ್ಠ ನಟಿ ಪ್ರಶಸ್ತಿ ದೊರೆತಿದೆ. ಈ ಚಿತ್ರದಲ್ಲಿ ನಿತ್ಯಾ ಮೆನನ್ ಅವರು ಶೋಭನಾ ಹೆಸರಿನ (Shobhana) ಪಾತ್ರವನ್ನು ನಿರ್ವಹಿಸಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಈ ಚಿತ್ರದಲ್ಲಿ ಅವರ ಅಮೊಘ ಅಭಿನಯವ್ನನು ಮೆಚ್ಚಿ ಎಲ್ಲರೂ ಕೊಂಡಾಡಿದ್ದರು. ಅದಕ್ಕೀಗ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗುವ ಮೂಲಕ ಗೌರವ ಹಾಗೂ ನ್ಯಾಯವೂ ದೊರಕಿದೆ ಎನ್ನಬಹುದು.
ದರ್ಶನ್‌ಗೆ ಒಳ್ಳೆಯ ಭವಿಷ್ಯವಿದೆ, 2025ರಲ್ಲಿ ಮತ್ತೆ ಸಿನಿಮಾದಲ್ಲೂ ನಟಿಸುತ್ತಾರೆ: ಅರ್ಜುನ್ ಗುರೂಜಿ!