ಚಾಣಕ್ಯ ನೀತಿ: ಶ್ರೀಮಂತಿಕೆ, ಯಶಸ್ವಿ ಜೀವನಕ್ಕೆ 5 ನಿಯಮ ಪಾಲಿಸಿ!

First Published | Oct 31, 2024, 1:28 PM IST

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಒಬ್ಬ ವ್ಯಕ್ತಿ ಬೇಗನೆ ಯಶಸ್ಸು ಮತ್ತು ಹಣ ಗಳಿಸಲು ಸಹಾಯ ಮಾಡುವ ಕೆಲವು ಅಭ್ಯಾಸಗಳ ಬಗ್ಗೆ ಹೇಳಿದ್ದಾರೆ. ಅವು ಯಾವುವು? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ..

ಚಾಣಕ್ಯ ನೀತಿ: ಬದುಕಿನ ಪಾಠಗಳು

ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಬದುಕಿನ ಬಗೆಗಿನ ನೀತಿಗಳನ್ನು ರಚಿಸಿದರು. ರಾಜಕೀಯ, ಯುದ್ಧ ಕೌಶಲ್ಯ ಮಾತ್ರವಲ್ಲದೆ, ಮಕ್ಕಳ ಉತ್ತಮ ಪಾಲನೆ, ಕೌಟುಂಬಿಕ ಬದುಕು, ಒಳ್ಳೆಯ ಸಂಸ್ಕಾರ, ವ್ಯಕ್ತಿಯ ಯಶಸ್ಸಿನ ಸೂತ್ರಗಳನ್ನೂ ಚಾಣಕ್ಯರು ವಿವರಿಸಿದ್ದಾರೆ. 

ಚಾಣಕ್ಯ ನೀತಿಯ ಮುಖ್ಯ ವಿಷಯವೆಂದರೆ ಆ ಕಾಲದ ಜನರಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಇಂದಿನ ಜನರ ಬದುಕನ್ನೂ ಸರಳಗೊಳಿಸಲು ಸಹಾಯ ಮಾಡುತ್ತಿದೆ. ಈ ನೀತಿಗಳಲ್ಲಿ ಒಬ್ಬ ವ್ಯಕ್ತಿ ಬೇಗನೆ ಯಶಸ್ಸು ಮತ್ತು ಉನ್ನತ ಸ್ಥಾನ ಗಳಿಸಲು ಸಹಾಯ ಮಾಡುವ ಕೆಲವನ್ನು ತಿಳಿದುಕೊಳ್ಳೋಣ.
 

ಚಾಣಕ್ಯ ನೀತಿ: ಬದುಕಿನ ಪಾಠಗಳು

ಬೇಗ ಮಲಗಬೇಕು: ಚಾಣಕ್ಯರ ಪ್ರಕಾರ, ತಡವಾಗಿ ಮಲಗುವವರು ಇತರರಿಗಿಂತ ಹಿಂದುಳಿಯುತ್ತಾರೆ. ನೀವು ಬದುಕಿನಲ್ಲಿ ಯಶಸ್ಸು ಗಳಿಸಬೇಕೆಂದರೆ ತಡವಾಗಿ ಮಲಗುವ ಅಭ್ಯಾಸ ಬಿಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕೂ ಮುನ್ನ ಎದ್ದೇಳಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಗುರಿ ಸಾಧಿಸಿದರೆ, ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಗೆಲುವು ನಿಶ್ಚಿತ.

Tap to resize

ಚಾಣಕ್ಯ ನೀತಿ

ಕಷ್ಟಪಡಲು ಹಿಂಜರಿಯಬೇಡಿ: ಯಾರೇ ಆಗಲಿ ಕಷ್ಟಪಡದೆ ಯಶಸ್ಸು ಗಳಿಸಲಾರರು. ಬದುಕಿನಲ್ಲಿ ಗೆಲ್ಲಬೇಕೆಂದರೆ ಶ್ರಮಿಸಲೇಬೇಕು. ಇದಕ್ಕೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ಚಾಣಕ್ಯರ ಪ್ರಕಾರ, ಕಷ್ಟಪಡಲು ಹೆದರುವವರು ಎಂದಿಗೂ ಯಶಸ್ಸು ಗಳಿಸಲಾರರು. ಫಲಾಪೇಕ್ಷೆಯಿಲ್ಲದೆ ಪೂರ್ಣ ಶ್ರಮ, ಶ್ರದ್ಧೆಯಿಂದ ದುಡಿದರೆ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ.

ದುಂದು ವೆಚ್ಚ ಬೇಡ: ಚಾಣಕ್ಯರ ಪ್ರಕಾರ, ಬದುಕಿನಲ್ಲಿ ಹಣ ಗಳಿಸಬೇಕು, ಯಶಸ್ಸು ಸಾಧಿಸಬೇಕು ಎಂದರೆ ದುಂದು ವೆಚ್ಚ ಬಿಡಬೇಕು. ಅನಗತ್ಯವಾಗಿ ಹಣ ಖರ್ಚು ಮಾಡುವ, ಹಂಚುವ, ಯೋಚಿಸದೆ ಖರ್ಚು ಮಾಡುವವರಿಗೆ ಲಕ್ಷ್ಮಿ ಕೃಪೆ ಇರಲ್ಲ. ಲಕ್ಷ ಲಕ್ಷ ಗಳಿಸಿದರೂ ಶ್ರೀಮಂತರಾಗಲಾರರು. ನೀವು ಶ್ರೀಮಂತರಾಗಬೇಕೆಂದರೆ ವೃಥಾ ಖರ್ಚು ಕಡಿಮೆ ಮಾಡಿಕೊಳ್ಳಿ. 

 ಗುರಿಯನ್ನು ಯಾರಿಗೂ ಹೇಳಬೇಡಿ: ನಿಮ್ಮ ಕೆಲಸ ಆಗಬೇಕು, ಯಶಸ್ಸು ಗಳಿಸಬೇಕು ಎಂದರೆ ಗುರಿ ತಲುಪುವವರೆಗೂ ಯಾರಿಗೂ ಹೇಳಬೇಡಿ ಎನ್ನುತ್ತಾರೆ ಚಾಣಕ್ಯರು. ನಿಮ್ಮ ಗುರಿ, ಯೋಜನೆಗಳನ್ನು ಇತರರ ಜೊತೆ ಹಂಚಿಕೊಂಡರೆ ಅದರ ಮೇಲೆ ನೆಗೆಟಿವ್‌ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಗುರಿ ಸಾಧಿಸುವಾಗ ಇತರರ ಅಸೂಯೆ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಅಹಂಕಾರ ಬೇಡ : ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗಬೇಕೆಂದರೆ ಅಹಂಕಾರ ಬಿಡಬೇಕು. ಗರ್ವಪಡುವವರು ಎಂದಿಗೂ ಬೆಳೆಯಲಾರರು. ಅಹಂಕಾರ ಮನುಷ್ಯನ ಶತ್ರು. ಏಕೆಂದರೆ ಮನಸ್ಸಿನಲ್ಲಿ ಅಹಂಕಾರ ಬಂದರೆ ಈ ಜಗತ್ತೇ ತನ್ನ ಮುಂದೆ ಏನೂ ಅಲ್ಲ ಎಂದು ಅನಿಸಲು ಶುರುವಾಗುತ್ತದೆ. ಇಲ್ಲಿಂದಲೇ ಅವನ ಪ್ರಗತಿಗೆ ಅಡ್ಡಿ ಆರಂಭವಾಗುತ್ತದೆ. ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗಲು ಅಹಂಕಾರ ಬಿಡುವುದು ಮುಖ್ಯ ಎನ್ನುತ್ತಾರೆ ಚಾಣಕ್ಯರು.

Latest Videos

click me!