ನೈನಿತಾಲ್‌ನಲ್ಲಿ 17 ವರ್ಷದ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ 19ಕ್ಕೂ ಹೆಚ್ಚು ಯುವಕರಿಗೆ HIV ಸೋಂಕು ತಗುಲಿದೆ. ಹುಡುಗಿಗೆ ಡ್ರಗ್ಸ್ ಸೇವನೆ ಚಟ ಇದ್ದು, ಹಣಕ್ಕಾಗಿ ಹಲವರೊಂದಿಗೆ ದೈಹಿಕ ಸಂಬಂಧ ಹೊಂದುತ್ತಿದ್ದು, ಏಡ್ಸ್ ಹರಡಿಸಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ನೈನಿತಾಲ್ (ಅ.31): ಉತ್ತರಾಖಂಡದ ನೈನಿತಾಲ್‌ನಲ್ಲಿ ಆತಂಕಕಾರಿ ಘಟನೆ ನಡೆದಿದೆ. 17 ವರ್ಷದ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ 19ಕ್ಕೂ ಹೆಚ್ಚು ಯುವಕರಿಗೆ HIV ಸೋಂಕು ತಗುಲಿದೆ. ವರದಿಗಳ ಪ್ರಕಾರ, ಹುಡುಗಿಗೆ ಡ್ರಗ್ಸ್, ಹೆರಾಯಿನ್ ಸೇವನೆ ಚಟ ಇದ್ದು, ಹಣಕ್ಕಾಗಿ ಯುವಕರ ಜೊತೆ ಸಂಬಂಧ ಹೊಂದಿದ್ದಳು ಎಂಬುದು ತಿಳಿದುಬಂದಿದೆ.
ಈ ಬಗ್ಗೆ ನೈನಿತಾಲ್ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಬಾಲಕಿಯಿಂದ ನಡೆದಿರುವ ಆತಂಕಕಾರಿ ಘಟನೆಯನ್ನು ತಿಳಿಸಿದ್ದಾರೆ. ಹುಡುಗಿಗೆ ಕೌನ್ಸೆಲಿಂಗ್ ಮತ್ತು ನೆರವು ನೀಡಲಾಗುತ್ತಿದೆ. ಹುಡುಗಿಯ ಚಟ ಬಿಡಿಸಲು ವೈದ್ಯಕೀಯ ತಂಡದಿಂದ ಪ್ರಯತ್ನಿಸಲಾಗುತ್ತಿದೆ.
ಯುವಕರಿಗೆ HIV ಇರುವುದು ಹೇಗೆ ಗೊತ್ತಾಯಿತು?
ಕಾಲೇಜುಗಳಲ್ಲಿ ಓದುತ್ತಿರುವ ಯುವಕರು ದೈನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೂ ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಹೆಚ್ಚಾಗಿಯೇ ಸುಸ್ತಾಗಿ, ಬೇಗನೇ ಅಸ್ವಸ್ಥತೆಗೆ ಒಳಗಾಗುತ್ತಿದ್ದರು. ಹೀಗೆ ಯುವಕರು ಅಸ್ವಸ್ಥರಾದಾಗ ರಾಮದತ್ ಜೋಶಿ ಜಂಟಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗ ಅವರಿಗೆ HIV ಪಾಸಿಟಿವ್ ಇದೆ ಎಂಬುದು ತಿಳಿದುಬಂದಿದೆ. ಇದಾದ ನಂತರ ತಪಾಸಣೆಗೆ ಒಳಗಾದ ಯುವಕನ ರೀತಿಯಲ್ಲಿಯೇ ಬಳಲುತ್ತಿದ್ದ ಎಲ್ಲ ಸ್ನೇಹಿತರು ಹಾಗೂ ಒಂದೇ ಹುಡುಗಿಯ ಜೊತೆ ಸಂಬಂಧ ಹೊಂದಿದ್ದ ಎಲ್ಲ ಯುವಕರೂ ಹೆಚ್‌ಐವಿ ತಪಾಸಣೆಗೆ ಒಳಗಾಗಿದ್ದಾರೆ. ಆಗ ಎಲ್ಲರಿಗೂ ಏಡ್ಸ್ ಸೋಂಕು ಇರುವುದು ದೃಢಪಟ್ಟಿದೆ. ಇದಕ್ಕೆ ಇವರೆಲ್ಲರೂ ಒಂದು ಹುಡುಗಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದೇ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಹುಡುಗಿಯನ್ನು ಪರೀಕ್ಷಿಸಿದಾಗ ಆಕೆಗೂ HIV ಇರುವುದು ದೃಢಪಟ್ಟಿದೆ.
ಇದನ್ನೂ ಓದಿ: ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್
ಹಣಕ್ಕಾಗಿ ಯುವಕರ ಜೊತೆ ಸಂಬಂಧ: ಬಾಲಕಿ ಹಲವು ದಿನಗಳಿಂದ ಡ್ರಗ್ಸ್ ಸೇವನೆ ಚಟಕ್ಕೆ ಅಡಿಕ್ಟ್ ಆಗಿದ್ದಾರೆ. ಆದರೆ, ಡ್ರಗ್ಸ್ ಖರೀದಿಗೆ ಹಣ ಹೊಂದಿಸಲು ಹುಡುಗಿ. ಹಲವು ಯುವಕರ ಜೊತೆ ದೈಹಿಕ ಸಂಬಂಧವನ್ನು ಹೊಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ, ದೈಹಿಕ ಸಂಬಂಧ ಹೊಂದುವ ಮುನ್ನ ಈ ಹುಡುಗಿಗೆ HIV ಇದೆ ಎಂಬುದು ಯುವಕರಿಗೆ ತಿಳಿದಿರಲಿಲ್ಲ. ನೈನಿತಾಲ್‌ನ ಮುಖ್ಯ ವೈದ್ಯಾಧಿಕಾರಿ ಹರೀಶ್ ಚಂದ್ರ ಪಂತ್ ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ವರ್ಷಕ್ಕೆ 20 HIV ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಈ ವರ್ಷ ಕೇವಲ 5 ತಿಂಗಳಲ್ಲಿ 19 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.