ನ.1ರಿಂದ UPI ಪಾವತಿಯಲ್ಲಿ 2 ಬದಲಾವಣೆ; ಗೂಗಲ್ ಪೇ, ಫೋನ್‌ಪೇ,ಪೇಟಿಎಂ ಬಳಕೆದಾರರೇ ಗಮನಿಸಿ!

By Chethan KumarFirst Published Oct 31, 2024, 2:41 PM IST
Highlights

ನವೆಂಬರ್ 1 ರಿಂದ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಯಾಗುತ್ತಿದೆ. ಆರ್‌ಬಿಐ ಹಾಗೂ NPCI ಪ್ರಮುಖವಾಗಿ 2 ಬದಲಾವಣೆ ಮಾಡಿದೆ. ಇದು ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ಯುಪಿಐ ಪಾವತಿ ಬಳಕೆದಾರರು ಈ ಬದಲಾವಣೆ ಗಮನಿಸಿ.

ನವದೆಹಲಿ(ಅ.31) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು ಆಗಿದೆ. ನವೆಂಬರ್ 1 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ. ಈ ಪೈಕಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಆರ್‌ಬಿಐ ಹಾಗೂ NPCI ಮಹತ್ವದ 2 ಬದಲಾವಣೆ ಮಾಡಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ ಬದಲಾವಣೆ ಮಾಡಲಾಗಿದೆ. ನವೆಂಬರ್ 1, 2024ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದೆ. ಈ ಮಹತ್ವದ ಎರಡು ಬದಲಾವಣೆ ಎಂದರೆ ಯುಪಿಐ ವಹಿವಾಟು ಮಿತಿ ಹೆಚ್ಚಳ ಹಾಗೂ ಅಟೋ ಟಾಪ್ ಅಪ್ ಕೂಡ ಜಾರಿ ಮಾಡಲಾಗಿದೆ. 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಇದೀಗ ಯುಪಿಐನಲ್ಲಿ ಈ ಬದಲಾವಣೆ ತಂದಿದೆ. ಎರಡು ಬದಲಾವಣೆ ಯುಪಿಐ ಲೈಟ್‌ಗೆ ಅನ್ವಯವಾಗಲಿದೆ. ಯುಪಿಐ ಲೈಟ್ ಸಣ್ಣ ವಹಿವಾಟು, ಪಾವತಿ ನಡೆಸಲು ಅನುಮತಿಸುತ್ತದೆ. ಯುಪಿಐ ಲೈಟ್ ಬಳಕೆ ಮಾಡುವ ಬಳಕೆದಾರರು ಹೆಚ್ಚಿನ ಸಮಯ ವ್ಯರ್ಥ ಮಾಡದೇ ಪಾವತಿ ಮಾಡಲು ಸಾಧ್ಯವಿದೆ. ಉದಾಹರಣೆಗೆ ಯಾವುದೇ ಕಿರಾಣಿ ಅಂಗಡಿ, ಅಥವಾ ಇತರ ಪಾವತಿಯಲ್ಲಿ 1 ರೂಪಾಯಿ, 5 ರೂಪಾಯಿ ಸೇರಿದಂತೆ ಸಣ್ಣ ಸಣ್ಣ ಮೊತ್ತದ ಪಾವತಿ ಮಾಡಲು ಪದೇ ಪದೆ ಪಿನ್ ಬಳಕೆ ಮಾಡುವ ಪ್ರಮೇಯ ಇಲ್ಲಿಲ್ಲ. ಸಣ್ಣ ಮೊತ್ತದ ಟ್ರಾನ್ಸಾಕ್ಷನ್‌ ಸುಲಭವಾಗಿ ಯುಪಿಐ ಲೈಟ್ ಮೂಲಕ ಮಾಡಲು ಸಾಧ್ಯವಿದೆ. ಆದರೆ ಪ್ರತಿ ದಿನ ಇಂತಿಷ್ಟೇ ವಹಿವಾಟು, ಇಂತಿಷ್ಚೇ ಮೊತ್ತದ ಮಿತಿ ಇತ್ತು. ಈ ಮಿತಿಯನ್ನು ಹೆಚ್ಚಿಸಲಾಗಿದೆ.

Latest Videos

ಹಲವರಿಗೆ ದೀಪಾವಳಿ ಗಿಫ್ಟ್ ನೀಡಿದ ಮುಕೇಶ್ ಅಂಬಾನಿಗೆ RBIನಿಂದ ಬಂತು ಅತೀ ದೊಡ್ಡ ಉಡುಗೊರೆ!

ಸದ್ಯ ಯುಪಿಐ ಲೈಟ್‌ನಲ್ಲಿ ಗರಿಷ್ಠ ಎಂದರೆ ಒಮ್ಮೆ 500 ರೂಪಾಯಿ ವಹಿವಾಟು ನಡೆಸಬಹುದು. ಅಂದರೆ ಯಾವುದೇ ಪಾವತಿ ಮಾಡಬೇಕಿದ್ದರೆ ಗರಿಷ್ಠ 500 ರೂಪಾಯಿವರೆಗೆ ಮಾತ್ರ ಯುಪಿಐ ಲೈಟ್ ಮೂಲಕ ಮಾಡಬಹದು. ಇನ್ನು ಯುಪಿಐ ವ್ಯಾಲೆಟ್ ಬ್ಯಾಲೆನ್ಸ್ ಗರಿಷ್ಠ 2,000 ರೂಪಾಯಿ. ಇದಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇಟ್ಟುಕೊಳ್ಳಲು ಯುಪಿಐ ಲೈಟ್‌ನಲ್ಲಿ ಅವಕಾಶವಿರಲಿಲ್ಲ. ಆದರೆ ಹೊಸ ನಿಯಮದ ಪ್ರಕಾರ ಪ್ರತಿ ವಹಿವಾಟನ್ನು 500 ರೂಪಾಯಿಯಿಂದ 1,000 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನು ವ್ಯಾಲೆಟ್ ಬ್ಯಾಲೆನ್ಸ್‌ನ್ನು 2,000 ರೂಪಾಯಿಯಿಂದ 5,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇದರ ಜೊತೆಗೆ ಎರಡನೇ ಬದಲಾವಣೆ ಎಂದರೆ ಯುಪಿಐ ಲೈಟ್‌ನಲ್ಲಿ ಆಟೋ ರಿಟಾರ್ಜ್ ಆಯ್ಕೆಯೂ ಲಭ್ಯವಾಗಿದೆ. ಈ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಯುಪಿಐ ವ್ಯಾಲೆಟ್ ನಿಗಧಿತ ಬ್ಯಾಲೆನ್ಸ್‌ಗಿಂತ ಕಡಿಮೆಯಾದರೆ ಆಟೋಮ್ಯಾಟಿಕ್ ಆಗಿ ಖಾತೆಯಿಂದ ಟಾಪ್ ಅಪ್ ಮಾಡಿಕೊಳ್ಳಲಿದೆ. ಹೀಗಾಗಿ ಯಾವುದೇ ವಹಿವಾಟನ್ನು ಅಡೆ ತಡೆ ಇಲ್ಲದೆ ನಡೆಸಲು ಸಾಧ್ಯವಾಗುತ್ತದೆ. ಪಾವತಿ ವೇಳೆ ಬ್ಯಾಲೆನ್ಸ್ ಲೋ ಅನ್ನೋ ಪ್ರಮೇಯ ಬರುವುದಿಲ್ಲ. ಇಷ್ಟೇ ಅಲ್ಲ ಬ್ಯಾಲೆನ್ಸ್ ಟಾಪ್ ಮಾಡಿ ಮತ್ತೆ ಪಾವತಿ ಮಾಡುವ ಸಂಕಷ್ಟ ಎದುರಾಗುವುದಿಲ್ಲ. 

ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ವಿವಿಧ ಯುಪಿಐ ಪಾವತಿ ಆ್ಯಪ್ ಬಳಕೆ ಮಾಡುವ ಗ್ರಾಹಕರಿಗೆ ಅನ್ವಯವಾಗಲಿದೆ. ಯಾರೆಲ್ಲಾ ಈ ಯುಪಿಐ ಆ್ಯಪ್‌ದಾರರ ಲೈಟ್ ಪಾವತಿ ವ್ಯವಸ್ಥೆ ಬಳಕೆ ಮಾಡುತ್ತೀದ್ದೀರೋ ಅವರೆಲ್ಲರಿಗೂ ಹೊಸ ನಿಯಮದಿಂದ ಪ್ರಯೋಜನವಾಗಲಿದೆ. ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಅತೀ ಹೆಚ್ಚು ಬಳಕೆಯಾಗುತ್ತಿದೆ. ನಗದು ವಹಿವಾಟುಗಳ ಪ್ರಮಾಣ ಕಡಿಮೆಯಾಗಿದೆ. ಯುಪಿಐ ಪಾವತಿ ಸುರಕ್ಷತೆಗೂ ಆರ್‌ಬಿಐ ಹಾಗೂ NPCI ಹಲವು ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಬಳಕೆದಾರರು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಪ್ರತಿ ದಿನ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿನ ಆಗುತ್ತಿರುವ ವಂಚನೆ ಪ್ರಕರಣಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಲಾಗಿದೆ. 

ಭಾರತದಲ್ಲಿ ಇನ್ಮುಂದೆ ಇರಲ್ಲ ನಗದು ಹಣ, ಮಹತ್ವದ ಸುಳಿವು ಕೊಟ್ಟ ಆರ್‌ಬಿಐ ಗವರ್ನರ್!
 

click me!